ಮೀನುಗಾರಿಕೆ ಮೀನುಗಾರರ ಬದುಕು. ಸಮುದ್ರದಲ್ಲಿ ದೂರ ಹೋದಷ್ಟು ಮೀನು ಜಾಸ್ತಿ ಹಿಡಿಯಲು ಸಾಧ್ಯ. ಹಾಗಾಗಿ ಕಡಲ ಮಕ್ಕಳು ಸಮುದ್ರದಲ್ಲಿ ಕೆಲವೊಮ್ಮೆ ಮಿತಿ ಅರಿಯದೆ ದೂರ ಸಾಗುತ್ತಾರೆ. ಇದು ಅವರ ಪ್ರಾಣಕ್ಕೆ ಕುತ್ತು ತರುತ್ತೆ. ಅಂತಹ ಮೀನುಗಾರರನ್ನು ರಕ್ಷಿಸಲು ಭಾರತೀಯ ನೌಕಾಪಡೆ ಸದಾ ಸರ್ವ ಸನ್ನದ್ಧವಾಗಿರುತ್ತದೆ.
ಮೀನುಗಾರಿಕೆಂದು #Fishing ತೆರಳಿ ಬಂಗಾಳಕೊಲ್ಲಿಯಲ್ಲಿ #BayOfBengal ಸಿಲುಕಿಕೊಂಡಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಭಾರತೀಯ ನೌಕಾ ಹಡಗುS ಖಂಜಾರ್ ಮೂಲಕ ತಮಿಳುನಾಡು ಕರಾವಳಿಯಿಂದ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ.
ಮೀನುಗಾರರು 3 ಮೀನುಗಾರಿಕಾ ಹಡಗುಗಳಲ್ಲಿ ತೆರಳಿದ್ದು, 30 ಗಂಟೆಗಳ ಕಾರ್ಯಾಚರಣೆಯ ಮೂಲಕ ಮೀನುಗಾರರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಖಂಜಾರ್ ನೌಕೆ ಸಮುದ್ರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ತಮಿಳುನಾಡು ಕರಾವಳಿಯಿಂದ ಸರಿಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೂರು ಮೀನುಗಾರಿಕಾ ಹಡಗುಗಳಾದ ಶಬರನಾಥನ್, ಕಲೈವಾಣಿ ಮತ್ತು ಮಿಸಾಮಿ ಪತ್ತೆಯಾಗಿದೆ.
36 ಮೀನುಗಾರರು ಮೂರು ಹಡಗುಗಳಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ತೆರಳಿದ್ದ ವೇಳೆ ಹಡಗಿನ ಇಂಧನ ಖಾಲಿಯಾಗಿದ್ದಲ್ಲದೇ ಪ್ರತಿಕೂಲ ಹವಾಮಾನ ಹಾಗೂ ಎಂಜಿನ್ ಸ್ಥಗಿತಗೊಂಡ ಕಾರಣ ಎರಡು ದಿನಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎಂದು ಕಮಾಂಡರ್ ಮಧ್ವಲ್ ಹೇಳಿದ್ದಾರೆ. ಪ್ರತಿಕೂಲ ಹವಾಮಾನದ ನಡುವೆಯೂ 30 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಸುರಕ್ಷಿತವಾಗಿ ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…