ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್ ಬಿಡುಗಡೆಯಾಗಬಹುದು. ಶುದ್ಧೀಕರಣ ಪ್ರಕ್ರಿಯೆಯ ನಂತರ, ಜೈವಿಕ ಅನಿಲದ( Compressed Biogas) ಕಾರನ್ನು 5,500 ಕಿ.ಮೀ.ಗಿಂತ ಹೆಚ್ಚು ದೂರ ಓಡಿಸಬಹುದು ಎನ್ನುವುದು ಈಗಿನ ಸುದ್ದಿ. ಉತ್ತರಪ್ರದೇಶದ ಈ ಸುದ್ದಿ ಈ ಬಗ್ಗೆ ಚರ್ಚೆಯಾಗುತ್ತಿದೆ.
ಉತ್ತರ ಪ್ರದೇಶದ ಗ್ರಾಮೀಣ ಆರ್ಥಿಕತೆಯು ಮೊದಲ ಬಾರಿಗೆ ಹಸುವಿನ ಸಗಣಿಯಿಂದ ದೊಡ್ಡ ಪ್ರಮಾಣದಲ್ಲಿ ಮೀಥೇನ್ ಉತ್ಪಾದಿಸಲಿದ್ದು, ವಾಹನಗಳಿಗೆ ಶಕ್ತಿ ತುಂಬುವ ಇಂಧನವನ್ನು ಉತ್ಪಾದಿಸುವ ಸಿದ್ಧತೆ ನಡೆಯುತ್ತಿದೆ. ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ಗ್ರೀನ್ ಇಕಾನಮಿ ಬಲಪಡಿಸುವ ಹೆಜ್ಜೆಗಳಲ್ಲಿ ಇದೂ ಒಂದಾಗಿದೆ. ಈ ಬಗ್ಗೆ ಅಭಿಪ್ರಾಯಪಟ್ಟಿರುವ ತಜ್ಞರು, ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್ ಬಿಡುಗಡೆಯಾಗಬಹುದು. ಶುದ್ಧೀಕರಣ ಪ್ರಕ್ರಿಯೆಯ ನಂತರ, ಕಂಪ್ರೆಸ್ಡ್ ಬಯೋಗ್ಯಾಸ್ ಕಾರನ್ನು 5,500 ಕಿ.ಮೀ.ಗಿಂತ ಹೆಚ್ಚು ದೂರ ಓಡಿಸಬಹುದು.
ಉತ್ತರ ಪ್ರದೇಶದ ಗೋ-ಸೇವಾ-ಆಯೋಗದ ಅಧ್ಯಕ್ಷ ಶ್ಯಾಮ್ ಬಿಹಾರಿ ಗುಪ್ತಾ ಮಾತನಾಡಿ, ರಾಜ್ಯದಲ್ಲಿ ಬೀದಿ ಗೋವುಗಳಿಂದ ದಿನಕ್ಕೆ ಸರಾಸರಿ 54 ಲಕ್ಷ ಕಿಲೋಗ್ರಾಂಗಳಷ್ಟು ಸಗಣಿ ಉತ್ಪಾದನೆಯಾಗುತ್ತದೆ. ಈ ಸಗಣಿ ಕಂಪ್ರೆಸ್ಡ್ ಬಯೋಗ್ಯಾಸ್ ಸ್ಥಾವರಗಳಲ್ಲಿ ಸಂಸ್ಕರಿಸಿ ಮೀಥೇನ್ ಉತ್ಪಾದನೆಯಿಂದ ಹಿಡಿದು ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಅಡುಗೆ ಇಂಧನದವರೆಗೆ, ಸಣ್ಣ ಕೈಗಾರಿಕೆಗಳಿಗೆ ಇಂಧನವಾಗಿ ಮತ್ತು ನೈಸರ್ಗಿಕ ಕೃಷಿಯಲ್ಲಿ ಸಾವಯವ ಪರಿಹಾರವಾಗಿ ಬಳಸಬಹುದು. ಇದು ಸಂಭಾವ್ಯವಾಗಿ ಲಕ್ಷಾಂತರ ರೂಪಾಯಿಗಳ ವಾರ್ಷಿಕ ಗಳಿಕೆಯನ್ನು ಗಳಿಸಬಹುದು ಎಂದು ಹೇಳಿದ್ದಾರೆ.
