108 ಸಂಕಷ್ಟ | ಅಂಬುಲೆನ್ಸ್‌ ವಾಹನ ಚಾಲಕರ ಸಂಕಷ್ಟ ಏನು ? |

March 27, 2022
8:47 AM

ರಾಜ್ಯದಲ್ಲಿನ ಎಲ್ಲಾ ಗ್ರಾಮೀಣ ಭಾಗ ಸೇರಿದಂತೆ ನಗರಗಳಲ್ಲಿ ತುರ್ತು ಆರೋಗ್ಯ ಸೇವೆಗಾಗಿಯೇ ಇರುವ 108 ವಾಹನದ ಚಾಲಕರು  ಹಾಗೂ ಉದ್ಯೋಗಿಗಳು “108” ಸಂಕಷ್ಟ ಅನುಭವಿಸುತ್ತಾರೆ. ಕಳೆದ ಕೆಲವು ತಿಂಗಳಿಂದ ಸರಿಯಾಗಿ ವೇತನ ತಲುಪುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

Advertisement
Advertisement
Advertisement

ಹೆಸರು ಹೇಳಲಿಚ್ಚಿಸದ 108 ಅಂಬುಲೆನ್ಸ್‌ ಸೇವೆಯ ಉದ್ಯೋಗಿ ತಮ್ಮ ಸಂಕಟವನ್ನು ತೆರೆದಿಟ್ಟಿದ್ದಾರೆ.  ಕಳೆದ ಮೂರು ತಿಂಗಳಿನಿಂದ ನಮಗೆ ಸಂಬಳ ಆಗಿರಲಿಲ್ಲ , ಆದರೆ ಮಾರ್ಚ್ ತಿಂಗಳ ಸಂಬಳ ಮಾತ್ರ ನೀಡಲಾಗಿದೆ. ಉಳಿದ ಯಾವುದೇ ಭತ್ಯೆಗಳು ಲಭ್ಯವಾಗಿಲ್ಲ. ಇದು ನಮ್ಮ ಅಸಹಾಯಕತೆ ಎಂದು ಭಾವಿಸಿದರೆ ತಪ್ಪಾಗಲಾರದು ಎನ್ನುತ್ತಾರೆ.

Advertisement

ನಾವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು ಮತ್ತು ಅತಿ ತುರ್ತು ಆರೋಗ್ಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಪ್ರಾಣ ರಕ್ಷಕ ಸೈನಿಕರು ಈ ಎಲ್ಲಾ ವಿಚಾರಗಳು ಸರ್ಕಾರಕ್ಕೂ ಗೊತ್ತಿದೆ ಮತ್ತು ಸಂಬಂದಪಟ್ಟ ಕಂಪನಿಯ ಅಧಿಕಾರಿಗಳಿಗೂ ಹಾಗೂ ಇನ್ನಿತರ ಎಲ್ಲಾ ಹಿರಿಯರಿಗೂ ಗೊತ್ತಿದೆ ಆದರೆ ಪ್ರತಿ ತಿಂಗಳು ಸಂಬಳದ ಸಮಯದಲ್ಲಿ ಅಂತ್ಯದಲ್ಲಿ ಮಾತ್ರ ಈ ರೀತಿಯ ದಿವ್ಯ ನಿರ್ಲಕ್ಷ್ಯವನ್ನು ನಾವು ಹೇಗೆ ಜೀರ್ಣಿಸಿಕೊಳ್ಳಬೇಕು ?? ಪ್ರತಿ ತಿಂಗಳು ಇದೆ ರೀತಿಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ?? ನಾವು ಬೀಕ್ಷೆ ಬೇಡುತ್ತಿಲ್ಲ ಎನ್ನುವುದು ಸತ್ಯವಲ್ಲವೇ?. ರಾಜ್ಯದ ಜನತೆಗೆ ವಾಸ್ತವ ಸಂಗತಿ ತಿಳಿದಿಲ್ಲ ನಾವು 11,600 ರೂಪಾಯಿ ಸಂಬಳ ಪಡೆಯುತ್ತಿದ್ದೇವೆ ಎನ್ನುವುದು ಅನೇಕ ಜನರಿಗೆ ಗೊತ್ತಿಲ್ಲ. ಆದರೆ ನಮ್ಮವರಿಗೆ ನಮ್ಮನ್ನ ಆಳಲು ಹೊರಟವರಿಗೆ ತಿಳಿದಿದೆಯಲ್ಲ ಕೇವಲ ಕನಿಷ್ಠ ಸಂಬಳ ಪಡೆದು ತಿಂಗಳ ಸಂಬಳದಲ್ಲಿ ಜೀವನ ನಿರ್ವಹಣೆಗೆ ಹರಸಹಾಸ ಪಡುವ ನಾವುಗಳು ಗಾಯದ ಮೇಲೆ ಬರೆ ಎಳೆದಂತೆ ತಿಂಗಳು ಮುಗಿದರೂ ಸಂಬಳವಿಲ್ಲದೆ ಹೇಗೆ ಬದುಕುವುದು??.

