ದಿನದಿಂದ ದಿನಕ್ಕೆ ನಮ್ಮ ಪರಿಸರ(Environment) ವಿನಾಶದತ್ತ ಸಾಗುತ್ತಿದೆ. ಇದರ ಪರಿಣಾಮ ಮಳೆಕೊರತೆ(Rain Crisis), ಹೆಚ್ಚಿದ ತಾಪಮಾನ(Heat wave), ಪ್ರಳಯ(Flood), ವಿವಿಧ ತೆರನಾದ ರೋಗಗಳನ್ನು(Desease) ನಾವು ಎದುರಿಸುತ್ತಿದ್ದೇವೆ. ಇದಕ್ಕೆ ಮನುಷ್ಯನ ಅತಿಯಾಸೆಯೇ ಕಾರಣ. ಈಗಾಗಲೇ ನಮ್ಮ ಪ್ರಕೃತಿ ವಿನಾಶದತ್ತ ತಲುಪಿ ಅದರ ಪ್ರಕೋಪವನ್ನು ಮನುಜನಿಗೆ ತಿರುಗಿಸಿ ಕೊಡುತ್ತಿದೆ. ಇದರಿಂದ ಪಾರಾಗಬೇಕಾದರೆ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಹಾಗಾಗಿ ಇತ್ತೀಚೆಗೆ ತುಮಕೂರಿನ ಸರ್ಕಾರಿ ಕಾಲೇಜೊಂದರಲ್ಲಿ ಪ್ರಸ್ತುತ ನೀರಿನ ಹಾಗು ಭೂಮಿಯ ಸಮಸ್ಯೆಗಳ ಬಗೆಗಿನ ಚರ್ಚೆ ನಡೆಯಿತು. ಈ ಬಗ್ಗೆ ಬಂದಿರುವ ಸಂಕ್ಷಿಪ್ತ ವರದಿ ಇಲ್ಲಿದೆ..
1. ಇಂದಿನ ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳೇನು..? ಬೃಹತ್ ಕಾರ್ಖಾನೆಗಳೋ.? ಮನೆ ಮುಂಗಟ್ಟಿನ ದುಂದು ವೆಚ್ಚವೋ.? ಅಥವಾ ಕಾರ್ಖಾನೆಗಳಿಂದಲೀ , ಕೃಷಿ ಪದ್ದತಿಯಿಂದಲೋ.? : ನಿಮಗೆ ಗೊತ್ತಿರಲಿ, ಶೇಕಡ 89% ನೀರು ಸುಮ್ಮನೆ ಹಾಳಾಗುತ್ತಿರುವುದು ಕಾರ್ಖಾನೆ-ಕೃಷಿಯಿಂದ..!!!
2. ಇಂದಿನ ಹವಾಮಾನ ಬಿಕ್ಕಟ್ಟಿಗೆ ಮುಖ್ಯ ಕಾರಣವೇನು..? : ಬೆಟ್ಟ ಗುಡ್ಡ ಹಾಳುಗೆಡವಿದಕ್ಕೋ.? ಜನಸಂಖ್ಯೆ ಹೆಚ್ಚಾಗಿದ್ದಕ್ಕೋ.? ಎಲ್ಲೆಲ್ಲೂ ಕಾಂಕ್ರೀಟ್ ಮಯವಾದ ಕಾರಣಕ್ಕೋ.? ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೋ.? ಕ್ಯಾಪಿಟಲಿಸ್ಟ್ ಗಳ ದಬ್ಬಾಳಿಕೆ ಹಾಗು ಹಾವಳಿಗೋ.? : ಭೂ ಮಂಡಲದಲ್ಲಿ ಹೆಚ್ಚು ಕಡಿಮೆ ಶೇ90% ಜನ ಸರಳವಾಗಿಯೇ ಬದುಕುತ್ತಿದ್ದಾರೆ… ಕ್ಯಾಪಿಟಲಿಸ್ಟ್ / ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದ್ದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಡೆವಲಪ್ಮೆಂಟ್ ಅನ್ನೋ ಹೆಸರಿಟ್ಟುಕೊಂಡು ಲೂಟಿ ಹೊಡೆಯುತ್ತಿದ್ದಾರೆ ಮತ್ತು ಅಂಥವರಿಗೆ ನಮ್ಮ ಸರ್ಕಾರದವರು ರತ್ನಗಂಬಳಿ ಹಾಸಿ ಕರೆಯುತ್ತಿದ್ದಾರೆ.. ಇದು ಮುಖ್ಯ ಕಾರಣ..!!!