ಗೋ-ಗೋ-ಸೇವಾ-ಆಯೋಗದ ಡಾ. ಅನುರಾಗ್ ಶ್ರೀವಾಸ್ತವ ಅವರು, “ಭವಿಷ್ಯದಲ್ಲಿ ಮೀಥೇನ್ ಕೃಷಿಯು ಇಂಧನಗಳಿಗೆ ಪರ್ಯಾಯವಾಗಬಹುದು. ಈ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಸರ್ಕಾರದ ಉಪಕ್ರಮವು ‘ತ್ಯಾಜ್ಯದಿಂದ ಸಂಪತ್ತು’ ಎಂಬ ಪರಿಕಲ್ಪನೆಯನ್ನು ಉತ್ತೇಜಿಸುತ್ತಿದೆ, ಇದು ಸಾರಿಗೆ ಮತ್ತು ಗ್ರೀನ್ ಇಕಾನಮಿಗೆ ಪರಿಣಾಮಕಾರಿ ಇಂಧನವನ್ನು ಒದಗಿಸುತ್ತದೆ. ಪ್ರತಿಯೊಂದು ಗೋವಿನ ಸಗಣಿಯಿಂದ ಉತ್ಪತ್ತಿಯಾಗುವ ಮೀಥೇನ್ ನೈಸರ್ಗಿಕ ಅನಿಲದ ಒಂದು ರೂಪವಾಗಿದ್ದು, ಇದು ಪರಿಸರ ಸ್ನೇಹಿ ಮತ್ತು ಆರ್ಥಿಕ ಎರಡೂ ಆಗಿದೆ ಎಂದಿದ್ದಾರೆ.
ಸೆಗಣಿಯಿಂದ ತಯಾರಾಗುವ ಇತರ ಗೊಬ್ಬರ ಹಾಗೂ ಗ್ಯಾಸ್ ಬಗ್ಗೆ ಹಲವು ಕಡೆ ಅಧ್ಯಯನಗಳು ನಡೆದಿವೆ ಕೂಡಾ. ಇಂಡೋನೇಷ್ಯಾದಲ್ಲಿ ಹಸುವಿನ ಗೊಬ್ಬರದಿಂದ ಉತ್ಪಾದಿಸುವ ಜೈವಿಕ ಅನಿಲದ ಆರ್ಥಿಕ, ಶಕ್ತಿ ಮತ್ತು ಪರಿಸರ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆದಿದೆ.
ಇಂಡೋನೇಷ್ಯಾದಲ್ಲಿ ಹಸುವಿನ ಸಗಣಿ ಅಸಮರ್ಪಕ ನಿರ್ವಹಣೆ ಒಂದು ಸಮಸ್ಯೆಯಾಗಿದೆ. ಬಯೋಗ್ಯಾಸ್ ಉತ್ಪಾದನೆಯನ್ನು ಈ ಹಿಂದೆ ಸೆಗಣಿಯ ಬಳಕೆಗೆ ಅನುಕೂಲಕರ ವಿಧಾನವೆಂದು ಪರಿಗಣಿಸಲಾಗಿತ್ತು. ಇದಕ್ಕಾಗಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಚಾಲಿತ ವಿದ್ಯುತ್ ಬದಲಿಸಿ ಹಸುವಿನ ಸಗಣಿಯಿಂದ ಉತ್ಪತ್ತಿಯಾಗುವ ಜೈವಿಕ ಅನಿಲದ ಶಕ್ತಿ, ಆರ್ಥಿಕ ಮತ್ತು ಪರಿಸರ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನಗಳ ಪ್ರಕಾರ, ಬಯೋಗ್ಯಾಸ್ ಸ್ಥಾವರವನ್ನು ಸ್ಥಾಪಿಸುವುದರಿಂದ ಇಂಗಾಲದ ಹೊರಸೂಸುವಿಕೆಯನ್ನು 6.78 ಟನ್ ಪ್ರತೀ ದಿನ ಕಡಿತಗೊಳಿಸಬಹುದು. ಯೂರಿಯಾ ಗೊಬ್ಬರದ ಸುಮಾರು 44% ಅನ್ನು ಸ್ಲರಿಯಿಂದ ಬದಲಾಯಿಸಬಹುದು ಸೇರಿದಂತೆ ದೇಶಕ್ಕೆ ಆಗುವ ವಿವಿಧ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿತ್ತು.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…