ಪ್ರತಿ ತಿಂಗಳು ಇದೆ ರೀತಿ ಆದರೆ ನಮ್ಮ ಜೀವನದ ಗತಿ ಎನು? ನಮ್ಮನ್ನೆ ನಂಬಿರುವವರ ಗತಿ ಎನು? ಇದೆಲ್ಲವನ್ನು ಗಮನಿಸಿ ಸಹಿಸಿಕೊಂಡು ಮೌನವಾಗಿದ್ದರೂ ಕಷ್ಟ ,ನ್ಯಾಯ ಸಮ್ಮತವಾಗಿ ಪ್ರಶ್ನಿಸಿದರೂ ಕಷ್ಟ…!. ನಮ್ಮ ಅಂತರಾಳದ ದ್ವನಿಯಾಗಿ ನಮ್ಮ ಪ್ರತಿನಿಧಿಗಳು ಇದ್ದಾರೆ ಎನ್ನುವ ಭಾವ ನಮ್ಮಲ್ಲಿದೆ ಮತ್ತು ಆ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸ ಅವರದ್ದೆ ಆಗಿದೆ. ಆದರೆ ಇದೀಗ ಅವರೇನು ಮಾಡುತ್ತಿದ್ದಾರೆ ?

Advertisement

ಅಂಬ್ಯುಲೆನ್ಸ್ ನಿಲ್ಲಿಸುವುದು ಸಾರ್ವಜನಿಕರಿಗೆ ತೊಂದರೆ ಮಾಡುವುದು ಎಷ್ಟು ? ಅದರ ಬದಲು ಕ್ಲೋಸಿಂಗ್ ನಿಲ್ಲಿಸುವ ಮೂಲಕ ನಾವು ಅಂತರ್ ಪ್ರತಿಭಟನೆ ಮಾಡಬಹುದಲ್ಲವೇ ?

ಸರ್ಕಾರಗಳು, ಗುತ್ತಿಗೆ ವಹಿಸಿಕೊಂಡ ಕಂಪನಿಗಳು ಸೂಕ್ತ ಸಮಯದಲ್ಲಿ ವೇತನ ನೀಡಬೇಕು ಎನ್ನುವುದು  ಈ ಸಿಬಂದಿಗಳ ಒತ್ತಾಯ. ಈ ಬಗ್ಗೆ ಈಗಾಗಲೇ ಸಾಕಷ್ಟು ಒತ್ತಾಯಗಳು ನಡೆದರೂ ಪ್ರಯೋಜನವಾಗಿಲ್ಲ, ಸೇವೆಯ ಕಾರಣಕ್ಕೆ ಈಗ 108 ನಿಲ್ಲಿಸಿ ಪ್ರತಿಭಟನೆ ನಡೆಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror