Advertisement
MIRROR FOCUS

ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು 150 ಟ್ರಕ್‌ ಅಡಿಕೆ ಸಿದ್ಧವಾಗಿದೆ..!

Share

ಬಾಂಗ್ಲಾದೇಶದಿಂದ ಭಾರತಕ್ಕೆ ಅಡಿಕೆ ರಫ್ತು ಮಾಡಲು ಕಳೆದ ಎರಡು ತಿಂಗಳಿನಿಂದ ಸಿದ್ಧತೆ ನಡೆಯುತ್ತಿದೆ. ಇದೀಗ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 150 ಕ್ಕೂ ಹೆಚ್ಚು ಲಾರಿಗಳು ಬಾಂಗ್ಲಾದೇಶದ ಬೆನಪೋಲ್‌ ಬಂದರಿನಲ್ಲಿ ನಿಂತಿವೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಭಾರತಕ್ಕೆ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿವೆ ಎನ್ನುವ ಮಾಹಿತಿ ಇದೆ.

ಈಚೆಗಷ್ಟೇ ಅಧಿವೇಶನದಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರ ಪ್ರಶ್ನೆಗೆ ವಾಣಿಜ್ಯ ಸಚಿವಾಲಯದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ  ಬಾಂಗ್ಲಾದೇಶದಿಂದ 2024-25 ನೇ ಸಾಲಿನಲ್ಲಿ 12155 ಮೆಟ್ರಿಕ್‌ ಟನ್‌ ಅಡಿಕೆ ಆಮದು ಆಗಿತ್ತು.  ಈ ವರ್ಷ ಅಂದರೆ 2025–26ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ 10,650 ಟನ್ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡಲಾಗಿದೆ ಎಂದು ಬಾಂಗ್ಲಾದೇಶದ ಬೆನಪೋಲ್ ಬಂದರಿನ ಅಧಿಕಾರಿಗಳು ಹೇಳಿದ್ದಾರೆ. ಇದೀಗ 150 ಕ್ಕೂ ಹೆಚ್ಚು ಲಾರಿಗಳು ಅಡಿಕೆಯನ್ನು ಹೊತ್ತು ಕಳೆದ ಎರಡು ತಿಂಗಳನಿಂದ ಭಾರತಕ್ಕೆ ಸಾಗಾಟಕ್ಕೆ ಕಾದು ನಿಂತಿವೆ. ಆದರೆ ಭಾರತದಿಂದ ಅಡಿಕೆ ಗುಣಮಟ್ಟದ ಬಗ್ಗೆ ಖಾತ್ರಿ ಲಭ್ಯವಾಗದ ಹಿನ್ನೆಯಲ್ಲಿ ಹಾಗೂ  ಗುಣಮಟ್ಟ ಪರಿಶೀಲನೆಯಲ್ಲಿನ ವಿಳಂಬದ ಕಾರಣದಿಂದ ಭಾರತಕ್ಕೆ ಬರಲು ತಡವಾಗಿದೆ. ಹೀಗಾಗಿ ಬಾಂಗ್ಲಾದೇಶದ ರಫ್ತುದಾರರಿಗೂ ನಷ್ಟವಾಗುತ್ತಿದೆ.  ಹೀಗಾಗಿ ಭಾರತಕ್ಕೆ ಅಡಿಕೆ ರವಾನೆ ಮಾಡುವ ಬಗ್ಗೆ ಉನ್ನತಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಬಾಂಗ್ಲಾದೇಶ ದೇಶವು ವಾರ್ಷಿಕವಾಗಿ ಸುಮಾರು 700 ಕೋಟಿ ಟನ್ ಮೌಲ್ಯದ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡುತ್ತದೆ ಎಂದು ಅಲ್ಲಿನ ದಾಖಲೆ ಹೇಳುತ್ತದೆ. ಈ ಬಾರಿ ಬಾಂಗಾದೇಶದಿಂದ  ಶೇ. 37 ರಷ್ಟು ರಫ್ತು ಏರಿಕೆಯಾಗಿತ್ತು. ಹಿಂದಿನ ವರ್ಷಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿತ್ತು. ಆದರೆ ಆಗಸ್ಟ್‌ ನಂತರ ಅಡಿಕೆ ಭಾರತಕ್ಕೆ ಬರುವುದಕ್ಕೆ ತಡೆಯಾಗಿದೆ. ಈಗ ಅಡಿಕೆ ಗುಣಮಟ್ಟದ ಮೇಲೆ ಭಾರತವೂ ನಿಯಮಗಳನ್ನು ವಿಧಿಸಿದೆ. ಹೀಗಾಗಿ ಸಮಸ್ಯೆ ಆಗಿದೆ. ಈಗ ಈ ಅಡಿಕೆ ಮತ್ತೆ ಭಾರತಕ್ಕೆ ಪ್ರವೇಶವಾಗದಂತೆ ಆಡಳಿತವು ಗಮನಹರಿಸಿದರೆ ಭಾರತದ ಅಡಿಕೆ ಧಾರಣೆ ಸ್ಥಿರತೆ ಹಾಗೂ ಏರಿಕೆ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

13 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago