ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿಪಿಎಲ್ ಹಾಗೂ 1.25 ಲಕ್ಷ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ಇಲ್ಲಿನ ಜನಸಂಖ್ಯೆಗೆ ಹೋಲಿಸಿದೆ ಶೇ.73 ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದೆ. ರಾಜ್ಯವು ಜೆಎಸ್ವಿ, ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶ ಪರಿಗಣಿಸಿದರೆ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇ.50ರಷ್ಟು ಇರಬೇಕಿತ್ತು. ಆದರೆ ಅದಕ್ಕೂ ಹೆಚ್ಚಿನ ಕುಟುಂಬ ಬಿಪಿಎಲ್ ಕಾರ್ಡ್ ಪಡೆದುಕೊಂಡಿದೆ.
ಈಗಾಗಲೇ ರಾಜ್ಯದಲ್ಲಿ ಸುಮಾರು 21 ಲಕ್ಷ ಕಾರ್ಡ್ ಗಳು ಅನರ್ಹಾ ಅಂತಾ ಆಗಿದ್ದು ಅಂತಹ ಕಾರ್ಡ್ ಗಳಿಗೆ ಅಕ್ಕಿ ಸಿಗ್ತಿಲ್ಲ. ಈಗಾಗಲೇ ಡಿಲೀಟ್ ಮಾಡಿದ್ದಾರೆ. ಮನೆ ಮನೆಗೂ ತೆರಳಿ ಪರಿಶೀಲನೆ ಮಾಡಿ ಅನರ್ಹರಿಂದ ಅರ್ಹರಿಗೆ ಕಾರ್ಡ್ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ 12 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ಡಿಲೀಟ್ ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

