ಮುಂಬಯಿ: ದೇಶದ ಆರ್ಥಿಕ ಬೆಳವಣಿಗೆಯು 2021 ರ ವೇಳೆಗೆ ಚೇತರಿಸಿಕೊಳ್ಳಲಿದೆ. ಆ ಬಳಿಕ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಸೆಂಟ್ರಮ್ ಬ್ರೋಕರೇಜ್ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಹಣಕಾಸು ಸೇವೆಗಳ ಸೆಂಟ್ರಮ್ ಬ್ರೋಕರೇಜ್ ಸಂಸ್ಥೆಯ ಈ ಅಧ್ಯಯನ ವರದಿಯ ಪ್ರಕಾರ ಕಳೆದ 20 ವರ್ಷಗಳಲ್ಲಿ ಪ್ರಸ್ತುತ ಕುಸಿತವು ಅತ್ಯಂತ ತೀವ್ರವಾಗಿದೆ. ಇದರ ಪರಿಣಾಮ ಗ್ರಾಮೀಣ ಮತ್ತು ನಗರ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಇದು 2021 ರ ಮೊದಲ ಅಥವಾ ಎರಡನೇ ತ್ರೈಮಾಸಿಕದ ವೇಳೆಗೆ ಆರ್ಥಿಕ ಬೆಳವಣಿಗೆಯು ಮರುಕಳಿಸುತ್ತದೆ ಎಂದು ಹೇಳಿದೆ. ಈ ಹಿಂಜರಿತಕ್ಕೆ ನೋಟ್ ರದ್ದತಿ ಹಾಗೂ ಜಿಎಸ್‌ಟಿ ಏಕಕಾಲದಲ್ಲಿ ದೇಶವು ಎದುರಿಸಿದಾಗ ಉಂಟಾದ ಆಘಾತಗಳ ಪರಿಣಾಮವಾಗಿ ಆರ್ಥಿಕ ಹಿಂಜರಿತವುಂಟಾಗಿದೆ ಎಂದು ಬ್ರೋಕರೇಜ್ ತಿಳಿಸಿದೆ. 3 ವರ್ಷಗಳಲ್ಲಿ ಸತತ 3 ಆಘಾತಗಳನ್ನು ದೇಶವು ತಾಳಿಕೊಂಡಿತು. ಈಗ ಸರಕಾರದ ಮಧ್ಯಪ್ರವೇಶದಿಂದ ನಿಧಾನವಾಗಿ ಸರಿಯಾಗುತ್ತಿದೆ. 2021 ರ ಹಣಕಾಸು ವರ್ಷದ ಮೊದಲನೆ ಹಾಗೂ ಎರಡನೆ ತ್ರೈಮಾಸಿಕದಲ್ಲಿ ಆರ್ಥಿಕತೆಯು ಸಹಜತೆಯತ್ತ ಮರಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.