ಚಾರ್ಲಿ ಸಿನಿಮಾ ನೋಡಿದವರಿಗೆ ನಾಯಿ ಪ್ರೀತಿಯ ಬಗ್ಗೆ ಅರಿವು ಇದೆ. ಆದರೆ ಗ್ರಾಮೀಣ ಭಾಗದಲ್ಲಿ ನಿತ್ಯವೂ ಅಂತಹದ್ದೇ ಹಲವು ಚಾರ್ಲಿ ಇದೆ. ಮನುಷ್ಯ ಪ್ರೀತಿ, ನಿಷ್ಟೆಯ ನಾಯಿಗಳು ಇವೆ. ಇಲ್ಲೊಂದು ನಾಯಿ 4 ಕಿಮೀ ದೂರು ಸ್ಕೂಟರ್ ಹಿಂದೆ ಓಡಿಕೊಂಡು ಬಂದಿದೆ. ಕಾರಣ ಪ್ರೀತಿ ಮಾತ್ರಾ…!. ಈ ಘಟನೆ ನಡೆದ್ದು ಸುಳ್ಯ ತಾಲೂಕಿನ ಬಳ್ಪ-ಕಮಿಲದಲ್ಲಿ.
ಶ್ವಾನ ಪ್ರೀತಿ. 4 ಕಿಮೀ ಸ್ಕೂಟರ್ ಹಿಂದೆ ಓಡಿದ ನಾಯಿ. ಕಾರಣ ಪ್ರೀತಿ. pic.twitter.com/hYZbZ8hOhn
Advertisement— theruralmirror (@ruralmirror) October 29, 2022
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದ ಬಳಿಯ ರತನ್ ಅವರು ಬಳ್ಪಕ್ಕೆ ಹೋಗುತ್ತಿದ್ದರು. ಈ ಸಂದರ್ಭ ನಾಯಿಯೊಂದು ಬಳ್ಪದ ಗೋಪಾಲ್ ಎಂಬವರ ಗ್ಯಾರೇಜ್ ಬಳಿ ಇರುತ್ತಿತ್ತು. ಗ್ಯಾರೇಜ್ ಮಾಲಕರು ಈ ನಾಯಿಗೆ ತಿಂಡಿ ಹಾಕುತ್ತಿದ್ದ ಕಾರಣ ಅದೇ ಆಸುಪಾಸಲ್ಲಿ ಇರುತ್ತಿತ್ತು. ಈ ನಾಯಿಯನ್ನು ರತನ್ ಅವರು ಕೊಂಡೋಗುವಂತೆ ಗೋಪಾಲ್ ಹೇಳಿದ್ದರು. ನಿರಾಕರಿಸಿದ ರತನ್ ನಾಯಿಗೆ ಬಿಸ್ಕೇಟ್ ಹಾಕಿ ಸುಮ್ಮನಿರುತ್ತಿದ್ದರು. ಈಚೆಗೆ ಗ್ಯಾರೇಜಿಗೆ ಹೋಗಿದ್ದ ರತನ್ ವಾಪಾಸ್ ಮನೆಗೆ ಬರುವಾಗ ಸ್ಕೂಟರ್ ಹಿಂದೆಯೇ ಓಡಿ ಬಂದ ನಾಯಿ 4 ಕಿಮೀ ದೂರದಲ್ಲಿರುವ ರತನ್ ಅವರ ಮನೆ ಸೇರಿತು. ರಸ್ತೆ ಬದಿಯಲ್ಲಿ ಓಡುತ್ತಲೇ ಬಂದ ನಾಯಿ ಗಮನ ಸೆಳೆಯಿತು.

ರತನ್ ಮನೆಗೆ ಬಂದಿರುವ ನಾಯಿ ಅವರ ಪುತ್ರಿಯ ಜೊತೆ
ಇದು ಹೆಣ್ಣು ನಾಯಿಯಾದ್ದರಿಂದ ರಸ್ತೆ ಬದಿ ಯಾರೋ ಬಿಟ್ಟು ತೆರಳಿದ್ದರು. ಆದರೆ ನಾಯಿಯ ಪ್ರೀತಿ ಹಾಗೂ ನಿಷ್ಟೆ ಗಮನ ಸೆಳೆಯಿತು. ಈಗ ರತನ್ ಅವರು ಮನೆಯಿಂದ ಹೊರಹೋಗುತ್ತಿವಾಗ ಜೊತೆಯಲ್ಲೇ ಬರುತ್ತದೆ.
ರತನ್ ಅವರು ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಬಳ್ಪದ ಕಾಡಿನ ಬಳಿ ಯಾರೋ ಹೋರಿಯನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಅವರು ಮನೆಗೆ ತಂದು ಸಾಕಿದ್ದಾರೆ. ಈಗ ಅವರ ತೋಟದ ಸುತ್ತೆಲ್ಲಾ ಹುಲ್ಲು ಮೇಯುತ್ತಿರುತ್ತದೆ. ಅಂಬು ಎಂದು ಹೆಸರಿಟ್ಟಿದ್ದಾರೆ. ಮನೆಯಿಂದ ಹೆಸರು ಕರೆದ ತಕ್ಷಣ ಅಂಗಳಕ್ಕೆ ಬರುವ ಈ ಕರುವಿನ ಪ್ರೀತಿ ಹೆಚ್ಚು ಗಮನ ಸೆಳೆಯುತ್ತದೆ.

ರತನ್

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಈ ಚಾರ್ಲಿಗೆ ನೀವು ಏನು ಹೇಳುತ್ತೀರಿ… ? | 4 ಕಿಮೀ ದೂರ ಸ್ಕೂಟರ್ ಹಿಂದೆ ಓಡಿ ಬಂದ ನಾಯಿ…! |"