ಎಷ್ಟೋ ಹಳ್ಳಿಗಳಲ್ಲಿ(Village) ರೈತರಿಗೆ(Farmer) ಬೇಕಾದ ಸೌಲಭ್ಯಗಳು ಇನ್ನು ಅವರನ್ನು ತಲುಪಿಲ್ಲ. ಹಾಗೆ ಹಳ್ಳಿಗಳ ಕಥೆನೂ ಅದೇ.. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ(Basic amenities) ಅದೆಷ್ಟೋ ಹಳ್ಳಿಗಳ ಜನ ಇಂದು ಬದುಕುತ್ತಿದ್ದಾರೆ. ಕೆಲವೊಮ್ಮೆ ಈ ಸರ್ಕಾರಗಳನ್ನು(Govt)ನಂಬಿದರೆ ಪ್ರಯೋಜನ ಇಲ್ಲ ಎಂದು ತಮಗೆ ಬೇಕಾದ ಕೆಲಸಗಳನ್ನು ತಾವೇ ಒಗ್ಗೂಡಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ(Uttara kannada) ಕುಮಟಾದ ಜನ ತಮ್ಮೂರಿಗೆ ಬೇಕಾದ್ದನ್ನು ತಾವೇ ಮಾಡಿಕೊಳ್ಳುವ ಸ್ವಾವಲಂಬಿಗಳು.
ಕುಮಟಾ ತಾಲೂಕಿನ ಬಗ್ಗೋಣ ಎಂಬ ಊರಲ್ಲಿ ಒಂದು ನದಿ(River) ಇದೆ. ಈ ನದಿ ಉಪ್ಪುನೀರು(Salt water) ಹಾಗೂ ಸಿಹಿನೀರಿನ(Sweet water) ಸಂಗಮವಾಗುವ ಜಾಗ. ಬೆಳೆ ಬೆಳೆಯಬೇಕಾದರೆ, ಜನ ಬದುಕಬೇಕಾದರೆ ಸಿಹಿ ನೀರು ಅತ್ಯಗತ್ಯ. ಇದು ಅನೇಕ ಊರಿಗೆ ಸಂಪರ್ಕ ಕಲ್ಪಿಸೋ ಊರು. ಇಲ್ಲಿ ಸಿಹಿ ನೀರನ್ನು ಹಲಗೆ ಹಾಗೂ ಮಣ್ಣಿನ ತಾತ್ಕಾಲಿಕ ಅಣೆಕಟ್ಟು(Dam) ಮಾಡಿಕೊಂಡು ಸಂಗ್ರಹಿಸಲಾಗುತ್ತಿತ್ತು. ಆದರೆ ಪ್ರತಿ ವರ್ಷ ಮಳೆ(Rain) ಬಂತೆಂದರೆ ಕಟ್ಟ ಪೂರ್ತಿ ಕೊಚ್ಚಿ ಹೋಗಿತ್ತು. ನಂತರ ಪ್ರತಿ ವರ್ಷ ಗ್ರಾಮಸ್ಥರು ತಮ್ಮ ಕೈಯಿಂದಲೇ 50,000-60,000 ಖರ್ಚು ಮಾಡಿ ಹೀಗೆ ಅಣೆಕಟ್ಟನ್ನು ಕಟ್ಟಿಕೊಳ್ಳುತ್ತಾರೆ. ಈ ಪರಿಪಾಠ 10 ವರ್ಷದಿಂದ ಜಾರಿಯಲ್ಲಿದೆ.
ಒಗ್ಗಟಾಗಿ ಸೇತುವೆ ನಿರ್ಮಾಣ : ಬಗ್ಗೋಣ ಊರಿಗೆ ಊರೇ ಒಗ್ಗಟ್ಟಾಗಿ ಈ ಸೇತುವೆ ಕಟ್ಟಿದೆ. ಅಡಿಕೆ ದಬ್ಬೆಗಳನ್ನು ಹಾಗೂ ಮಣ್ಣನ್ನು ಬಳಸಿಕೊಂಡು ಮಾಡಿರುವ ಈ ತಡೆಗೋಡೆಯಿಂದ ಉಪ್ಪು ನೀರು ಬೇರ್ಪಟ್ಟು ಸುಮಾರು 500 ಎಕರೆ ಕೃಷಿ ಭೂಮಿ ಸೇರಿದಂತೆ 800 ಎಕರೆ ಭೂ ಪ್ರದೇಶ ಉಪ್ಪು ನೀರಿನಿಂದ ಮುಕ್ತವಾಗಿದೆ. ಬಗ್ಗೋಣ, ಊರು ಕೇರಿ, ಹೆರವಟ್ಟಾ ಊರಿನ ಜನ ಇದರ ಲಾಭ ಪಡೆಯುತ್ತಿದ್ದಾರೆ. ಜನರೇ ಅಣೆಕಟ್ಟಿನ ತರಹ ರಚನೆಯೊಂದನ್ನು ಮಾಡಿಕೊಂಡು ಅನೇಕರಿಗೆ ಮಾದರಿಯಾಗಿದ್ದಾರೆ. ಈ ಮೂಲಕ 800 ಎಕರೆ ಜಮೀನನ್ನು ಉಪ್ಪು ನೀರಿನಿಂದ ರಕ್ಷಿಸಿಕೊಂಡಿದ್ದಾರೆ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…