ಇನ್ಫೋಸಿಸ್ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರು ನೀಡಿರುವ ವಾರದ 70 ಗಂಟೆ ಕೆಲಸದ ಬಗೆಗಿನ ಸಲಹೆ ವಿವಿಧ ಆಯಾಮಗಳಿಂದ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆಯೇ, ಇನ್ನೊಬ್ಬ ಉದ್ಯಮ ದಿಗ್ಗಜ , ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಬಹುಶ: ನಾರಾಯಣಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು ನಿಮಗಾಗಿ, ಕಂಪನಿಗಾಗಿ ಮತ್ತು ದೇಶಕ್ಕಾಗಿ ಎಂಬ ಹೊಸ ವಿವರಣೆ ನೀಡಿದ್ದಾರೆ.ಕಂಪನಿಗಾಗಿ 70 ಗಂಟೆ ಕೆಲಸ ಮಾಡಿ ಎಂದು ಹೇಳಿಲ್ಲ. ಕಂಪನಿಗೆ 40 ಗಂಟೆ ಕೆಲಸ ಮಾಡಿ, ನಿಮಗಾಗಿ 30 ಗಂಟೆ ಕೆಲಸ ಮಾಡಿ ಹೇಳಿರಬೇಕು ಹೇಳಿದ್ದಾರೆ.ನಿಮ್ಮ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು 10,000 ಗಂಟೆಗಳನ್ನು ವಿನಿಯೋಗಿಸಿ, ಹಗಲು ರಾತ್ರಿ ಕಷ್ಟ ಪಟ್ಟು ಕೆಲಸ ಮಾಡಿ, ಪರಿಣತಿಯನ್ನು ಸಾಧಿಸಿ” ಎಂದು ಗುರ್ನಾನಿ ಅವರು ಎಕ್ಸ್‌ನಲ್ಲಿ(ಟ್ವಿಟರ್ ) ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಈ ಮೂಲಕ ಯುವಜನರಿಗೆ ಪರಿಶ್ರಮಿಗಳಾಗುವಂತೆ ಸಲಹೆ ನೀಡಿದ್ದಾರೆ.
ನೀವು 10 ಗಂಟೆ ಕೆಲಸ ಮಾಡಲು ಮುಂದಾದರೆ, ನಿಮ್ಮ ವ್ಯಕ್ತಿತ್ವ ಇತರರಿಗಿಂತಲೂ ಭಿನ್ನವಾಗುತ್ತದೆ. ದೇಶದ ಪಥವೂ ಬದಲಾಗುತ್ತದೆ, ಎಂದೂ ಅವರು ಹೇಳಿದ್ದಾರೆ. ಕಠಿಣ ಪರಿಶ್ರಮವು ಯಶಸ್ಸಿನ ಬೆನ್ನೆಲುಬು, ಆದರೆ ವಾರಕ್ಕೆ 70 ಗಂಟೆಗಳ ಕೆಲಸ ಎನ್ನುವುದು ಕೇವಲ ಗಡಿಯಾರದ ಗಂಟೆಗಳ ಕುರಿತಾದ ಸಂಗತಿಯಲ್ಲ. ಆ ಗಂಟೆಗಳಲ್ಲಿ ವ್ಯಕ್ತಿಯು ಕೆಲಸದಲ್ಲಿ ತೋರಿಸುವ ಉತ್ಸಾಹ ಮತ್ತು ಗುಣಮಟ್ಟ ಬಹಳ ಮುಖ್ಯ, ಗಂಟೆಗಳ ಕೆಲಸ ಎನ್ನುವ ಸವಾಲನ್ನು ಯುವಜನರು ಸ್ವೀಕರಿಸಬೇಕು, ಇದರಿಂದ ವೇತನದ ಬೆಳವಣಿಗೆ ಮತ್ತು ಕಲಿಕೆಯು ಸಾಧ್ಯವಾಗುತ್ತದೆ ಎಂದು ಮಾರಿಕೊ ಗ್ರೂಪ್ ಅಧ್ಯಕ್ಷ ಹರ್ಟ್ ಮಾರಿವಾಲಾ ಕೂಡಾ ಹೇಳಿದ್ದಾರೆ.
ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ಹೀಗಿದೆ…
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…