ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ | 20 ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್‌ | ಲಿಸ್ಟ್‌ನಲ್ಲಿ ಯಾರಿದ್ದಾರೆ?

April 10, 2023
11:14 AM

ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟಿಸಲಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಬಹುತೇಕ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಬಿಜೆಪಿ ಸಮಯ ತೆಗೆದುಕೊಂಡು ಅಳೆದು ತೂಗಿ ನೋಡಿದೆ. ಹಲವು ಕಡೆ ಆಂತರಿಕ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿತ್ತು.  224 ಕ್ಷೇತ್ರಗಳಲ್ಲಿ 150 ರಿಂದ 175 ಸ್ಥಾನಗಳಿಗೆ ಇಂದು ಟಿಕೆಟ್ ಘೋಷಿಸುವ ಸಾಧ್ಯತೆಯಿದೆ. ರಾಜ್ಯ ಘಟಕವು ಈಗಾಗಲೇ ಪ್ರತಿ ಕ್ಷೇತ್ರಕ್ಕೆ ಎರಡರಿಂದ ಮೂರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಪಟ್ಟಿಯನ್ನು ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ಕಳುಹಿಸಿದೆ.

Advertisement
Advertisement
Advertisement
Advertisement

ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿ ಇಂದು ತನ್ನ ಮೊದಲ ಪಟ್ಟಿ ಪ್ರಕಟಿಸುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ 175 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದೆ. ಭಾನುವಾರ ಚುನಾವಣಾ ಸಮಿತಿ ಸಭೆ ನಡೆಸಿರುವ ವರಿಷ್ಠರು ಸಚಿವರು ಸೇರಿದಂತೆ 85ಕ್ಕೂ ಹೆಚ್ಚು ಹಾಲಿ ಶಾಸಕರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Advertisement

ಕರ್ನಾಟಕದಲ್ಲಿ ಗುಜರಾತ್, ಉತ್ತರ ಪ್ರದೇಶದ ಮಾದರಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಹಿಂದೇಟು ಹಾಕಿರುವ ಬಿಜೆಪಿ ಹೈಕಮಾಂಡ್‌  ಬಹುತೇಕ ಸಚಿವರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಸುಮಾರು 20 ಶಾಸಕರಿಗೆ ಟಿಕೆಟ್ ತಪ್ಪಬಹುದು ಎನ್ನಲಾಗಿದ್ದು ಸರ್ವೆ ವರದಿಗಳಲ್ಲಿ ಋಣಾತ್ಮಕ ವರದಿ ಬಂದಿರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಕೈ ಬಿಡಲಾಗುತ್ತಿದೆ.

Advertisement

ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ಹೈಕಮಾಂಡ್‌  ನಾಯಕರು ಸರಣಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡುತ್ತಿದ್ದಾರೆ.  ಈ ಬಾರಿ ಎರಡು ಡಜನ್‌ಗೂ ಹೆಚ್ಚು ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದ್ದು,  ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಚಾರಿತ್ರ್ಯ ಕಾರಣದಿಂದ ಇಮೇಜ್ ಕಳೆದುಕೊಂಡ ನಾಯಕರಿಗೆ ಗೇಟ್ ಪಾಸ್ ನೀಡಲು ಸಭೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಈ ಶಾಸಕರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಹೆಚ್ಚು ?

Advertisement

ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ – ನೆಹರೂ ಓಲೆಕಾರ್
ಮೂಡಿಗೆರೆ – ಎಂ ಪಿ ಕುಮಾರಸ್ವಾಮಿ
ಚಿತ್ರದುರ್ಗ – ಜಿ ಎಚ್ ತಿಪ್ಪಾರೆಡ್ಡಿ
ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ

ಕನಕಗಿರಿ – ಬಸವರಾಜ ದಡೇಸುಗೂರು
ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
ಅಥಣಿ – ಮಹೇಶ್ ಕುಮಟಳ್ಳಿ
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್
ರಾಯಚೂರು – ಡಾ.ಶಿವರಾಜ್ ಪಾಟೀಲ್
ಪುತ್ತೂರು – ಸಂಜೀವ್ ಮಠಂದೂರು

Advertisement

ಸುಳ್ಯ-  ಎಸ್‌ ಅಂಗಾರ

ಉಡುಪಿ – ರಘುಪತಿ ಭಟ್
ಭಟ್ಕಳ – ಸುನೀಲ್ ನಾಯ್ಕ
ಸೊರಬ – ಕುಮಾರ್ ಬಂಗಾರಪ್ಪ
ಆಳಂದ – ಸುಭಾಷ್ ಗುತ್ತೇದಾರ್
ಹೊಸದುರ್ಗ – ಗೂಳಿಹಟ್ಟಿ ಶೇಖರ್

Advertisement

ಧಾರವಾಡ – ಅಮೃತ ದೇಸಾಯಿ
ದಾವಣಗೆರೆ ಉತ್ತರ – ಎಸ್ ಎ ರವೀಂದ್ರನಾಥ್
ಕಾಪು – ಲಾಲಾಜಿ ಮೆಂಡನ್
ಚಿಕ್ಕಪೇಟೆ – ಉದಯ್ ಗರುಡಾಚಾರ್
ಎಸ್.ಎ.ರವೀಂದ್ರನಾಥ್– ದಾವಣಗೆರೆ ಉತ್ತರ (ನಿವೃತ್ತಿ ಘೋಷಣೆ)

ಲಿಂಗಣ್ಣ– ಮಾಯಕೊಂಡ
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ- ಶ್ರೀಮಂತ ಪಾಟೀಲ್
ಬೈಂದೂರು- ಸುಕುಮಾರ್ ಶೆಟ್ಟಿ

Advertisement

 


 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror