ನಾವು ಗುರಿ ತಲಿಪಿಯೇ ಸಿದ್ಧ…. ಸೋಲೆಂಬುದು ನಮಗಿಲ್ಲ, ಮುಂದಕ್ಕೆ ಹಾಕಿರುವ ಗೆಲವು ಮಾತ್ರಾ ನಮ್ಮಲ್ಲಿ…. ಇದು ಭಾರತೀಯರ ವಿಶ್ವಾಸ, ಭಾರತೀಯರ ಧೈರ್ಯ, ಹೆಮ್ಮೆಯ ನುಡಿ. ಇದಕ್ಕೆ ಸಾಕ್ಷಿ ಎಂಬಂತೆ ಚಂದ್ರಯಾನ-2 ಯಶಸ್ಸು ಕಂಡಿದ್ದರೂ ಗುರಿ ತಲಪಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೊಂದು ಚಂದ್ರಯಾನಕ್ಕೆ ಸಿದ್ಧತೆ ನಡೆಯುತ್ತಿದೆ. 2020 ರ ವೇಳೆ ಈ ಯಾನ ನಡೆಯಲಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಸತತ ಪ್ರಯತ್ನದ ಬಳಿಕವೂ ಸಂಪರ್ಕ ಸಾದ್ಯವಾಗಿಲ್ಲ. ಆದರೆ ಇದರಿಂದ ಧೈರ್ಯ , ವಿಶ್ವಾಸ ಕಳೆದುಕೊಂಡಿಲ್ಲ, ಗಗನ್ ಯಾನ್ ಇಸ್ರೋ ಮುಂದಿನ ಆದ್ಯತೆಯಾಗಿದ್ದು, 2020ರ ವೇಳೆಗೆ ಮತ್ತೊಂದು ಚಂದ್ರಯಾನ ಕೈಗೊಳ್ಳುತ್ತಿದೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಗಗನ್ ಯಾನ್ ಇಸ್ರೋ ಮುಂದಿನ ಆದ್ಯತೆಯಾಗಿದ್ದು, 2020ರ ವೇಳೆಗೆ ಮತ್ತೊಂದು ಚಂದ್ರಯಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆರ್ಬಿಟರ್ ನಲ್ಲಿ 8 ಉಪಕರಗಳಿವೆ, ಪ್ರತಿಯೊಂದೂ ಉಪಕರಣಗಳು ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆ. ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿತ್ತು. ಚಂದ್ರನ ಮೇಲ್ಮೈ ಮೇಲೆ ಇಳಿಯಲು ಕೇವಲ 2.1 ಕಿ.ಮೀ ಅಂತರವಿದ್ದಾಗ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಇಡೀ ಯೋಜನೆ ವಿಫಲವಾಯಿತು ಎಂದು ಪಾಕಿಸ್ತಾನ ಸೇರಿದಂತೆ ಅದರ ಪರ ರಾಷ್ಟ್ರಗಳು ಟೀಕಿಸಿದ್ದವು. ಆದರೆ ಅಮೆರಿಕದ ನಾಸಾ, ರಷ್ಯಾದ ಬಾಹ್ಯಾಕಾಶ ಸಂಸ್ಥೆ, ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಗಳು ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿವೆ. ಇದೀಗ ಇಸ್ರೋ ಧೈರ್ಯದಿಂದ ಇನ್ನೊಂದು ಯಾನಕ್ಕೆ ಸಿದ್ಧತೆ ನಡೆಸಿದೆ.
ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭಾರತದ ಈ ಮಹತ್ವಾಕಾಂಕ್ಷಿ ಯೋಜವೆ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಆದರೆ ಆರ್ಬಿಟರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಚಂದ್ರನ ಕುರಿತ ಮತ್ತಷ್ಟು ಮಾಹಿತಿಗಳನ್ನು ಜಗತ್ತಿಗೆ ತಿಳಿಸಲಿದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?