ಭಾರತ (Bharat) ಶ್ರೀಮಂತರನ್ನು ಒಳಗೊಂಡ ದೇಶ. ಶ್ರೀಮಂತರಿಗೆ ಇಲ್ಲಿನ ಮಣ್ಣು, ಹೊನ್ನು ಎಲ್ಲಾ ಬೇಕು. ಆದರೆ ದೇಶದಲ್ಲಿ ನೆಲೆಸುವುದು ಮಾತ್ರ ಬೇಡ…!. ತಾವು ಮಾಡಿದ ಹಣವನ್ನು ಪರ ದೇಶದಲ್ಲಿ ಚೆಲ್ಲಿ ಅಲ್ಲಿ ಐಶರಾಮಿ ಜೀವನ ಮಾಡುತ್ತಾರೆ. ಕಳೆದ ವರ್ಷ 7,500 ಕೋಟ್ಯಾಧಿಪತಿಗಳನ್ನು ಕಳೆದುಕೊಂಡಿದ್ದ ಭಾರತದಿಂದ ಈ ವರ್ಷ 6,500 ಶ್ರೀಮಂತರು ಹೊರಹೋಗುತ್ತಿದ್ದಾರೆ..!
ಈ ವರ್ಷವೂ ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿರುವುದು ಚೀನಾದಿಂದ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ. ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್ನಂಥ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ನಲ್ಲಿ ಬಂದಿರುವ ವಿಚಾರ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶ್ರೀಮಂತರು ಹೊರಹೋಗುತ್ತಿರುವ ದೇಶಗಳಲ್ಲಿ ಚೀನಾ, ಬ್ರಿಟನ್, ಬ್ರೆಜಿಲ್, ಹಾಂಕಾಂಗ್, ಸೌತ್ ಕೊರಿಯಅ, ಮೆಕ್ಸಿಕೋ, ಸೌತ್ ಆಫ್ರಿಕಾ, ಜಪಾನ್, ವಿಯೆಟ್ನಾಂ, ನೈಜೀರಿಯಾ ಇವೆ.
ಶ್ರೀಮಂತರು ಹೋಗುತ್ತಿರುವುದು ಎಲ್ಲಿಗೆ? : ಆಸ್ಟ್ರೇಲಿಯಾ, ಯುಎಇ, ಸಿಂಗಾಪುರ, ಅಮೆರಿಕ, ಸ್ವಿಟ್ಜರ್ಲ್ಯಾಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್, ನ್ಯೂಜಿಲ್ಯಾಂಡ್ ಮತ್ತು ಇಟಲಿ ದೇಶಗಳಿಗೆ ವಲಸೆ ಹೋಗುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಮಿಲಿಯನೇರ್ಗಳಿಗೆ 2023ರಲ್ಲಿ ಆಸ್ಟ್ರೇಲಿಯಾ ಫೇವರಿಟ್ ಎನಿಸಿದೆ. ಯುಎಇಗೂ ಶ್ರೀಮಂತರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಬ್ರಿಟನ್, ರಷ್ಯಾ, ಪಾಕಿಸ್ತಾನ್, ಟರ್ಕಿ, ಚೀನಾ ಮೊದಲಾದ ದೇಶಗಳ ಶ್ರೀಮಂತರಿಗೆ ವಲಸೆ ಹೋಗಲು ಯುಎಇ ಫೇವರಿಟ್ ಎನಿಸಿದೆ.
ಆಸ್ಟ್ರೇಲಿಯಾ ಮೇಲೆ ಯಾಕೆ ಜಾಸ್ತಿ ಪ್ರೀತಿ?: ಆಸ್ಟ್ರೇಲಿಯಾದ ಜೀವನ ಗುಣಮಟ್ಟ, ಅಲ್ಲಿನ ಹವಾಮಾನ, ಭದ್ರತೆ, ಶಿಕ್ಷಣ, ತೆರಿಗೆ ಇತ್ಯಾದಿ ಅಂಶಗಳು ಶ್ರೀಮಂತರನ್ನು ಸೆಳೆಯುತ್ತಿದೆ. ಶ್ರೀಮಂತ ದೇಶಗಳಿಂದಲೂ ಕೋಟ್ಯಧಿಪತಿಗಳು ಆಸ್ಟ್ರೇಲಿಯಾಗೆ ಹೋಗಿ ನೆಲಸುತ್ತಿದ್ದಾರೆ. ಇನ್ನು, ಯುಎಇ ದೇಶ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ತೆರಿಗೆಯೂ ಬಹಳ ಕಡಿಮೆ ಇದೆ. ಹೀಗಾಗಿ, ಬಹಳಷ್ಟು ಶ್ರೀಮಂತರು ದುಬೈ, ಅಬುಧಾಬಿಗಳತ್ತ ಹೋಗುತ್ತಿದ್ದಾರೆ.
( ಅಂತರ್ಜಾಲ ಮಾಹಿತಿ )
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…