Advertisement
MIRROR FOCUS

15 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ | ವರ್ಷಕ್ಕೆ 30 ಲಕ್ಷ ಆದಾಯ ಗಳಿಸುತ್ತಿರುವ ರೈತ..!

Share

ಯಾರು ಕೈ ಬಿಟ್ಟರೂ ಭೂಮಿ ಕೈಬಿಡಲ್ಲ ಅನ್ನುವ ಮಾತನ್ನು ನಂಬಿ ಇಂದಿಗೂ ಅನೇಕ ರೈತರು(Farmer) ತಮ್ಮ ಜಮೀನಿನಲ್ಲಿ ಕೃಷಿ(Agricultural Land) ಮಾಡುತ್ತಾರೆ. ಆದರೆ ಭೂಮಿ ತಾಯಿಗೆ ವಿಷ ಉಣಿಸದೆ, ಸರಿಯಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುವವರು ಬೆರಳೆಣಿಕೆಯವರು ಮಾತ್ರ. ಹಾಗೆ ನಿರಂತರ ಪರಿಶ್ರಮ, ಶ್ರದ್ದೆ ಬೇಕೇ ಬೇಕು. ಆಗ ಮಾತ್ರ ಭೂತಾಯಿ ಒಲಿಯುತ್ತಾಳೆ. ಹಾವೇರಿಯ(Haveri) ಸಂಗೂರು ಗ್ರಾಮದ ಕೃಷಿಕ ಭುವನೇಶ್ವರ್​ ಶಿಡ್ಲಾಪುರ ಅವರು ತಮ್ಮ 15 ಎಕರೆ ಜಮೀನಿನಲ್ಲಿ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿ(Organic and integrated farming systems) ಅನುಸರಿಸಿ ​  ವಿವಿಧ ಬೆಳೆಗಳಿಂದ ವರ್ಷಕ್ಕೆ 30 ಲಕ್ಷ ರೂ. ಆದಾಯ(Income) ಗಳಿಸುತ್ತಿದ್ದಾರೆ.

Advertisement
Advertisement

ನೀರಾವರಿ ಸೌಲಭ್ಯವಿರುವ ಎಂಟು ಎಕರೆ ಜಮೀನಿನಲ್ಲಿ ಅಡಿಕೆ, ಕರಿಬೇವು, ನಿಂಬೆ, ತೆಂಗು ಬೆಳೆ ಬೆಳೆದಿರುವ ಇವರು, ತೋಟದ ಸುತ್ತಲೂ ಸಾಗುವಾನಿ ಮತ್ತು ಹೆಬ್ಬೇವು ಮರಗಳನ್ನು ಬೆಳೆಸಿದ್ದಾರೆ. ಇದರ ಜೊತೆಗೆ ಅಡಿಕೆ ತೋಟದಲ್ಲಿ ಗೋವಿನಜೋಳ, ಕಬ್ಬು, ಹಲಸಂದಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಗುಡಬೈ ಹೇಳಿ ಭುವನೇಶ್ವರ್​ ಅವರು ಕಳೆದ ಆರು ವರ್ಷಗಳಿಂದ ಸಾವಯುವ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಅಡಿಕೆ ಮರಗಳಿಗಾಗಿ ಸೆಣಬು ಬೆಳೆದಿದ್ದಾರೆ.

