ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ | ರೋಗ ನಿರ್ವಹಣೆ ತಪ್ಪಿದರೆ ಇಳುವರಿ ಕುಸಿತ..! – ಅಡಿಕೆ ಸಮೀಕ್ಷೆ ವರದಿ

March 12, 2026
7:04 AM
ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ ಕಾರಣಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಸಕಾಲಿಕ ನಿರ್ವಹಣೆ, ಸರಿಯಾದ ನೀರಾವರಿ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳು ಇಳುವರಿ ವೃದ್ಧಿಗೆ ಮುಖ್ಯವೆಂದು ಬೆಳೆಗಾರರ ಅನುಭವ ಹೇಳುತ್ತಿದೆ.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಡಿಕೆ ಕೃಷಿ ಇಂದು ಬಹುಮುಖ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ರೋಗಬಾಧೆಯ ಆತಂಕ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ವೈಜ್ಞಾನಿಕ ಕೃಷಿ ಪದ್ಧತಿಗಳ ಮೂಲಕ ಇಳುವರಿ ಹೆಚ್ಚಿಸಿಕೊಳ್ಳುವತ್ತ ಬೆಳೆಗಾರರು ಗಮನ ಹರಿಸುತ್ತಿದ್ದಾರೆ. ಇತ್ತೀಚಿಗೆ ಅಡಿಕೆ ಇಳುವರಿ ಬಗ್ಗೆ “ದ ರೂರಲ್‌ ಮಿರರ್.ಕಾಂ ಸಮೀಕ್ಷೆಯ ಅಂಕಿಅಂಶಗಳು ಈ ಬದಲಾವಣೆಯ ಸ್ಪಷ್ಟ ಚಿತ್ರಣ ನೀಡುತ್ತಿವೆ.

ಸುಮಾರು 113 ಬೆಳೆಗಾರರ ಪ್ರತಿಕ್ರಿಯೆಗಳ ಆಧಾರದ ಮೇಲೆ ನಡೆದ ವಿಶ್ಲೇಷಣೆಯಲ್ಲಿ, ಶೇ.85.8 ರಷ್ಟು ಮಂದಿ ‘ಎಲೆಚುಕ್ಕೆ ರೋಗ’ ಅಡಿಕೆ ತೋಟಗಳ ಅತಿ ದೊಡ್ಡ ಶತ್ರು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಹವಾಮಾನ ವೈಪರೀತ್ಯ (69.9%) ಮತ್ತು ಕೊಳೆ ರೋಗ (65.5%) ಕೂಡ ಇಳುವರಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಇದಲ್ಲದೆ ಹಳದಿ ಎಲೆ ರೋಗ (19.5%) ಮತ್ತು ಬೇರು ಹುಳು ಬಾಧೆ (10.6%) ಕೂಡ ಬೆಳೆಗಾರರ ಆತಂಕ ಹೆಚ್ಚಿಸುತ್ತಿವೆ. ವಿಶೇಷವೆಂದರೆ, ನೀರಿನ ಅಭಾವದಿಂದ ಇಳುವರಿ ಕಡಿಮೆಯಾಗಿದೆ ಎಂದು ಹೇಳಿದವರ ಪ್ರಮಾಣ ಕೇವಲ 0.9% ಮಾತ್ರವಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ರೋಗ ನಿರ್ವಹಣೆಯೇ ಅಡಿಕೆ ಕೃಷಿಯ ಪ್ರಮುಖ ಸವಾಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಯಶಸ್ವಿ ಬೆಳೆಗಾರರ ಅನುಭವ ಏನು ಹೇಳುತ್ತದೆ? : ಸವಾಲುಗಳ ನಡುವೆಯೂ ಉತ್ತಮ ಇಳುವರಿ ಪಡೆದ 34 ಬೆಳೆಗಾರರ ಅನುಭವಗಳು ಗಮನಾರ್ಹವಾಗಿವೆ. ಇವರಲ್ಲಿ

  • ಸಕಾಲಿಕ ತೋಟ ನಿರ್ವಹಣೆ (67.6%)

  • ಸರಿಯಾದ ನೀರಾವರಿ ವ್ಯವಸ್ಥೆ (61.8%)

  • ಗೊಬ್ಬರವನ್ನು ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ನೀಡುವುದು (50%)
    ಮುಖ್ಯ ಯಶಸ್ಸಿನ ಸೂತ್ರಗಳಾಗಿ ಹೊರಹೊಮ್ಮಿವೆ.

ಹಿಂಗಾರ ಅವಧಿಯಲ್ಲಿ ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಣೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂಬುದನ್ನು ಅರ್ಧದಷ್ಟು ಬೆಳೆಗಾರರು ಒತ್ತಿ ಹೇಳಿದ್ದಾರೆ.

ವೈಜ್ಞಾನಿಕ ಕೃಷಿಯ ಅಗತ್ಯತೆ : ಅಡಿಕೆ ಕೃಷಿಯಲ್ಲಿ ಸ್ಥಿರವಾದ ಇಳುವರಿ ಪಡೆಯಲು ಸಾಂಪ್ರದಾಯಿಕ ಅನುಭವದ ಜೊತೆಗೆ ವೈಜ್ಞಾನಿಕ ದೃಷ್ಟಿಕೋನ ಅತ್ಯಗತ್ಯವಾಗಿದೆ. ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ನಿರ್ವಹಣೆ (14.7%) ಇನ್ನೂ ಹೆಚ್ಚಿನ ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಿದೆ.

ಎಲೆಚುಕ್ಕೆ ಹಾಗೂ ಕೊಳೆ ರೋಗಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ತೋಟದ ನಿರ್ವಹಣೆ ಮಾಡಿದರೆ ಮಾತ್ರ ಅಡಿಕೆ ಕೃಷಿಯನ್ನು ದೀರ್ಘಾವಧಿಯಲ್ಲಿ ಲಾಭದಾಯಕವಾಗಿ ಮುಂದುವರಿಸಲು ಸಾಧ್ಯ ಎಂಬುದು ಸಮೀಕ್ಷೆಯ ಸಾರಾಂಶವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A recent survey indicates that leaf spot disease, rot and climate variability are the major reasons for declining arecanut yields. Farmers who adopted timely garden management, proper irrigation and scientific nutrient practices have achieved better productivity.

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ
June 6, 2026
11:05 PM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ
June 6, 2026
10:27 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?
June 6, 2026
1:37 PM
by: ಸಾಯಿಶೇಖರ್ ಕರಿಕಳ
ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ
June 6, 2026
9:23 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror