MIRROR FOCUS

2047 ಭಾರತಕ್ಕೆ ಸ್ವಾತಂತ್ರ್ಯ ದೊರಕಿ 100 ವರ್ಷ | ಮುಂದಿನ 25 ವರ್ಷಕ್ಕೆ ಈಗಲೇ ತಯಾರಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ

Share

ಒಂದು ದೇಶದ ಪ್ರಧಾನಿ(Prime Minister) ಹುದ್ದೆಗೇರುವವರಿಗೆ ದೇಶಧ ಮುಂದಿನ ಭವಿಷ್ಯದ ಬಗ್ಗೆ ದೂರಾಲೋಚನೆ ಇರಬೇಕು. ನಮ್ಮ ದೇಶದ ಪ್ರಧಾನಿ ಮೋದಿ(PM MOdi) ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. 2047 ಗಮನದಲ್ಲಿಟ್ಟುಕೊಂಡು ಇನ್ನಷ್ಟು ಕೆಲಸ ಮಾಡುವುದು ಬಾಕಿ ಇದೆ. 2024 ಚುನಾವಣೆ ಬೇರೆ, 2047 ಬೇರೆ. 2047 ಭಾರತಕ್ಕೆ(India) ಸ್ವಾತಂತ್ರ್ಯ(Freedom) ಸಿಕ್ಕಿ 100 ವರ್ಷವಾಗಲಿದೆ. ಈ ಅವಧಿಗೆ ಮಾಡಬೇಕಾದ ಕೆಲಸಗಳ ಗುರಿ ಇರಬೇಕು ಎಂದು ಹೇಳುತ್ತಾ ಮುಂದಿನ 25 ವರ್ಷಕ್ಕೆ ತಯಾರಿಯ ಬಗ್ಗೆ ಪ್ರಧಾನಿ ಮೋದಿ (Narendra Modi) ಮಾತನಾಡಿದರು.

Advertisement
ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೆಚ್ಚಿನ ಸರ್ಕಾರಗಳು ಎಲ್ಲವನ್ನು ಮಾಡಿದೆ ಎಂದುಕೊಳ್ಳುತ್ತವೆ. ಆದರೆ ನಾನು ಹಾಗೇ ಅಂದುಕೊಳ್ಳುವುದಿಲ್ಲ. ನಾನು ಮಾಡುವುದು ಇನ್ನು ಬಾಕಿ ಇದೆ. ಬಹಳಷ್ಟು ಕುಟುಂಬಗಳ ಕನಸು ನನಸು ಮಾಡಬೇಕಿದೆ. ನಾನು ಸಿಎಂ ಆಗಿದ್ದಾಗ ಚುನಾವಣೆಯಿಂದ ಸಮಸ್ಯೆಯಾಗುತ್ತಿತ್ತು. ಹಿರಿಯ ಅಧಿಕಾರಿಗಳು ಬೇರೆ ರಾಜ್ಯಗಳಿಗೂ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದರು. ಇದರಿಂದ ನನ್ನ ಕೆಲಸಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ನಾನು ಚುನಾವಣೆಗೂ ಮುನ್ನ ನೂರು ದಿನಗಳ ತಯಾರಿ ಮಾಡುತ್ತಿದ್ದೆ ಎಂದು ಹೇಳಿದರು. ಈಗ ಮುಂದಿನ 25 ವರ್ಷಕ್ಕೆ ನಾನು ತಯಾರಿ ಮಾಡಿಕೊಂಡಿದ್ದೇನೆ. ವಲಯವಾರು ವಿಶೇಷ ತಂಡಗಳನ್ನು ರಚಿಸಿದ್ದೇನೆ. ಜನರಿಂದ ಸಲಹೆ ಪಡೆದುಕೊಂಡಿದ್ದೇನೆ. 15-20 ಲಕ್ಷ ಜನರು ಸಲಹೆ ನೀಡಿದ್ದಾರೆ, ಇದನ್ನು ಡಾಕ್ಯುಮೆಂಟ್ ಮಾಡಿದ್ದೇನೆ. ಚುನಾವಣೆ ಬಳಿಕ ಕೆಲಸ ಶುರು ಮಾಡಲಿದ್ದೇನೆ. ಎಲ್ಲ ರಾಜ್ಯಗಳಲ್ಲಿ ಆಗಬೇಕಿರುವ ಕೆಲಸ ಮಾಡಬೇಕು. ಬಿಜೆಪಿ ಪ್ರಣಾಳಿಕೆ (BJP Manifesto), 25 ವರ್ಷದ ಮಿಷನ್. ಮುಂದಿನ ಐದು ವರ್ಷದ ಕೆಲಸಗಳನ್ನು ವಿಭಾಗಿಸುತ್ತೇನೆ ಎಂದರು.

ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ. ಯಾರಿಗೂ ಹೆದರುವ ಅಗತ್ಯ ಇಲ್ಲ. ಯಾರನ್ನೂ ಹೆದರಿಸಲು ಅಥವಾ ಯಾರನ್ನೂ ಕಡಿಮೆ ಮಾಡಲು ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆ ನಿರ್ಧಾರಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಚುನಾವಣೆಯನ್ನು ಲಘುವಾಗಿ ಸ್ವೀಕರಿಸಬಾರದು. ಇದು ಪ್ರಜಾಪ್ರಭುತ್ವ ಉತ್ಸವ. ಚುನಾವಣೆಯಲ್ಲಿ ನಾನು ಮಾತ್ರ ಅಲ್ಲ ಪ್ರತಿಯೊಬ್ಬ ಮತದಾರ, ಬೂತ್ ಕಾರ್ಯಕರ್ತ, ಅಭ್ಯರ್ಥಿಯೂ ಮುಖ್ಯ. ಒಬ್ಬರು ಇಲ್ಲದಿದ್ದರೂ ಚುನಾವಣೆ ನಡೆಯಲ್ಲ ಎಂದು ಮೋದಿ ಹೇಳಿದರು. ಕಳೆದ ಬಾರಿ ಅಧಿಕಾರ ಬಂದ ನೂರು ದಿನದಲ್ಲಿ 370 ರದ್ದು ಮಾಡಿತು. ತ್ರಿವಳಿ ತಲಾಕ್ ರದ್ದು ಮಾಡಲಾಯಿತು. ಬ್ಯಾಂಕ್ ಗಳ ಮರ್ಜ್ ಮಾಡಲಾಯಿತು. ಒಂದು ರಾಷ್ಟ್ರ ಒಂದು ಚುನಾವಣೆ ನಮ್ಮ ಬದ್ಧತೆ. ದೇಶದಲ್ಲಿ ಇದರ ಪರವಾಗಿ ಅನೇಕ ಜನರು ಮುಂದೆ ಬಂದಿದ್ದಾರೆ. ಅನೇಕ ಜನರು ತಮ್ಮ ಸಲಹೆಗಳನ್ನು ಸಮಿತಿಗೆ ನೀಡಿದ್ದಾರೆ. ಈ ವರದಿಯನ್ನು ಕಾರ್ಯಗತಗೊಳಿಸಲು ಸಮರ್ಥರಾದರೆ ದೇಶಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |

15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

1 hour ago

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

7 hours ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

8 hours ago

ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ

ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…

8 hours ago

ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

15 hours ago