Advertisement
ವಿಜ್ಞಾನ

#NASA | ಹಲವು ವರ್ಷಗಳ ನಿರಂತರ ಅಧ್ಯಯನದಿಂದ ವಿಜ್ಞಾನಿಗಳು ಶೋಧಿಸಿದ ವೈಜ್ಞಾನಿಕ ಸತ್ಯ..!! | ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿ ಯಾವುದು ಗೊತ್ತಾ..?

Share

#NASA ಅಮೇರಿಕಾದ ವಿಜ್ಞಾನ ಸಂಸ್ಥೆ. ಇದು ಒಂದಿಲ್ಲ ಒಂದು ಅನ್ವೇಷಣೆ, ಸಂಶೋಧನೆ ಮಾಡುತ್ತಲೇ ಇರುತ್ತದೆ. ಈ ಬಾರಿ ಜಗತ್ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ NASA ಹಲವು ಸಂಶೋಧನೆಗಳ ನಂತರ ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿಯನ್ನು ರೆಕಾರ್ಡ್ ಮಾಡಿತ್ತು. ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿಯಾಗಿದೆ. ಆ ಧ್ವನಿ ಯಾವುದು ಅಂತೀರಾ..? ವೇದಗಳಲ್ಲಿ ಗುಣಗಾನ ಮಾಡಲಾಗಿರುವ, ಸನಾತನ ಧರ್ಮದ ಪವಿತ್ರ ಮಂತ್ರ  ಓಂಕಾರ…!!

ಇನ್ನೂ ಅಚ್ಚರಿಯೆಂದರೆ , ಸಾಮಾನ್ಯ ಮನುಷ್ಯ ೨೦ ಮೆಗಾ ಹರ್ಟ್ಸಿನಿಂದ ೨೦೦೦೦ ಮೆಗಾಹರ್ಟ್ಸ್ ಧ್ವನಿಯನ್ನಷ್ಟೇ ಕೇಳಬಲ್ಲ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಶಬ್ದವನ್ನು ಮನುಷ್ಯ ಗ್ರಹಿಸಲಾರ ಎಂದು ವಿಜ್ಞಾನ ತಿಳಿಸುತ್ತದೆ.ಆದರೆ ಸೂರ್ಯನಿಂದ ಬರುವ ಈ ಓಂಕಾರನಾದವನ್ನು ನಮ್ಮ ಋಷಿಮುನಿಗಳು ಅರಿತಿದ್ದಾದರೂ ಹೇಗೆ..?ವೇದಗಳಲ್ಲಿ ಕೊಂಡಾಡಿದ್ದು ಹೇಗೆ..? ಓಂಕಾರವನ್ನು ಮಹಾಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಮುಂತಾದ ಪ್ರಶ್ನೆಗಳು ವಿಜ್ಞಾನಿಗಳನ್ನೂ ಕಾಡುತ್ತಿದೆ..!!

ನಮ್ಮ ಋಷಿಗಳ ಪ್ರಕಾರ , ಪರಮಾತ್ಮನನ್ನು ಸೇರಲು ಸುಲಭ ಸಾಧನವೆಂದರೆ ಓಂಕಾರ. ಓಂಕಾರವೇ ಪರಮಾತ್ಮನ ನಿಜವಾದ ಹೆಸರು.”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೇ “ತಸ್ಯ ವಾಚಕಃ ಪ್ರಣವಃ” ಪ್ರಣವವೆಂದರೆ “ಓಂಕಾರ”ಸೂರ್ಯನಿಂದ ಓಂಕಾರನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ..

ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ: “ಅರ್ಜುನ , ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ ಓಂಕಾರವನ್ನು ಜಪಿಸುತ್ತ ಲೋಕವನ್ನು ಬೆಳಗುತ್ತಿದ್ದಾನೆ .ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ ಓಂಕಾರದಲ್ಲೇ ಅಧೀನವಾಗಿದೆ” ಅಂದರೆ ವಿಜ್ಞಾನಿಗಳು ಕಂಡುಹಿಡಿದ ಸತ್ಯ ಋಷಿ-ಮುನಿಗಳಿಗೆ , ಕೃಷ್ಣನಿಗೆ ತಿಳಿದಿತ್ತು..!! ಋಷಿಗಳು ಕೇವಲ ಕಿವಿಯಿಂದ ಕೇಳಲು ಸಾಧ್ಯವಿಲ್ಲವೆಂದಿದ್ದರು , ಧ್ಯಾನದಿಂದ ಸಾಧ್ಯವೆಂದಿದ್ದರು. ವಿಜ್ಞಾನಿಗಳು ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಕಂಡುಹಿಡಿದಿದ್ದಾರಷ್ಟೇ…!!

ಯಾವಾಗ ನಾವು ಓಂ…ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ಖಾಲಿಯಾಗುತ್ತವೆ. ಓಂಕಾರದ ಜಪ ತೀವ್ರವಾಗುತ್ತಿದ್ದಂತೇ , ಬ್ರಹ್ಮಾಂಡದಲ್ಲಿರುವ ಓಂಕಾರ ಹಾಗೂ ಸಾಧಕನ ಓಂಕಾರನಾದಗಳ ಸಮ್ಮಿಲನವಾಗುತ್ತದೆ. ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದುಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ.

Source: Digital Media

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

4 hours ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

9 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

1 day ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

1 day ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago