ಔಷಧಗಳ ಪರೀಕ್ಷೆಗೆ 8 ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿದೆ

October 15, 2024
10:45 PM

ಜಾಗತಿಕ ಆರೋಗ್ಯ ಭದ್ರತೆ ಮತ್ತು ಸುಸ್ಥಿರತೆಗೆ ಭಾರತ ಬದ್ಧವಾಗಿ ನಿಂತಿದೆ ಎಂದು  ಕೇಂದ್ರ ಆರೋಗ್ಯ ಸಚಿವ  ಜೆ.ಪಿ.ನಡ್ಡಾ ಹೇಳಿದ್ದಾರೆ.

Advertisement

ಔಷಧ  ನಿಯಂತ್ರಣಾ ಸಂಸ್ಥೆಗಳ 19ನೇ ಅಂತಾರಾಷ್ಟ್ರೀಯ ಸಮಾವೇಶದ ಉದ್ವಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ, ಕೋವಿಡ್‌ ಸಾಂಕ್ರಾಮಿಕದ ವೇಳೆ, ಆರೋಗ್ಯ ಸ್ಥಿತಿ ಸ್ಥಾಪಕತ್ವದಲ್ಲಿ ಜಾಗತಿಕ  ನಾಯಕನಾಗಿ  ಹೊರಹೊಮ್ಮಿದ್ದು ಮಾತ್ರವಲ್ಲದೆ, ಔಷಧ ಪ್ರಪಂಚದಲ್ಲಿ  ತನ್ನ ಪಾತ್ರವನ್ನುನಿರೂಪಿಸಿದೆ. ಭಾರತ, ಆರೋಗ್ಯ ರಕ್ಷಣೆ,ಮೂಲಸೌಕರ್ಯವನ್ನು ವಿಸ್ತರಿಸಿದ್ದು, ಮಾತ್ರವಲ್ಲದೆ,  ದೇಶೀಯ ಮತ್ತು  ಜಾಗತಿಕ ಬೇಡಿಕೆ  ಪೂರೈಕೆಗಾಗಿ  ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿದೆ. ಪ್ರಮುಖ ಔಷಧಗಳು ಮತ್ತು ಲಸಿಕೆಗಳು  ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಆಮದು  ಮಾಡಿಕೊಳ್ಳುವ  ಔಷಧಗಳ ಪರೀಕ್ಷೆಗೆ,  ವಿವಿಧ ಎಂಟು ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು,  ಇನ್ನೂ ಎರಡು ಪ್ರಯೋಗಾಲಯಗಳು ಸ್ಥಾಪನೆಯಾಗುವ ಅಂತಿಮ ಹಂತದಲ್ಲಿವೆ. ಬಂದರುಗಳಲ್ಲಿ,  ಎಂಟು ಮಿನಿ  ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಸುಮಾರು  ಶೇಕಡ 95 ರಷ್ಟು  ನಿಯಂತ್ರಣಾ ಪ್ರಕ್ರಿಯೆಗಳನ್ನು  ಡಿಜಿಟಲೀಕರಣಗೊಳಿಸಲಾಗಿದೆ. ವೈದ್ಯಕೀಯ ಉಪಕರಣಗಳ ಉದ್ಯಮವನ್ನೂ  ಇದೀಗ  ನಿಯಂತ್ರಣಕ್ಕೊಳಪಡಿಸಲಾಗಿದೆ ಎಂದು ನಡ್ಡಾ ತಿಳಿಸಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ | ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ | ಮತ್ತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
August 18, 2025
9:25 PM
by: The Rural Mirror ಸುದ್ದಿಜಾಲ
ಬಗರ್ ಹುಕುಂ ಸಾಗುವಳಿ | ಸಕ್ರಮಕ್ಕಾಗಿ 42289 ರೈತರಿಂದ ಅರ್ಜಿ
August 18, 2025
9:00 PM
by: The Rural Mirror ಸುದ್ದಿಜಾಲ
ಶುದ್ಧ ಕನ್ನಡ ಪದ ಮತ್ತೆ ವಿಜೃಂಭಿಸಲಿ – ರಾಘವೇಶ್ವರ ಶ್ರೀ
August 18, 2025
8:37 PM
by: The Rural Mirror ಸುದ್ದಿಜಾಲ
ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಾರೀ ಮಳೆ | ಪ್ರವಾಹಕ್ಕೆ ಏಳು ಮಂದಿ ಬಲಿ
August 18, 2025
8:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group