Advertisement

ಸೆಣಬು ಬೆಳೆಯುತ್ತಿದ್ದಂತೆ ಅದನ್ನು ಕತ್ತರಿಸಿ ಹಸಿರೆಲೆ ಗೊಬ್ಬರವನ್ನಾಗಿ ಅಡಿಕೆ ಮರಗಳಿಗೆ ಹಾಕುವ ಇವರು​, ಇದರ ಜೊತೆ ತಿಪ್ಪೆ ಮತ್ತು ಕೋಳಿ ಗೊಬ್ಬರವನ್ನೂ ಅಡಿಕೆ ಮರಗಳಿಗೆ ಹಾಕುತ್ತಾರೆ. ಪರಿಣಾಮ ಇವರ ತೋಟ ಇಂತಹ ಬರಗಾಲದಲ್ಲಿ ಸಹ ಹಸಿರಿನಿಂದ ನಳನಳಿಸುತ್ತಿದೆ. ಎಂಟು ಎಕರೆ ಜಮೀನಿನಲ್ಲಿ ಐದು ಸಾವಿರಕ್ಕೂ ಅಧಿಕ ಅಡಿಕೆ ಮರ ನೆಟ್ಟಿದ್ದಾರೆ. ಅಡಿಕೆ ಮರ ನೆಟ್ಟು ಐದು ವರ್ಷಗಳಾಗಿದ್ದು, ಈ ವರ್ಷದಿಂದ ಅಡಿಕೆ ಫಸಲು ಬರಲಾರಂಭಿಸಿದೆ.

ಫಸಲು ಪ್ರಾರಂಭಿಸಿರುವ ಬೆಳೆಗಳು: ತಮ್ಮ ಕೃಷಿ ಜಗತ್ತಿನ ಬಗ್ಗೆ ಮಾತನಾಡುವ ಭುವನೇಶ್ವರ್, “50 ಕರಿಬೇವಿನ ಗಿಡಗಳನ್ನು ನೆಟ್ಟಿದ್ದು, ಅವುಗಳಿಂದ ತಿಂಗಳಿಗೊಮ್ಮೆ ಆದಾಯ ಪಡೆಯುತ್ತಾರೆ. 50 ನಿಂಬೆ ಗಿಡಗಳನ್ನು ಹಾಕಿದ್ದು, ಅವುಗಳೂ ಸಹ ಈ ವರ್ಷದಿಂದ ಫಸಲು ನೀಡಲಿವೆ. ಅಡಕೆ ಮರಗಳು ವರ್ಷಕ್ಕೆ ಎರಡು ಬಾರಿ ಫಸಲು ಬಿಡುತ್ತವೆ. ಜೊತೆಗೆ ಮೆಕ್ಕೆಜೋಳ, ಶೇಂಗಾ ಬೆಳೆಗಳು ಆರು ತಿಂಗಳಿಗೊಮ್ಮೆ ಆದಾಯ ತರುತ್ತವೆ. ಇದರಿಂದ ನನಗೆ ಒಂದಿಲ್ಲಾ ಒಂದು ಬೆಳೆಯಿಂದ ಆದಾಯ ಬರುತ್ತಲೇ ಇರುತ್ತದೆ” ಎನ್ನುತ್ತಾರೆ.

Advertisement

ಅಡಿಕೆ ಮರಗಳಿಗೆ ಬಿಸಿಲಿನ ಎಫೆಕ್ಟ್ ಆಗಬಾರದು ಎಂದು ಅವುಗಳ ನಡುವೆ ಕಬ್ಬು ಬೆಳೆದಿದ್ದಾರೆ. ಸಮೀಪದಲ್ಲಿ ಸಂಗೂರು ಸಕ್ಕರೆ ಕಾರ್ಖಾನೆ ಇರುವ ಕಾರಣ ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ. ವರ್ಷಕ್ಕೆ ಸುಮಾರು ಸಾವಿರ ಟನ್ ಕಬ್ಬು ಪೂರೈಸುತ್ತಾರೆ.

ಇನ್ನು ಜಮೀನಿನ ಪಕ್ಕದಲ್ಲಿಯೇ ವರದಾ ನದಿ ಹರಿಯುತ್ತಿದ್ದು, ಇವರಿಗೆ ವರದಾನವಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹೆಚ್ಚು ಪೋಷಕಾಂಶಗಳನ್ನು ತೋಟಕ್ಕೆ ಒದಗಿಸುತ್ತದೆ. ವರ್ಷದ 6 ತಿಂಗಳು ವರದಾ ನದಿ ನೀರು ಬಳಸುವ ಇವರು ಉಳಿದ ತಿಂಗಳುಗಳಲ್ಲಿ ಕೊಳವೆ ಬಾವಿ ನೀರು ಬಳಿಸುತ್ತಾರೆ. ಬೋರಿನ ನೀರಿಗಿಂತ ನದಿ ನೀರು ಹೆಚ್ಚು ಫಲವತ್ತತೆ ತಂದುಕೊಡುತ್ತದೆ. ಇನ್ನು ಸಾಗುವಾನಿ ಮತ್ತು ಹೆಬ್ಬೇವು ಒಂದು ಬಾರಿ ಮಾತ್ರ ಆದಾಯ ತರುವಂತ ಮರಗಳಾಗಿದ್ದು, ಇವುಗಳು ಒಂದು ಥರ ಠೇವಣಿ ಇಟ್ಟಂತೆ ಎನ್ನುತ್ತಾರೆ ಸಮಗ್ರ ಕೃಷಿಕ.

Advertisement

ವರ್ಷಕ್ಕೆ 30 ಲಕ್ಷ ಆದಾಯ: “ವರ್ಷಕ್ಕೆ ಒಮ್ಮೆ ಅಡಿಕೆ ಮರ, ಕರಿಬೇವು, ನಿಂಬೆಗಿಡ, ತೆಂಗಿಗೆ ಸಾವಯುವ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಹಾಕುತ್ತೇನೆ. ತೋಟದಲ್ಲಿರುವ ಸೆಣಬು ತೋಟದಿಂದ ತೇವಾಂಶ ಕಡಿಮೆಯಾದಂತೆ ನೋಡಿಕೊಳ್ಳುತ್ತದೆ. ತೆಂಗು, ಅಡಕೆ, ನಿಂಬೆ, ಕರಿಬೇವು, ಗೋವಿನಜೋಳ, ಶೇಂಗಾ ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಂದ ವರ್ಷಕ್ಕೆ ಸುಮಾರು 30 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದೇನೆ” ಎಂದು ತಿಳಿಸಿದರು.

ಭುವನೇಶ್ವರ್​ ಒಬ್ಬರೇ ತೋಟವನ್ನು ನೋಡಿಕೊಳ್ಳುತ್ತಾರೆ. ಟ್ರ್ಯಾಕ್ಟರ್ ಸಹಾಯದಿಂದ ಬೇಸಾಯ ಮಾಡುತ್ತಾರೆ. ಉಳಿದ ಸಮಯದಲ್ಲಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದಾಗ ಅವರನ್ನು ಸಹ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಸಾವಯುವ ಕೃಷಿಗೆ ಇನ್ನುಷ್ಟು ಪ್ರಾಮುಖ್ಯತೆ ಬರಲಿದ್ದು, ರೈತರು ಸಾವಯುವ ಕೃಷಿಯತ್ತ ವಾಲುತ್ತಿದ್ದಾರೆ. ಇವರ ಸಾವಯುವ ಕೃಷಿ ಉಳಿದ ರೈತರಿಗೆ ಮಾದರಿಯಾಗಿದ್ದು, ಯುವ ರೈತರು ಇವರಿಂದ ಹೆಚ್ಚು ಕಲಿಯುವುದಿದೆ ಎನ್ನುತ್ತಾರೆ ಅಕ್ಕಪಕ್ಕದ ರೈತರು.

Advertisement

– ಅಂತರ್ಜಾಲ ಮಾಹಿತಿ

Bhuvaneshwar Shidlapura, a farmer of Sanguru village in Haveri, is earning Rs 30 lakh per year from various crops by following organic and integrated farming systems in his 15 acre land. Earning income.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

3 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

3 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

4 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

4 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

7 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

7 hours ago