Advertisement
ಸುದ್ದಿಗಳು

ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ | ಹೊಸ ಕೋವಿಡ್ ರೂಪಾಂತರ ಮಾದರಿಗಳು ಪತ್ತೆ…! |

Share

ಹೋದೆಯಾ ಪಿಶಾಚಿ ಎಂದ್ರೆ ಬಂದೆಯಾ ಗವಾಕ್ಷಿ ಅನ್ನುವ ಹಾಗೆ ಆಯ್ತು ಈ ಕೊರೋನಾ ಕಥೆ….  ದಿನಕ್ಕೊಂದು ಅವತಾರರದಲ್ಲಿ ಅವತರಿಸುತ್ತಿದೆ ಈ ರಕ್ತಬೀಜಾಸುರ. ದೇಶದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ಹೊಸ ರೂಪಾಂತರ ಹೊಸ ಮಾದರಿಗಳು ಪತ್ತೆಯಾಗಿವೆ.  ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.

Advertisement
Advertisement
Advertisement

ಜನವರಿಯಲ್ಲಿ ಮೊದಲ ಬಾರಿಗೆ ಎರಡು ಮಾದರಿಗಳ ಪರೀಕ್ಷೆ ನಡೆಸಿದಾಗ  XBB 1.16 ರೂಪಾಂತರ ದೃಢಪಟ್ಟಿತ್ತು. ಫೆಬ್ರವರಿಯಲ್ಲಿ ಒಟ್ಟು 59 ಮಾದರಿಗಳು ಪತ್ತೆಯಾದರೆ, ಮಾರ್ಚ್ ನಲ್ಲಿ ಇಲ್ಲಿಯವರೆಗೂ  ಇದೀಗ 15 ಮಾದರಿಗಳು ಪತ್ತೆಯಾಗಿವೆ ಎಂದು INSACOG ಹೇಳಿದೆ.

Advertisement

ಈ ರೂಪಾಂತರದ ಕಾರಣದಿಂದ ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಈ ಸೋಂಕು ಹರಡುವಿಕೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

ಅಮೆರಿಕ, ಬ್ರೂನಿ, ಸಿಂಗಾಪುರ ಮತ್ತು ಯುಕೆ ನಂತರ ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕನಿಷ್ಠ 12 ದೇಶಗಳಲ್ಲಿ ಹೊಸ ರೂಪಾಂತರ XBB 1.16 ಪತ್ತೆಯಾಗಿದೆ. ಭಾರತದಲ್ಲಿ ಪ್ರಕರಣಗಳಲ್ಲಿ ಶೇ.281 ರಷ್ಟು ಹೆಚ್ಚಾಗಿದೆ. ಕಳೆದ 14 ದಿನಗಳಲ್ಲಿ ಸಾವಿನ ಪ್ರಕರಣದಲ್ಲಿ ಶೇ.17 ರಷ್ಟು ಹೆಚ್ಚಾಗಿದೆ ಎಂದು ಬಿಜ್ನೋರ್ ನ ಮಂಗಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಿಶು ವೈದ್ಯ ವಿಪಿನ್ ಎಂ ವಶಿಷ್ಠ ಟ್ವೀಟ್ ಮಾಡಿದ್ದಾರೆ.

126 ದಿನಗಳ ನಂತರ ಶನಿವಾರದಂದು ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 800 ದಾಟಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,389 ಕ್ಕೆ ಏರಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

1 day ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

2 days ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago