ಸುಳ್ಯ: ಅನೇಕ ಸಮಯಗಳ ಬಳಿಕ ರಬ್ಬರ್ ಧಾರಣೆ 150 ರೂಪಾಯಿ ದಾಟಿದೆ. ಕಳೆದ ವಾರ 145 ರೂಪಾಯಿ ಆಸುಪಾಸಿನಲ್ಲಿ ಇದ್ದ ಧಾರಣೆ ಗುರುವಾರದಂದು 151 ರೂಪಾಯಿಗೆ ತಲಪಿದೆ.
ಕಳೆದ ವರ್ಷದ ಕೇರಳದಲ್ಲಿ ಉಂಟಾದ ವಾತಾವರಣದ ಪ್ರತಿಕೂಲ ಪರಿಸ್ಥಿತಿಯಿಂದ ಕೇರಳದಲ್ಲಿ ರಬ್ಬರ್ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡಿದ್ದರೆ ವಿದೇಶದಲ್ಲೂ ರಬ್ಬರ್ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಧಾರಣೆ ಏರಿಕೆಯಾಗುತ್ತಿದೆ. ಇದೀಗ ಮಳೆಗಾಲ ಆರಂಭವಾದ ಬಳಿಕ ರಬ್ಬರ್ ಗೆ ಪ್ಲಾಸ್ಟಿಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಂತರ ಟ್ಯಾಪಿಂಗ್ ಆರಂಭವಾಗುವ ಹೊತ್ತಿಗೆ ಧಾರಣೆಯಲ್ಲಿ ಇಳಿಕೆ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
2018 ರಲ್ಲಿ ವಿಶ್ವದ ಬಳಕೆಯಲ್ಲಿ ಶೇ 40 ರಷ್ಟು ರಬ್ಬರ್ ಬಳಕೆ ಇತ್ತು. ಇದೀಗ ಬಹುಪಾಲು ರಬ್ಬರ್ ಬಳಕೆ ಹೊಂದಿರುವ ಚೀನಾದ ಬಳಕೆ 2019 ರಲ್ಲಿ 3.2 ಶೇಕಡದಿಂದ 5.85 ಮಿ.ಟಿ.ಗೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಾಥಮಿಕ ಅಂದಾಜು ಪ್ರಕಾರ, ಭಾರತವು 2018 ರ ಅವಧಿಯಲ್ಲಿ 1.218 ಮೆಟ್ರಿಕ್ ಟನ್ ರಬ್ಬರ್ ಬಳಕೆ ಮಾಡಿದ್ದರೆ ಈ ವರ್ಷ ಶೇ 12.6 ರಷ್ಟು ಏರಿಕೆಯಾಗಿದೆ.
2010-12ರ ಅವಧಿಯಲ್ಲಿ ರಬ್ಬರ್ ಬೆಲೆಯಲ್ಲಿ ಗಣನೀಯ ಏರಿಕೆ ಇದೆ ಎಂದು ಈ ಹಿಂದೆ ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿ ಈಗಿನ ಧಾರಣೆ ಅದಕ್ಕೆ ಪೂರಕವಾಗುತ್ತಿದೆ. ಆಗಸ್ಟ್ 2018 ರಲ್ಲಿ ಕೇರಳದ ಪ್ರವಾಹದಿಂದಾಗಿ ಈ ಪ್ರವಾಹವು ಮಣ್ಣಿನ ಗುಣಮಟ್ಟವನ್ನು ಕುಸಿದಿದೆ. ಹೀಗಾಗಿ ಇಳುವರಿಯಲ್ಲೂ ಕೊರತೆ ಕಂಡಿದೆ. ಇದೆಲ್ಲಾ ಸದ್ಯ ಬೆಲೆ ಏರಿಕೆಗೆ ಕಾರಣವಾಗಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…