ಗುಜರಾತ್‌ನ ಮುಂದ್ರಾ ಬಂದರು ಮೂಲಕ ಆಗಮನವಾಗಿದ್ದ 39.44 ಟನ್ ಅಡಕೆಯನ್ನು(Arecanut) ಡಿಆರ್‌ಐ ವಶಪಡಿಸಿಕೊಂಡಿದೆ. ಸ್ಕ್ರ್ಯಾಪ್ ಟೈರ್ ಹೆಸರಿನಲ್ಲಿ ಅಕ್ರಮವಾಗಿ ಅಡಿಕೆ ಸಾಗಿಸಲಾಗುತ್ತಿತ್ತು. 10 ಕಂಟೈನರ್ ಗಳಲ್ಲಿ ಒಟ್ಟು 39.44 ಟನ್ ಅಡಿಕೆ ಬರುತ್ತಿತ್ತು. ಇದನ್ನು ಡಿಆರ್‌ಐ ವಶಪಡಿಸಿಕೊಂಡಿದೆ. ಇದೀಗ ಅಡಿಕೆ ಅಕ್ರಮ ಸಾಗಾಟಕ್ಕೆ ಬ್ರೇಕ್ ಬೀಳುತ್ತಿದ್ದು, ಇದು ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಧಾರಣೆ ಏರಿಕೆಯ ನಿರೀಕ್ಷೆ ಇದೆ.
ಗುಜರಾತ್ ಮುಂದ್ರಾ ಬಂದರು ಮೂಲಕ ಕಸ್ಟಮ್ಸ್ ಸುಂಕ ತಪ್ಪಿಸಿ ಅಡಿಕೆ ಕಳ್ಳಸಾಗಣೆ ಮಾಡುವ ಜಾಲವನ್ನು ಡಿಆರ್‌ಐ ಬೇಧಿಸಿದೆ. ಇದಕ್ಕೂ ಮುನ್ನ ಇದೇ ಬಂದರಿನಿಂದ ಇದೇ ಮಾದರಿಯಲ್ಲಿ ವಶಪಡಿಸಿಕೊಂಡ ಹಲವು ಪ್ರಕರಣಗಳು ನಡೆದಿದೆ. ಹೀಗಾಗಿ ಕೇಂದ್ರ ಮತ್ತು ಗುಜರಾತ್‌ನ ಭದ್ರತಾ ಏಜೆನ್ಸಿಗಳು ಅಂತಹ ಅಂಶಗಳು ಮತ್ತು ಕಳ್ಳಸಾಗಾಣಿಕೆ ವಸ್ತುಗಳ ಮೇಲೆ, ಸಾಗಾಣಿಕೆದಾರರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸುತ್ತವೆ. ಆದ್ದರಿಂದ, ಇದೀಗ ಇನ್ನೊಂದು ಪ್ರಕರಣ ಪತ್ತೆಯಾಗಿದೆ.
ಮಾಹಿತಿಯ ಪ್ರಕಾರ, ದುಬೈನಿಂದ ವಡೋದರಾ ಸಂಸ್ಥೆಯು ಈ ಅಡಿಕೆಯನ್ನು ಬುಕಿಂಗ್ ಮಾಡಿದೆ. ಸ್ಕ್ರ್ಯಾಪ್ ಟೈರ್‌ಗಳ ಹೆಸರಿನಲ್ಲಿ ಅಕ್ರಮವಾಗಿ ಅಡಿಕೆಯನ್ನು ಸಾಗಿಸಲಾಗುತ್ತಿತ್ತು. ಇದೀಗ ಮತ್ತೊಂದು ಭಾರೀ ಪ್ರಮಾಣದ ಅಡಿಕೆಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
39.44 tonnes of Arecanuts were seized through Mundra port in Gujarat. Arecanuts were being transported illegally in the name of scrap tyres. A total of 39.44 tons of Arecanuts were coming in 10 containers. It has been seized by DRI.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…