MIRROR FOCUS

ಬರೋಬ್ಬರಿ 350 ಮತದಾರರ ಕುಟುಂಬ | ಅಸ್ಸಾಂನ ಈ ಕುಟುಂಬದ ಅಷ್ಟು ಮತದಾರರಿಗೆ ಸರ್ಕಾರದಿಂದ ದಕ್ಕಿದ್ದೇನು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ದೇಶ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ(Democracy). ಜನಸಂಖ್ಯೆಯೋ(Population) ಹೆಚ್ಚು ಇರುವ ಹಿನ್ನೆಲೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೇಶ ಕೂಡ ಹೌದು. ಇಲ್ಲೊಂದು ಕುಟುಂಬ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕುಟುಂಬ ಎನ್ನಿಸಿಕೊಂಡಿದೆ. ಲೋಕಸಭಾ ಚುನಾವಣೆಗೆ (Lok sabha Elections 2024) ಸಜ್ಜಾಗುತ್ತಿದ್ದಂತೆಯೇ ಅಸ್ಸಾಂನ ರಂಗಪಾರ ವಿಧಾನಸಭಾ ಕ್ಷೇತ್ರ ಮತ್ತು ಸೋನಿತ್‌ಪುರ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶಿಷ್ಟ ಕುಟುಂಬವೊಂದು ಬೆಳಕಿಗೆ ಬಂದಿದೆ. ಹೌದು. ಅಸ್ಸಾಂನ (Assam) ಸೋನಿತ್‌ಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದಲ್ಲಿ ಸುಮಾರು 350 ಮತದಾರರಿದ್ದಾರೆ. ಈ ಕುಟುಂಬವು ಒಟ್ಟು 1,200 ಸದಸ್ಯರನ್ನು ಹೊಂದಿದೆ. ಇದು ದೇಶದ ಅತಿದೊಡ್ಡ ಕುಟುಂಬಗಳಲ್ಲಿ ಒಂದಾಗಿದೆ. ಈ ಕುಟುಂಬದ ಎಲ್ಲಾ ಅರ್ಹ ಸದಸ್ಯರು ಏ.19 ರಂದು ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ.

Advertisement

ಈ ಕುಟುಂಬವು ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್‌ನ ದಿ.ರಾನ್ ಬಹದ್ದೂರ್ ಥಾಪಾ ಕುಟುಂಬಕ್ಕೆ ಸೇರಿದ್ದಾಗಿದೆ. ಥಾಪಾ ಅವರಿಗೆ ಐವರು ಹೆಂಡತಿಯರು, 12 ಗಂಡು ಮತ್ತು 9 ಮಂದಿ ಹೆಣ್ಣು ಮಕ್ಕಳಿದ್ದಾರೆ. ರಾನ್ ಬಹದ್ದೂರ್ ಅವರು 150 ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದಾರೆ. ಒಟ್ಟಾರೆ 1,200 ಸದಸ್ಯರಿರುವ ಈ ಕುಟುಂಬದಲ್ಲಿ ಸುಮಾರು 350 ಸದಸ್ಯರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಈ ಕುರಿತು ದಿವಂಗತ ರಾನ್ ಬಹದ್ದೂರ್ ಅವರ ಪುತ್ರ ಟಿಲ್ ಬಹದ್ದೂರ್ ಥಾಪಾ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿ, ನಮ್ಮ ಇಡೀ ಕುಟುಂಬದಲ್ಲಿ ಸುಮಾರು 350 ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ನನ್ನ ತಂದೆ 1964 ರಲ್ಲಿ ನನ್ನ ಅಜ್ಜನೊಂದಿಗೆ ಇಲ್ಲಿಗೆ ಬಂದು ಇಲ್ಲಿ ನೆಲೆಸಿದರು. ತಂದೆಗೆ ಐದು ಮಂದಿ ಪತ್ನಿಯರು ಹಾಗೂ ನಮಗೆ 12 ಸಹೋದರರು ಮತ್ತು 9 ಮಂದಿ ಸಹೋದರಿಯರಿದ್ದಾರೆ. ಅವರ ಪುತ್ರರಿಂದ 56 ಮೊಮ್ಮಕ್ಕಳಿದ್ದು, ಇದರಲ್ಲಿ ಎಷ್ಟು ಹೆಣ್ಣುಮಕ್ಕಳು ಇದ್ದಾರೆ ಎಂದು ನನಗೆ ಗೊತ್ತಿಲ್ಲ. ಮೊಮ್ಮಕ್ಕಳು ಕೂಡ ಇದ್ದಾರೆ. ಈ ಚುನಾವಣೆಯಲ್ಲಿ ಥಾಪಾ ಕುಟುಂಬದ ಸುಮಾರು 350 ಸದಸ್ಯರು ಮತದಾನ ಮಾಡಲು ಅರ್ಹರಾಗಿದ್ದಾರೆ. ಎಲ್ಲರನ್ನು ಲೆಕ್ಕ ಹಾಕಿದರೆ ನಮ್ಮ ಕುಟುಂಬದ ಒಟ್ಟು ಸದಸ್ಯರು 1,200 ಕ್ಕಿಂತ ಹೆಚ್ಚಿರುತ್ತಾರೆ ಎಂದರು.

ಕುಟುಂಬದವರ ಆರೋಪ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಈ ಕುಟುಂಬಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಇದೇ ವೇಳೆ ಟಿಲ್ ಬಹದ್ದೂರ್ ಥಾಪಾ ವಿಷಾದ ವ್ಯಕ್ತಪಡಿಸಿದರು. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರು. ಆದರೆ ಯಾವುದೇ ಸರ್ಕಾರಿ ಕೆಲಸ ಸಿಗಲಿಲ್ಲ. ಕುಟುಂಬದ ಕೆಲವರು ಬೆಂಗಳೂರಿಗೆ ತೆರಳಿ ಖಾಸಗಿ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಾನು 1989 ರಿಂದ ಗ್ರಾಮದ ಮುಖ್ಯಸ್ಥನಾಗಿದ್ದೇನೆ. ನನಗೆ 8 ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಸಿದರು. ಧಾನಸಭಾ ಕ್ಷೇತ್ರಗಳಿರುವ ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ 16.25 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ಹೀಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

5 hours ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

8 hours ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

8 hours ago

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |

ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

2 days ago