ದಿನದಿಂದ ದಿನಕ್ಕೆ ಹವಾಮಾನದಲ್ಲಿ ಭಾರಿ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಈ ಬಗ್ಗೆ ಪ್ರಕೃತಿಯೇ ಎಚ್ಚರಿಸಿದರು ನಾವುಗಳು ಇನ್ನು ಎಚ್ಚೆತ್ತುಕೊಂಡಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈಗಾಗಲೇ ವಿಶ್ವದಲ್ಲಿ ಹಲವು ಸಮಸ್ಯೆಗಳು ಉಲ್ಬಣಿಸಿವೆ. ಅದರಲ್ಲಿ ಅಕಾಲಿಕ ಮಳೆ, ಭೂಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಈಗಾಗಲೇ ಹೆಚ್ಚಾಗಿವೆ. ಆದರೆ, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಭೀಕರವಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ಕರೆಗಂಟೆ ಬಂದಿದೆ.
ನಿರಂತರ ಹವಾಮಾನ ಬದಲಾವಣೆಯಿಂದಾಗಿ ವಿಶ್ವದ 50 ಪ್ರದೇಶಗಳಲ್ಲಿ ಸಮಸ್ಯೆ ಆಗಲಿದ್ದು, ದೇಶದ 9 ರಾಜ್ಯಗಳನ್ನೂ ಇದರಲ್ಲಿ ಗುರುತಿಸಲಾಗಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದ ಒಂಬತ್ತು ರಾಜ್ಯಗಳು ಹವಾಮಾನ ಬದಲಾವಣೆಯ ಅಪಾಯಗಳಿಂದಾಗಿ ನಿರ್ಮಿತ ಪರಿಸರಕ್ಕೆ ಹಾನಿಯಾಗುವ ಅಪಾಯವನ್ನು ಎದುರಿಸುತ್ತಿರುವ ವಿಶ್ವದ ಅಗ್ರ 50 ಪ್ರದೇಶಗಳಲ್ಲಿ ಸೇರಿದೆ.
ದೇಶದ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಭಾರತದ ಒಂಬತ್ತು ರಾಜ್ಯಗಳು ಹವಾಮಾನ ಬದಲಾವಣೆಯ ಅಪಾಯಗಳಿಂದಾಗಿ ನಿರ್ಮಿತ ಪರಿಸರಕ್ಕೆ ಹಾನಿಯಾಗುವ ಅಪಾಯವನ್ನು ಎದುರಿಸುತ್ತಿರುವ ವಿಶ್ವದ ಅಗ್ರ 50 ಪ್ರದೇಶಗಳಲ್ಲಿ ಸೇರಿವೆ ಎಂದು ಹೊಸ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಗ್ರಾಸ್ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್” ಎಂಬ ಶೀರ್ಷಿಕೆಯ ವರದಿಯು 2050 ರಲ್ಲಿ ಪ್ರಪಂಚದಾದ್ಯಂತ 2,600 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಭೌತಿಕ ಹವಾಮಾನ ಅಪಾಯವನ್ನು ಎದುರಿಸುತ್ತವೆ ಎಂದು ವರದಿ ಮಾಡಿದೆ. ವರದಿಯು ಆಸ್ಟ್ರೇಲಿಯಾ ಮೂಲದ ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ ಅಥವಾ XDI ಎಂಬ ಸಂಸ್ಥೆ ಸಿದ್ಧಪಡಿಸಿದೆ.
ಇನ್ನು ವಿಶ್ವದಲ್ಲಿ ಪ್ರವಾಹ, ಕಾಡಿನ ಬೆಂಕಿ ಮತ್ತು ಸಮುದ್ರದ ನೀರಿನ ಮಟ್ಟ ಏರಿಕೆಯಂತಹ ಹವಾಮಾನ ವೈಪರೀತ್ಯಗಳಿಂದ ಕಟ್ಟಡಗಳು ಮತ್ತು ಆಸ್ತಿಗಳಿಗೆ ಹಾನಿಯುಂಟಾಗಲಿದೆ. ವಿಶ್ಲೇಷಣೆಯ ಪ್ರಕಾರ, 2050ರಲ್ಲಿ ಅಗ್ರ 50 ಅಪಾಯದಲ್ಲಿರುವ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಶೇಕಡಾ 80ರಷ್ಟು ಚೀನಾ, ಅಮೆರಿಕ ಮತ್ತು ಭಾರತದಲ್ಲಿವೆ ಎಂಬ ಆಂಶ ಆತಂಕಕ್ಕೆ ಕಾರಣವಾಗಿದೆ.
ಚೀನಾದ ನಂತರ, ಭಾರತವು ಅಗ್ರ 50 ರಲ್ಲಿ ಅತಿ ಹೆಚ್ಚು ಸಂಕಷ್ಟದ ರಾಜ್ಯಗಳನ್ನು ಹೊಂದಿದೆ. ಈ ವರದಿಯ ಅನ್ವಯ ಬಿಹಾರ (22 ನೇ ಸ್ಥಾನ), ಉತ್ತರ ಪ್ರದೇಶ (25ನೇ ಸ್ಥಾನ), ಅಸ್ಸಾಂ (28ನೇ ಸ್ಥಾನ),ರಾಜಸ್ಥಾನ (32ನೇ ಸ್ಥಾನ ), ತಮಿಳುನಾಡು (36ನೇ ಸ್ಥಾನ), ಮಹಾರಾಷ್ಟ್ರ ( 38ನೇ ಸ್ಥಾನ), ಗುಜರಾತ್ (48ನೇ ಸ್ಥಾನ), ಪಂಜಾಬ್ (50ನೇ ಸ್ಥಾನ) ಮತ್ತು ಕೇರಳ (52ನೇ ಸ್ಥಾನ)ದಲ್ಲಿದೆ.
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…