Advertisement
ಪ್ರಮುಖ

#Congress | ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕಷ್ಟೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು..? | ಸಚಿವರ ವಿರುದ್ಧ ಸಿಎಂಗೆ ಕಾಂಗ್ರೆಸ್ ನ 25 ಶಾಸಕರ ದೂರು.. |

Share

ರಾಜ್ಯದಲ್ಲಿ ಕಾಂಗ್ರೆಸ್ #Congress ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದಿಯಷ್ಟೇ. ಈಗಾಗಲೇ ಶಾಸಕರ ಮದ್ಯೆ ವೈಮನಸ್ಸು ಉಂಟಾಗಿದೆ. ಇದರ ಜೊತೆಗೆ ವಿರೋಧ ಪಕ್ಷಗಳು ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಕರ್ನಾಟಕ  ಕಾಂಗ್ರೆಸ್‌ನಲ್ಲೀಗ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ಬೆಂಬಲಿತ ಹಿರಿಯ ಶಾಸಕರಿಂದ ಪಕ್ಷದ ಸಚಿವರ ವಿರುದ್ಧವೇ ಸಿಎಂಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿ.ಕೆ. ಹರಿಪ್ರಸಾದ್ ಈಚೆಗೆ ಸಿಎಂ ಕೆಳಗಿಳಿಸೋದು ಗೊತ್ತು, ಆಯ್ಕೆ ಮಾಡೋದು ಗೊತ್ತು ಎಂದು ಹೇಳಿಕೆ ನೀಡಿದ್ದರು. ತಮಗೆ ಸಚಿವ ಸ್ಥಾನ ಸಿಗದಿದ್ದ ಬಗ್ಗೆ ಈ ರೀತಿ ಅಸಮಾಧಾನ ಹೊರಹಾಕಿದ್ದರೆ. ಇದರ ಬೆನ್ನಲ್ಲೇ ಪಕ್ಷದ ಸಚಿವರ ವಿರುದ್ಧ ಹಿರಿಯ ಶಾಸಕರು ಅಸಮಾಧಾನ ಹೊರಹಾಕಿ ಸಿಎಂ ಮುಂದೆ ಹೋಗಿದ್ದಾರೆ. ಸರ್ಕಾರ ರಚನೆಯಾದ 2 ತಿಂಗಳಲ್ಲೇ ಅಸಮಾಧಾನ ಸ್ಫೋಟಿಸಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಒತ್ತಾಯಿಸಿದ್ದಾರೆ. ಇದೇ ಜು.27ಕ್ಕೆ ಸಭೆ ಕರೆಯಲಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಈ ಬೆಳವಣಿಗೆ ನಿದರ್ಶನದಂತೆ ತೋರುತ್ತಿದೆ.

ಈ ಬೆಳವಣಿಗೆ ‘ಕೈ’ ಪಾಳಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕಷ್ಟೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು ಎಂಬ ಪರಿಸ್ಥಿತಿ ಇದೆಯಾ? ಮನೆಯೊಂದು ಮೂರು ಬಾಗಿಲು ಎಂಬಂತಾಯ್ತಾ ಕಾಂಗ್ರೆಸ್ ಸ್ಥಿತಿ? ಸಿದ್ದರಾಮಯ್ಯ ವರ್ಸಸ್ ಅದರ್ಸ್ ಫೈಟ್ ಸಹ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಒಳಗೊಳಗೆ ಕೆಲಸ ಶುರು ಮಾಡಿದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದು ಸಚಿವ ಸ್ಥಾನ ವಂಚಿತ ಮಾಜಿ ಸಚಿವರು ಹಾಗೂ ಹಿರಿಯ ಶಾಸಕರ ಅಸಮಾಧಾನ ಎನ್ನಲಾಗುತ್ತಿದೆ. ಸಚಿವ ಸ್ಥಾನವೂ ಸಿಗಲಿಲ್ಲಾ. ಅತ್ತ ಹಿರಿತನಕ್ಕೆ ಗೌರವವೂ ಸಿಗುತ್ತಿಲ್ಲಾ. ಸಚಿವರಾಗಬೇಕಿದ್ದವರು ಅದನ್ನು ಕಳೆದುಕೊಂಡಿದ್ದೇವೆ. ಸಚಿವರಾದವರು ನಮ್ಮ ಹಿರಿತನಕ್ಕೆ ಗೌರವ ಕೊಡುತ್ತಿಲ್ಲಾ. ನಾವೇ ಆಗಬೇಕಿದ್ದ ಸಚಿವ ಸ್ಥಾನ ಇವರಿಗೆ ಸಿಕ್ಕಿದೆ. ನಮಗೆ ಗೌರವ ಸಿಗುತ್ತಿಲ್ಲಾ ಎನ್ನುವುದು ಅವರ ಅಸಮಾಧಾನ ಎಂದು ಮೂಲಗಳು ತಿಳಿಸಿವೆ. ನಮ್ಮ ಸ್ಥಾನದಲ್ಲಿ ಅವರು, ಅವರ ಸ್ಥಾನದಲ್ಲಿ ನಾವು. ನಮ್ಮ ಹಿರಿತನಕ್ಕೆ ಗೌರವ ಇಲ್ಲ. ಇದು ಸಚಿವ ಸ್ಥಾನ ವಂಚಿತ ಹಿರಿಯ ಶಾಸಕ ಹಾಗೂ ಮಾಜಿ ಸಚಿವರ ಅಸಮಾಧಾನದ ಮೂಲಗಳು ಮಾಹಿತಿ ನೀಡಿವೆ.

(Source :Online Network )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

1 day ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

1 day ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

1 day ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 days ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

2 days ago