5 ಲಕ್ಷ ರಸ್ತೆ ಅಪಘಾತ, 1.80 ಲಕ್ಷ ಮಂದಿ ಬಲಿ |

January 30, 2025
7:24 AM
ದೇಶದಲ್ಲಿ ಕಳೆದ ವರ್ಷ ಸುಮಾರು 5 ಲಕ್ಷ, ರಸ್ತೆ ಅಪಘಾತಗಳು ಮತ್ತು 1 ಲಕ್ಷದ 80 ಸಾವಿರ  ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ ಶೇಕಡ 66ರಷ್ಟು ಮಂದಿ  18 ರಿಂದ 34ರ ವಯೋಮಾನದವರಾಗಿದ್ದಾರೆ.

ದೇಶದಲ್ಲಿ ಕಳೆದ ವರ್ಷ ಸುಮಾರು 5 ಲಕ್ಷ, ರಸ್ತೆ ಅಪಘಾತಗಳು ಮತ್ತು 1 ಲಕ್ಷದ 80 ಸಾವಿರ  ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ  ತಿಳಿಸಿದ್ದಾರೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ಕೇಂದ್ರದ ‘ಪ್ರಾಜೆಕ್ಟ್ ಅಭಯ್‌’ನ ಸಮಾರೋಪ ಸಮಾರಂಭ ಉದ್ದೇಶಿಸಿ  ಅವರು, ಒಟ್ಟು ಮೃತರ ಪೈಕಿ ಶೇಕಡ 66ರಷ್ಟು ಮಂದಿ  18 ರಿಂದ 34ರ ವಯೋಮಾನದವರಾಗಿದ್ದಾರೆ. ರಸ್ತೆ ಅಪಘಾತಗಳಿಂದ ವಾರ್ಷಿಕ ದೇಶದ ಜಿಡಿಪಿಯ , ಶೇಕಡ 3 ರಷ್ಟು ನಷ್ಟವಾಗುತ್ತಿದೆ ಎಂದು ಹೇಳಿದರು. ರಫ್ತು ಹೆಚ್ಚಿಸಲು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ. ಪ್ರಾಜೆಕ್ಟ್ ಅಭಯ್‌ನ ಪ್ರಾಯೋಗಿಕ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಶ್ಲಾಘನೀಯ. ದೇಶದಲ್ಲಿ ಪ್ರಸ್ತುತ 22 ಲಕ್ಷ ಚಾಲಕರ ಕೊರತೆ ಇದ್ದು,  ಟ್ರಕ್ ಚಾಲಕರ ಸಂಖ್ಯೆಯನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದರು. ಪ್ರಾಜೆಕ್ಟ್ ಅಭಯ್ , ದೇಶಾದ್ಯಂತ ಟ್ರಕ್ ಚಾಲಕರ ಜೀವನ ಸುಧಾರಿಸುವ ಉದ್ದೇಶ ಹೊಂದಿದ ಉಪಕ್ರಮವಾಗಿದೆ. ಕಳೆದ ವರ್ಷ, ಈ ಉಪಕ್ರಮದಡಿ  ಆರು ರಾಜ್ಯಗಳು ಮತ್ತು 15 ನಗರಗಳಾದ್ಯಂತ 50 ಸಾವಿರ  ಟ್ರಕ್ ಚಾಲಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group