ಕಬ್ಬು(Sugar cane) ಬಗ್ಗೆ ಕೇಳೇ ಇರುತ್ತೀರಿ, ಉತ್ತರ ಕರ್ನಾಟಕ(North Karnataka), ಹಳೇ ಮೈಸೂರು ಭಾಗ(Old Mysore), ಉತ್ತರ ಕನ್ನಡದ(Uttar Kannada) ಕೆಲ ಭಾಗದಲ್ಲೂ ಕಬ್ಬು ಬೆಳೆಯುತ್ತಾರೆ. ಕಬ್ಬಿನಲ್ಲಿ ವಿವಿಧ ಜಾತಿಗಳಿವೆ(Sugarcane breed). ಒಬ್ಬ ರೈತ(Farmer) ಹೆಚ್ಚೆಂದರೆ 3-4 ಬಗೆಯ ಕಬ್ಬನ್ನು ಬೆಳೆಯ ಬಹುದು. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ ಎಂಟು ಜಾತಿಯ ರಂಗು ರಂಗಿನ ಕಬ್ಬನ್ನು ಬೆಳೆದಿದ್ದಾರೆ. ಉತ್ತರ ಕನ್ನಡದ ಯಲ್ಲಾಪುರದ ಹೆಮ್ಮಾಡಿಯ ಕಾನುಕೊಡ್ಲಿಗೆ ಹೋದರೆ ಈ ಕಲರ್ ಕಲರ್ ಕಬ್ಬುಗಳ ಲೋಕವನ್ನು ನೋಡಬಹುದು.
8 ಜಾತಿಯ ಕಬ್ಬು ಬೆಳೆ : ಯಲ್ಲಾಪುರದ ಪ್ರಸಾದ್ ಹೆಗಡೆಯವರು ಸುಮಾರು 8 ಜಾತಿಯ ಕಬ್ಬುಗಳನ್ನು ಬೆಳೆದಿದ್ದಾರೆ, ಅವುಗಳು ಕೆಂಪು, ಬಿಳಿ, ಕಪ್ಪು, ಹಸಿರು-ಕೆಂಪು-ಕಪ್ಪು, ಗಿಳಿ ಹಸಿರು, ಕಪ್ಪು ಮಿಶ್ರಿತ ಹಿಮ ಬಣ್ಣದ ಕಬ್ಬುಗಳು ಇಲ್ಲಿವೆ. ಇವೆಲ್ಲವೂ ಕರ್ನಾಟಕದ ಹೊರಗೆ ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರ ಮೂಲದ ಕಬ್ಬುಗಳು ಕೆಲವು ಸ್ಥಳೀಯ ಕಬ್ಬುಗಳೂ ಕೂಡ ಇದರಲ್ಲಿವೆ. ಪ್ರಾಯೋಗಿಕವಾಗಿ ಬೆಳೆಯಲ್ಪಡುತ್ತಿರುವ ಈ ಕಬ್ಬುಗಳು ಬಣ್ಣದಲ್ಲಿ ಮಾತ್ರವಲ್ಲ ರುಚಿಯಲ್ಲೂ ವಿಭಿನ್ನ.
ರೈನ್ ಬೋ ಕಬ್ಬು ಇದೆ: ಇದರಲ್ಲಿ ಬಾಳೆ ಕಬ್ಬು ಥೇಟ್ ಬಾಳೆ ಗಿಡದ ಹಾಗೆ ದಪ್ಪನಾಗಿ ಬಾಳೆಗಿಡದ ರೀತಿಯೇ ಬೆಳೆಯುತ್ತದೆ. ಹಾಗೆಯೇ ಬ್ಲ್ಯಾಕ್ ಕಬ್ಬು ಇದು ಆಂಧ್ರ ಮೂಲದ ಕಬ್ಬು ಇದು ಒಂದು ಬಿದಿರಿನಷ್ಟು ದಪ್ಪ ಇರುವ ಈ ಕಬ್ಬು ಅತೀ ಹೆಚ್ಚಿನ ರುಚಿ ಇರುವ ಹಾಗೂ ತುಂಬಾ ರಸ ಇರುವ ಕಬ್ಬು. ರೈನ್ ಬೋ ಕಬ್ಬು ಒಂದೇ ಕಬ್ಬಿನ ತುಂಡಲ್ಲಿ ಒಂದೊಂದು ಗಣ್ಣಿಗೂ ಹಸಿರು, ಕೆಂಪು, ನೀಲಿ, ಕಪ್ಪು ಬಣ್ಣವನ್ನು ಹೊಂದಿರುತ್ತದೆ.
ಕಪ್ಪು ಕಬ್ಬನ್ನು ಬಿಟ್ಟರೆ ರುಚಿಯಲ್ಲಿ ಎರಡನೇ ಸ್ಥಾನ ಇದಕ್ಕೆ ನಂತರ ಕೋಣನಕಟ್ಟೆ ಕಬ್ಬು ಎಂಬ ಸ್ಥಳೀಯ ಮಲೆನಾಡಿನ ಕಬ್ಬು. ಬೀಟ್ ರೂಟ್ ಕಬ್ಬು ಅಚ್ಚ ಕೆಂಪು ಬಣ್ಣದ ಕಬ್ಬಾಗಿದೆ. ಬಿಳಿ ಮೋರಿಸ್ ಕಬ್ಬು, ದಾಸ ಕಬ್ಬುಗಳೂ ಕೂಡ ಇಲ್ಲಿವೆ. ಎಂಟು ತಳಿಯ ಥರ ಥರದ ಕಬ್ಬುಗಳನ್ನು ನೋಡಲು ಈಗ ಬೇರೆ ರಾಜ್ಯಕ್ಕೆ ಹೋಗಬೇಕಿಲ್ಲ.
ರಂಗು ರಂಗಿನ ಕಬ್ಬು : ಇಲ್ಲಿ ಬಂದು ಕಬ್ಬುಗಳನ್ನು ನೋಡಿದರೆ ಇವ್ಯಾವುದೂ ಕಬ್ಬೇ ಎನಿಸಲು ಸಾಧ್ಯವಿಲ್ಲ ಯಾಕೆಂದರೆ ಒಂದು ಬಾಳೆಗಿಡದ ಹಾಗೆ ಮತ್ತೊಂದು ಬಿದಿರು ರೂಪದ ಕಬ್ಬು ಇದಕ್ಕೆ ಪ್ರಸಾದ್ ಹೆಗಡೆಯವರು ದೇಶ-ವಿದೇಶ ಓಡಾಡಿ ಶ್ರಮಪಟ್ಟಿದ್ದಾರೆ. ನಾವು ಕೇವಲ ಎರಡು ವಿಧದ ಕಬ್ಬನ್ನು ಬೆಳೆಸುತ್ತೇವೆ. ಅದು ವಾಣಿಜ್ಯೋದ್ದೇಶಕ್ಕಾಗಿ, ಆದರೆ ಈ ನಡುವೆ ಕೃಷಿ ಮಾಡೋದೆ ಕಸರತ್ತು ಎಂದು ಕೊಂಡಿರುವವರ ನಡುವೆ ಖುಷಿಯಿಂದ ಕೃಷಿ ಮಾಡಿ ರಂಗು ರಂಗಿನ ಕಬ್ಬು ಬೆಳೆದಿರುವ ಇವರ ಶ್ರಮ ಗಮನಾರ್ಹ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…