Advertisement
MIRROR FOCUS

ಹಳೆ ಬೇರು ಹೊಸ ಚಿಗುರು | ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದ 2,000 ವರ್ಷ ಹಳೆಯ ಹುಣಸೆ ಮರ | ತಜ್ಞರ ಸಲಹೆಯಂತೆ ಮರು ನೆಡಲಾದ ಮರಕ್ಕೀಗ ಜೀವಕಳೆ |

Share

ಆಧುನೀಕರಣ(Modernization) ಹೆಸರಲ್ಲಿ ಬಲಿಯಾಗುತ್ತಿರುವುದು ಹಳೇ ಕಾಲದ ನಮ್ಮ ಹಿರಿಯರು ನಮಗಾಗಿ ನೆಟ್ಟಿದ್ದ ದೊಡ್ಡ ದೊಡ್ಡ ಮರಗಳು(Big trees). ಇನ್ನು ಕೆಲವು ಬಹಳ ವರ್ಷಗಳಾದ ಕಾರಣ ತಮ್ಮ ಜೀವವನ್ನು ಕಳೆದುಕೊಳ್ಳುತ್ತವೆ. ಹಾವೇರಿ(Haveri) ಜಿಲ್ಲೆಯ ಸವಣೂರು(Savanoor) ಪಟ್ಟಣದಲ್ಲಿರುವ ದೊಡ್ಡ ಹುಣಸೆ ಮರಗಳು(Tamarind Tree) ವಿಶ್ವಪ್ರಸಿದ್ದಿ ಪಡೆದಿವೆ. ಇಲ್ಲಿನ ಕಲ್ಮಠ ಆಶ್ರಮದ(Kalmata Ashrama) ಆವರಣದಲ್ಲಿರುವ ಮರಗಳನ್ನು ಸುಮಾರು 2,000 ವರ್ಷಗಳಷ್ಟು ಹಿಂದೆ ನೆಡಲಾಗಿತ್ತು ಎಂದು ಹೇಳಲಾಗುತ್ತಿದೆ. ‘ಆಧುನಿಕ ಕಲ್ಪವೃಕ್ಷಗಳು’ ಎಂದು ಕರೆಯುವ ಇಲ್ಲಿರುವ ಮೂರು ಮರಗಳಲ್ಲಿ ಒಂದು ಗೆದ್ದಲು ಹಿಡಿದು ಮತ್ತು ಭಾರಿ ಮಳೆಯ(Rain) ಕಾರಣಗಳಿಂದ ಧರಾಶಾಹಿಯಾಗಿತ್ತು. ಆ ಬಳಿಕ ತಜ್ಞರ(Experts) ಸಲಹೆಯಂತೆ ಅದನ್ನು ಮತ್ತೆ ನೆಡಲಾಗಿತ್ತು. ಇದೀಗ ಮರದ ಕೊಂಬೆಗಳಲ್ಲಿ ಹೊಸ ಚಿಗುರು ಮೂಡಿದ್ದು, ಮರುಜೀವ ಪಡೆದುಕೊಂಡಿದೆ.

Advertisement
Advertisement
Advertisement

ಈ ಮರ ಕಳೆದ ಜುಲೈನಲ್ಲಿ ಭಾರಿ ಮಳೆ, ಗಾಳಿ ಮತ್ತು ಫಂಗಸ್‌ನಿಂದಾಗಿ ಉರುಳಿ ಬಿದ್ದಿತ್ತು. ಕಲ್ಮಠದ ಸ್ವಾಮೀಜಿ ಸೇರಿದಂತೆ ದೊಡ್ಡ ಹುಣಸೆ ಮರದ ಪ್ರಾಮುಖ್ಯತೆ ತಿಳಿದಿದ್ದ ಸವಣೂರು ಜನರು ಹಾಗು ಪರಿಸರ ಪ್ರೇಮಿಗಳು ಈ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಪುರಾತನ ಮರದ ರಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ಪರಿಸರ ಪ್ರೇಮಿಗಳು, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದರು. ಕಲ್ಮರದ ಚೆನ್ನಬಸವ ಶ್ರೀಗಳ ಮುಂದಾಳತ್ವದಲ್ಲಿ ಮರವನ್ನು ಮರುನೆಡಲು ಯೋಜನೆ ರೂಪಿಸಲಾಯಿತು. ಅದರಂತೆ ಪರಿಣಿತರ ಸಲಹೆ ಪಡೆದು ಮರ ನೆಡಲು ಕಾರ್ಯಾಚರಣೆ ನಡೆಯಿತು. ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್ ತರಿಸಿ ಮರು ನೆಡುವ ಕಾರ್ಯಾಚರಣೆಯೂ ನೆರವೇರಿತ್ತು.

