ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಣ ರಂಗೇರಿದೆ. ಸೋಮವಾರ 53 ಮಂದಿ ನಾಮಪತ್ರ(Nomination) ವಾಪಸ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ(Election) ಒಟ್ಟು 247 ಅಭ್ಯರ್ಥಿಗಳು(Candidates) ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಏ.8 ಕೊನೆ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 6ನೇ ತಾರೀಖಿನಂದು ಒಬ್ಬರು ಹಾಗೂ ಇಂದು 52 ಮಂದಿ ಸೇರಿದಂತೆ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಕಣದಲ್ಲಿ ಈಗ 247 ಅಭ್ಯರ್ಥಿಗಳಿದ್ದು, ಅವರ ಪೈಕಿ ಪುರುಷರು 226 ಹಾಗೂ ಮಹಿಳಾ ಅಭ್ಯರ್ಥಿಗಳು 21 ಮಂದಿ ಚುನಾವಣೆ ಎದುರಿಸಲಿದ್ದಾರೆ.
ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ?
ಉಡುಪಿ-ಚಿಕ್ಕಮಗಳೂರು: 10
ಹಾಸನ: 15
ದಕ್ಷಿಣ ಕನ್ನಡ: 9
ಚಿತ್ರದುರ್ಗ: 20
ತುಮಕೂರು: 18
ಮಂಡ್ಯ: 14
ಮೈಸೂರು: 18
ಚಾಮರಾಜನಗರ: 14
ಬೆಂಗಳೂರು ಗ್ರಾಮೀಣ: 15
ಬೆಂಗಳೂರು ಉತ್ತರ: 21
ಬೆಂಗಳೂರು ಕೇಂದ್ರ: 24
ಬೆಂಗಳೂರು ದಕ್ಷಿಣ: 22
ಚಿಕ್ಕಬಳ್ಳಾಪುರ: 29
ಕೋಲಾರ: 18
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…