ಡಿಜಿಟಲ್ ತಂತ್ರಜ್ಞಾನ ಮತ್ತು ಬೆಳೆ ವಿಜ್ಞಾನದ ಪ್ರಗತಿ ಸೇರಿದಂತೆ ರೈತರ ಆದಾಯ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಏಳು ಯೋಜನೆಗಳಿಗೆ ₹13,966 ಕೋಟಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಡಾ. ಎ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೃಷಿ ಅಭಿವೃದ್ಧಿ ಹಾಗೂ ರೈತರ ಆದಾಯವನ್ನು ಗಣನೀಯವಾಗಿ ಏರಿಕೆ ಮಾಡುವ ಉದ್ದೇಶದಿಂದ ಈ ಹೂಡಿಕೆಯನ್ನು ಮಾಡಲಾಗುತ್ತಿದೆ.ಕೃಷಿ ಸಂಶೋಧನೆ, ತೋಟಗಾರಿಕೆ, ಹೈನುಗಾರಿಕೆ, ಸುಸ್ಥಿರ ಅಭಿವೃದ್ಧಿ, ಬೆಳೆಗಳ ತಳಿ ಅಭಿವೃದ್ಧಿ, ಹೊಸ ತಂತ್ರಜ್ಞಾನಗಳ ಸಮರ್ಪಕ ಬಳಕೆ ಮುಂತಾದ ಯೋಜನೆಗಳು ಇದರಲ್ಲಿ ಸೇರಿವೆ.
ಡಿಜಿಟಲ್ ಕೃಷಿ ಮಿಷನ್ ಗಾಗಿ ₹2,817 ಕೋಟಿ ಧನಸಹಾಯ ನೀಡಲಾಗುವುದು.ಡಿಜಿಟಲ್ ಕೃಷಿ ಯೋಜನೆಯಲ್ಲಿ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಕೃಷಿಗಾರಿಕೆಗೆ ಹೇಗೆ ಬಳಸಬಹುದು, ಆ ಮೂಲಕ ಕೃಷಿ ಉತ್ಪನ್ನಶೀಲತೆ ಹೇಗೆ ಹೆಚ್ಚಿಸುವುದು ಇತ್ಯಾದಿಗೆ ಇದು ನೆರವಾಗಲಿದೆ. ಕೃಷಿಕರ ನೊಂದಣಿ, ಗ್ರಾಮ ಜಮೀನು ನಕ್ಷೆಗಳ ನೊಂದಣಿ, ಬಿತ್ತನೆಗೊಂಡ ಬೆಳೆಗಳ ನೊಂದಣಿ, ಬರ ಪರಿಸ್ಥಿತಿ ಅವಲೋಕನೆ, ಪ್ರವಾಹ ಪರಿಸ್ಥಿತಿ ಅವಲೋಕನ, ಹವಾಮಾನ ವರದಿ, ಅಂತರ್ಜಲ ಸ್ಥಿತಿ, ಬೆಳೆ ಇಳುವರಿ ಇತ್ಯಾದಿ ಅನೇಕ ಸಂಗತಿಗಳಿಗೆ ಹೊಸ ತಂತ್ರಜ್ಞಾನವು ನೆರವಾಗಲಿದೆ.
ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಬೆಳೆ ವಿಜ್ಞಾನಕ್ಕೆ ₹3,979 ಕೋಟಿ ಮಂಜೂರು ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕ 2047 ರ ವೇಳೆಗೆ ಹವಾಮಾನ ಸವಾಲುಗಳಿಗೆ ರೈತರನ್ನು ಸಿದ್ಧಪಡಿಸುವುದು ಮತ್ತು ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಸಸ್ಯ ಆನುವಂಶಿಕ ಸಂಪನ್ಮೂಲಗಳ ಸಂಶೋಧನೆ ಮತ್ತು ಅಭಿವೃದ್ಧಿ, ಬೆಳೆ ಸುಧಾರಣೆ ಮತ್ತು ಕೀಟಗಳು ಮತ್ತು ಪರಾಗಸ್ಪರ್ಶಕಗಳ ಮೇಲಿನ ಅಧ್ಯಯನಗಳನ್ನು ಒಳಗೊಂಡಿದೆ ಹಾಗೂ ಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವುದು, ಬೆಳೆಯ ಗುಣಮಟ್ಟ ಹೆಚ್ಚಿಸಲು ತಳಿ ಸಂಪನ್ಮೂಲದ ಸದ್ಬಳಕೆ ಮಾಡುವುದು, ಬೇಳೆ ಕಾಳು, ಎಣ್ಣಬೀಜ ಮತ್ತು ವಾಣಿಜ್ಯ ಬೆಳೆಗಳ ತಳಿ ಅಭಿವೃದ್ಧಿ, ಕೀಟಗಳು, ಮೈಕ್ರೋಬ್ಗಳು, ಪರಾಗ ಕರ್ತರು ಮುಂತಾದವುಗಳ ಮೇಲೆ ಸಂಶೋಧನೆ ನಡೆಸಲಾಗುವುದು.
₹ 2,291 ಕೋಟಿ ರೂಪಾಯಿ ಮೂಲಕ ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲಾಗುತ್ತಿದೆ. ಈ ಯೋಜನೆಯು ಹೊಸ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಒಳಗೊಂಡಿರುತ್ತದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಡಿಯಲ್ಲಿ ಕೃಷಿ ಶಿಕ್ಷಣ, ಕೃಷಿ ನಿರ್ವಹಣೆ, ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲು ಈ ಯೋಜನೆ ಹಾಕಲಾಗಿದೆ.
₹1,702 ಕೋಟಿ ರೂಪಾಯಿ ಮೂಲಕ ಜಾನುವಾರು ಆರೋಗ್ಯ ಮತ್ತು ಉತ್ಪಾದನೆ ಕಡೆಗೆ ಆದ್ಯತೆ ನೀಡಲಾಗಿದೆ. ಜಾನುವಾರುಗಳ ಆರೋಗ್ಯ ಪಾಲನೆ, ಹೈನುಗಾರಿಕೆ ಉತ್ಪಾದನೆ ಹೆಚ್ಚಿಸುವುದು, ಜಾನುವಾರಿನ ತಳಿ ಅಭಿವೃದ್ಧಿ, ಜಾನುವಾರುಗಳಿಗೆ ಅವಶ್ಯಕ ಪೌಷ್ಟಿಕಾಂಶ ಇತ್ಯಾದಿಯನ್ನು ದೃಢಪಡಿಸಲು ಈ ಯೋಜನೆ ಇದೆ.
ತೋಟಗಾರಿಕೆಯ ಸುಸ್ಥಿರ ಅಭಿವೃದ್ಧಿ, ಉಷ್ಣವಲಯದ ಮತ್ತು ಸಮಶೀತೋಷ್ಣ ಬೆಳೆಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳು ಸೇರಿದಂತೆ ತೋಟಗಾರಿಕಾ ಚಟುವಟಿಕೆಗಳಿಂದ ರೈತರ ಆದಾಯವನ್ನು ಹೆಚ್ಚಿಸಲು ₹ 860 ಕೋಟಿಯನ್ನು ಮೀಸಲಿಡಲಾಗಿದೆ.
ಈ ಯೋಜನೆಗಳು ಭಾರತೀಯ ಕೃಷಿಯಲ್ಲಿ ಗಮನಾರ್ಹ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಸುಸ್ಥಿರತೆ, ತಾಂತ್ರಿಕ ಏಕೀಕರಣ ಮತ್ತು ಕೃಷಿ ಸಮುದಾಯಕ್ಕೆ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
The Union Cabinet, led by Prime Minister Narendra Modi, has approved a substantial investment of ₹13,966 crore across seven new schemes aimed at significantly enhancing farmers’ livelihoods and boosting agricultural productivity.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…