Advertisement

ಮರದ ಬುಡದ ಫಂಗಸ್ ತೆಗೆದು ವಿವಿಧ ಕೊಂಬೆಗಳನ್ನು ತುಂಡರಿಸಿ ವಿವಿಧ ಔಷಧ ಲೇಪಿಸಿ ಜುಲೈ 13ರಂದು 20  ಅಡಿ ಗುಂಡಿ ತೋಡಿ ಮರು ನೆಡಲಾಗಿತ್ತು. ಈ ರೀತಿ ನೆಟ್ಟ ಮರದ ಬುಡಕ್ಕೆ ಕಾಂಪೋಸ್ಟ್ ಗೊಬ್ಬರವನ್ನೂ ಉಣಿಸಲಾಗಿತ್ತು. ಮರ ಮರುಜೀವ ಪಡೆಯಲೆಂದು ಜನರು ಪ್ರಾರ್ಥನೆ ಸಲ್ಲಿಸಿದ್ದರು. ವಿಜ್ಞಾನಿಗಳ ಶ್ರಮ, ಶ್ರೀಗಳ ಆಶೀರ್ವಾದ ಹಾಗೂ ಭಕ್ತರ ಹಾರೈಕೆಯಿಂದಾಗಿ ಇದೀಗ ಮರ ಚಿಗುರಲಾರಂಭಿಸಿದೆ. ಸುಮಾರು 3 ತಿಂಗಳು ಕಾಲ ವಿಜ್ಞಾನಿಗಳು ಹೇಳಿದಂತೆ ಮರಕ್ಕೆ ಔಷಧೋಪಚಾರ ನಡೆದಿತ್ತು.

ಮರ ಮರುನೆಡಲು ಶ್ರಮಿಸಿದ ಶ್ರಮಜೀವಿಗಳಿಗಳಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ. ಮರ ಚಿಗುರುಲಾರಂಭಿಸಿರುವ ವಿಚಾರ ತಿಳಿದು ಶಾಲಾ ಮಕ್ಕಳು, ಉಪನ್ಯಾಸಕರು, ಶಿಕ್ಷಕರು ಮಠಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. “ಸಾಕಷ್ಟು ಪ್ರಾಚೀನತೆ ಹೊಂದಿರುವ ಮರ ಧರೆಗುರುಳಿದಾಗ ದಿಕ್ಕು ತೋಚದಂತಾಗಿತ್ತು. ನಂತರ ಪರಿಸರ ಪ್ರೇಮಿಗಳು, ವಿಜ್ಞಾನಿಗಳ  ಸಮ್ಮುಖದಲ್ಲಿ ಮರ ಮರುನೆಡಲಾಗಿತ್ತು. ಈ ರೀತಿ ನೆಟ್ಟು ಮೂರು ತಿಂಗಳು ಕಾಲ ಆರೈಕೆ ಮಾಡಿದ್ದರ ಪರಿಣಾಮ ಈಗ ಮರ ಚಿಗುರಲಾರಂಭಿಸಿದೆ. ಇದು ಮನಸ್ಸಿಗೆ ಸಾಕಷ್ಟು ಸಂತಸ ತಂದಿದೆ. ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ” ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಸ್ಥಳೀಯ ಕಾಲೇಜಿನ ಪ್ರಾಚಾರ್ಯರು ಪ್ರತಿಕ್ರಿಯಿಸಿ, ‘ಶ್ರೀಕೃಷ್ಣ ಪರಮಾತ್ಮ ವಿರಾಟನಗರಕ್ಕೆ ಹೋಗುವ ಮುನ್ನ ಈ ಗಿಡ ನೆಟ್ಟಿದ್ದರು. ಈ ಮರಗಳ ಮೂಲ ದಕ್ಷಿಣ ಆಫ್ರಿಕಾ, ಸುಮಾರು ಎರಡು ಸಾವಿರ ವರ್ಷ ಪುರಾತನವಾಗಿವೆ. ಬಾಂಬುಕೇಶಿಯಾ ಎನ್ನುವ ಕುಟುಂಬಕ್ಕೆ ಸೇರಿದ ಮರಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿವೆ. ಇದರ ಎಲೆ, ಕಾಯಿ, ತೊಗಟೆಗಳನ್ನು ಔಷಧಿಗಾಗಿ ಬಳಸಲಾಗುತ್ತದೆ. ಭಕ್ತರ ಇಷ್ಟಾರ್ಥಗಳನ್ನೂ ಈ ಮರಗಳು ಈಡೇರಿಸುತ್ತವೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು.

The large tamarind trees in Savanur town of Haveri district are world famous. It is said that the trees at Kalmath Ashram here were planted around 2,000 years ago. One of the three trees here, called 'modern Kalpavrikshas', was damaged by termites and due to heavy rains. After that it was replanted as per the advice of experts. Now the branches of the tree have sprouted a new shoot and got a new life.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

9 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

12 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

13 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

4 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago