5 ರೂ ಗೆ 20 ಲೀಟರ್ ಶುದ್ಧ ನೀರು : ನ.ಪಂ ವತಿಯಿಂದ ಹೊಸ ಯೋಜನೆ

Advertisement

ಸುಳ್ಯ: ಸುಳ್ಯ ನಗರದಲ್ಲಿ ಐದು ರೂ ನೀಡಿದರೆ ಇನ್ನು 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯಲಿದೆ. ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿಗೆ ಜನರು ಹಾಹಾಕಾರ ಪಡುವುದನ್ನು ತಪ್ಪಿಸಲು ಸುಳ್ಯ ನಗರ ಪಂಚಾಯತ್ ಹೊಸ ಯೋಜನೆ ರೂಪಿಸಿದೆ. ನ.ಪಂ. ವತಿಯಿಂದ ಎರಡು ಕಡೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು ಸೋಮವಾರ ಉದ್ಘಾಟನೆಗೊಂಡಿತು.

Advertisement

 

Advertisement
Advertisement

ನಗರ ಪಂಚಾಯತ್ ಸಮೀಪ ಮತ್ತು ಗಾಂಧಿನಗರದಲ್ಲಿ ಘಟಕಗಳು ಕಾರ್ಯಾಚರಿಸಲಿದೆ. ತಲಾ ನಾಲ್ಕು ಲಕ್ಷ ರೂ ವೆಚ್ಚದಲ್ಲಿ ಒಟ್ಟು ಎಂಟು ಲಕ್ಷ ರೂ ಖರ್ಚಿನಲ್ಲಿ ಎರಡು ಘಟಕವನ್ನು ಸ್ಥಾಪಿಸಲಾಗಿದೆ. ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮತ್ತು ನಗರ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್ ಆಸಕ್ತಿ ವಹಿಸಿ ಘಟಕವನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರರವರೆಗೆ ಘಟಕ ಕಾರ್ಯಾಚರಿಸಲಿದೆ. ಘಟಕದ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು‌. ಜನರ ಬೇಡಿಕೆಯನ್ನು ಗಮನಿಸಿ ಇನ್ನೂ ಹೆಚ್ಚಿನ ಕಡೆಗಳಲ್ಲಿ ಘಟಕ ತೆರೆಯುವ ಯೋಜನೆ ರೂಪಿಸಲಾಗುತ್ತದೆ. 5 ರೂಗೆ 20 ಲೀಟರ್ ಮತ್ತು 2 ರೂಗೆ 10 ಲೀಟರ್ ನಂತೆ ನೀರು ಸರಬರಾಜು ಮಾಡಲಾಗುತ್ತದೆ. ಕುಡಿಯಲು ಮತ್ತು ಅಡುಗೆ ಮಾಡಲು ಈ ನೀರನ್ನು ಬಳಸಬಹುದು.

Advertisement

 

Advertisement

ನ.ಪಂ. ಅಡಳಿತಾಧಿಕಾರಿಯಾದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಉದ್ಘಾಟಿಸಿದರು. ನ.ಪಂ.ಮುಖ್ಯಾಧಿಕಾರಿ ಶ್ರೀಧರ್, ಇಂಜಿನಿಯರ್ ಶಿವಕುಮಾರ್, ಕಂದಾಯ ನಿರೀಕ್ಷಕ ದೀಪಕ್, ಗ್ರಾಮ ಕರಣಿಕ ತಿಪ್ಪೇಶ್, ನ.ಪಂ.ಆರೋಗ್ಯಾಧಿಕಾರಿ ರವಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "5 ರೂ ಗೆ 20 ಲೀಟರ್ ಶುದ್ಧ ನೀರು : ನ.ಪಂ ವತಿಯಿಂದ ಹೊಸ ಯೋಜನೆ"

Leave a comment

Your email address will not be published.


*