3. ಹಾಗಾದ್ರೆ, ಇಂದಿನ ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ.? ಖಂಡಿತ ಸಾಧ್ಯ. ಮನುಷ್ಯನು ಮಾಡಿಕೊಂಡ ಸಮಸ್ಯೆ, ಅವನೇ ಉತ್ತರ ಹುಡುಕಿಕೊಳ್ಳಬೇಕು ಅಷ್ಟೇ. ಲಾಪೋಡಿಯದ ಲಕ್ಷ್ಮಣ್ ಸಿಂಗ್, ಮಹಾರಾಷ್ಟ್ರದ ಪಾನಿ ಫೌಂಡೇಶನ್, ರಾಜಸ್ಥಾನದ ರಾಜೇಂದ್ರ ಸಿಂಗ್ ಅಂತಹವರು ನಮಗೆ ನಿದರ್ಶನ.. ಜನ ಚಳುವಳಿಯಿಂದ ಖಂಡಿತ ಸಾಧ್ಯವಿದೆ..!!! ಪ್ರೀತಿ, ಮಮತೆ, ಅನುಬಂಧ, ತಾಳ್ಮೆ ಹಾಗು ಸಹನೆ ಹೊಂದಿರುವ ನಾಯಕ/ನಾಯಕಿಯ ಮುಂದಾಳತ್ವದ ಅವಶ್ಯಕತೆಯಿದೆಯಷ್ಟೆ. ಕೃಷಿ ನೀತಿ, ಎಕಾನಮಿ ಹಾಗು ಡೆವಲಪ್ಮೆಂಟ್ ನ ದೃಷ್ಟಿಕೋನ, ಯುವಕರಲ್ಲಿ ನೈಸರ್ಗಿಕ ಸಮನ್ಮೂಲಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಇನ್ನ ಇಪತ್ತು-ಮೂವತ್ತು ವರ್ಷಗಳಲ್ಲಿ ಈ ಬಿಕಟ್ಟಿನಿಂದ ಹೊರಬರಲು ಖಂಡಿತ ಸಾಧ್ಯವಿದೆ..
ಇಲ್ಲದಿದ್ದರೆ ಏನಾದೀತು..? : ಕೃಷಿಭೂಮಿ ಮರುಭೂಮಿಯಾಗುವುದು, ಅಪೌಷ್ಠಿಕತೆ ತಾಂಡವ ವಾಡುವುದು, ನೀರಿಗಾಗಿ ಹಪಾಹಪಿತನ ಹುಟ್ಟುವುದು, ಉಸಿರಾಡೋ ಗಾಳಿಗೂ ಅಭಾವ ಹೆಚ್ಚುವುದು, ಮನುಷ್ಯನ ಜೀವಿತ ಅವಧಿ ಕ್ಷೀಣಿಸುವುದು, ಬಡಜನರಿಗಂತೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಗ-ರುಜಿನಗಳಿಗೆ ಸಿಕ್ಕಿ ನರಳುವಂತಾಗುತ್ತದೆ, ಇನ್ನೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಭಿಕಾರಿಗಳಾಗುವರು, ಬಹಳಷ್ಟು ಗಿಡ-ಮರಗಳು, ಜೀವ-ಜಂತುಗಳು ಮಾಯವಾಗುವವು, ಬಿಸಿಲಿನ ಆರ್ಭಟ ಹೆಚ್ಚುವುದು, ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಸಮುದ್ರದ ಪಾಲಾಗುವುದು… ಹೇಳುತ್ತಿದ್ದರೆ ಕೊನೆಯಿಲ್ಲ… ಹೀಗೆ ಭೀಕರ ಸ್ಥಿತಿಗೆ ಸಿಲುಕಿ, ನರಳಾಟದ ಬದುಕು ನಮ್ಮ ಮುಂದೆ ಈಗ ಕನ್ನಡಿ ಹಿಡಿದಂತಿದೆ..
4. ನಮ್ಮ ಮುಂದಿನ ಸ್ಥಿತಿಗತಿ ಹೀಗಿದ್ದಲ್ಲಿ, ನಾವೇನು ಮಾಡಬೇಕು.?
ಹೀಗೆ ಹತ್ತು ಹಲವು ಬಗೆಯ ಚಿಂತನೆ ಚರ್ಚೆಗಳೊಂದಿಗೆ..ಕಥೆಗಳ ಸ್ವರೂಪಗೊಂದಿಗೆ ಎರಡು ತಾಸು ವಿದ್ಯಾರ್ಥಿಗಳ ಜೊತೆಗಿನ ಸಂವಾದ – ಚರ್ಚೆ ನಡೆಯಿತು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…