ಪಿಲಿಕುಳ ಜೈವಿಕ ಉದ್ಯಾನವನವು ಪಿಲಿಕುಳ ನಿಸರ್ಗಧಾಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಉದ್ಯಾನವನವು 150 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಚಾಲ್ತಿಯಲ್ಲಿರುವ ಕಾನೂನುಗಳಿಗೆ ಅನುಸಾರವಾಗಿ ಸೆಂಟ್ರಲ್ ಝೂ ಅಥಾರಿಟಿ ಆಫ್ ಇಂಡಿಯಾವು ಪಾರ್ಕ್ ಅನ್ನು ಪ್ರಮುಖ ಮೃಗಾಲಯವೆಂದು ಗುರುತಿಸಿದೆ. ಇಲ್ಲಿ ವಿವಿಧ ಜಾತಿಯ ಪ್ರಾಣಿಗಳನ್ನು ನಾವು ನೋಡಬಹುದು. ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 15 ವರ್ಷದ ನೇತ್ರಾವತಿ ಎಂಬ ಹೆಸರಿನ ಹೆಣ್ಣು ಹುಲಿ ಮೃತಪಟ್ಟಿದೆ ಎಂದು ಪಿಲಿಕುಳ ಕೇಂದ್ರದ ನಿರ್ದೇಶಕ ಹೆಚ್. ಜೆ. ಭಂಡಾರಿ ಅವರು ತಿಳಿಸಿದ್ದಾರೆ. ಅಧಿಕಾರಗಳ ಪ್ರಕಾರ ಜೂ. 4ರಂದು ಆರು ವರ್ಷದ ಗುಂಡು ಹುಲಿ ರೇವಾ ಮತ್ತು ನೇತ್ರಾವತಿ ಮಧ್ಯೆ ನಡೆದ ಕಾದಾಟದಲ್ಲಿ ಹೆಣ್ಣು ಹುಲಿ ಗಾಯಗೊಂಡಿತ್ತು. ಈ ವೇಳೆ ಗಾಯಗೊಂಡಿದ್ದ ಹುಲಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದಾರೆ.
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…