ಕಾರ್ಯಕ್ರಮಗಳು

ಗೋವಿಜ್ಞಾನ, ವಿಷಮುಕ್ತ ಕೃಷಿ ಹಾಗೂ ಗ್ರಾಮೋದ್ಯೋಗ ಆಧಾರಿತ ಸ್ವಾವಲಂಬಿ ಗ್ರಾಮ ನಿರ್ಮಾಣದ ಮಹಾ ಶಿಬಿರ

Share

ಗೋವಿಜ್ಞಾನ, ವಿಷಮುಕ್ತ ಕೃಷಿ ಹಾಗೂ ಗ್ರಾಮೋದ್ಯೋಗ ಆಧಾರಿತ ಸ್ವಾವಲಂಬಿ ಗ್ರಾಮ ನಿರ್ಮಾಣದ ಮಹಾ ಶಿಬಿರ ಮಾ. 22  25 ವರೆಗೆ ವಿಜಯಪುರದ ಹತ್ತಿರ ಇರುವ ಕಗ್ಗೋಡದ ಶ್ರೀ ರಾಮನಗೌಡ ಬಾ ಪಾಟೀಲ ಗೋರಕ್ಷಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ  ಹಲವು ವಿಷಯಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಗುವುದು.

Advertisement
  • ದೇಶಿ ಗೋ ವಂಶ ಹಾಗೂ ಗೋವಿಜ್ಞಾನದ ವಿಸ್ತೃತ ಮಾಹಿತಿ ಅಲ್ಲದೆ ಪಂಚ ಗವ್ಯಗಳಾದ ಹಾಲು, ಮೊಸರು ತುಪ್ಪ, ಗೋಮೂತ್ರ ಹಾಗೂ ಸಗಣಿಯಿಂದ ಅನೇಕ ಪ್ರಕಾರದ ನಿತ್ಯ ಉಪಯೋಗಿ ವಸ್ತುಗಳು ಹಾಗೂ ಕೆಲವು ಔಷಧಿಗಳ ನಿರ್ಮಾಣದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷತೆ ನೀಡಲಾಗುವುದು. ಶಿಬಿರ ಸ್ಥಳದಲ್ಲಿ 7 ನೂರಕ್ಕೂ ಹೆಚ್ಚು ದೇಶಿ ಗೋ ವಂಶದ ಸುಸಜ್ಜಿತ ಗೋಶಾಲೆ ಇದ್ದು ಅದರಲ್ಲಿ 18ಕ್ಕೂ ಹೆಚ್ಚು ವಿವಿಧ ಪ್ರಕಾರದ ಪಂಚ ಗವ್ಯ ವಸ್ತುಗಳ ಉತ್ಪಾದನೆ ನಿರಂತರ ನಡೆಯುತ್ತಿದೆ. ಅದರ ಪ್ರತ್ಯಕ್ಷ ದರ್ಶನ ಹಾಗೂ ಅನುಭವವನ್ನು ಶಿಬಿರಾರ್ಥಿಗಳು ಪಡೆಯಬಹುದು. ಪ್ರಾಯಃ ಭಾರತದ ಅತಿ ದೊಡ್ಡ ಶುದ್ಧ ಗೋಮಯದಿಂದ ತಯಾರಿಸುವ ವಿಭೂತಿ ಘಟಕ ಇದಾಗಿದೆ , ಪ್ರತಿನಿತ್ಯ ಸುಮಾರು ಏಳು ನೂರಕ್ಕೂ ಹೆಚ್ಚು ವಿಭೂತಿಗಳ ತಯಾರಿಕಾ ಘಟಕದ ಅನುಭವ ದೊರೆಯುತ್ತದೆ.
  • ಕೊಲ್ಹಾಪುರದ ಹತ್ತಿರ ಇರುವ ಕನ್ನೆರಿಯ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸಾವಯವ ಕೃಷಿ ಅನುಭವ ಪಡೆದಿರುವ  ತುಕಾರಾಮ ಪವಾರ ಇವರಿಂದ ವಿಷಮುಕ್ತ ಕೃಷಿಯ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗುವುದು. ಅಲ್ಲದೆ ಸುಮಾರು 80 ಎಕರೆಗೂ ಹೆಚ್ಚು ಪ್ರವೇಶದಲ್ಲಿ ಹರಡಿಕೊಂಡಿರುವ ವಿವಿಧ ಪ್ರಕಾರದ ವಿಷಮುಕ್ತ ಸಾವಯವ ಕೃಷಿಯ ಪ್ರಕಾರಗಳನ್ನು ನೋಡಿ ವಿಸ್ತ್ರತ ಮಾಹಿತಿ ಪಡೆಯುವ ಅವಕಾಶ ದೊರೆಯುವುದು.
  • ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ ಅತ್ಯಂತ ಒತ್ತಡ ಹಾಗೂ ಮಾನಸಿಕ ನೆಮ್ಮದಿ ಇಲ್ಲದೆ ಉದ್ಯೋಗ ಮಾಡುತ್ತಿರುವ ಯುವ ಪಡೆ ಇನ್ನೊಂದೆಡೆ. ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ನಮ್ಮ ಸ್ವಂತ ಗ್ರಾಮಗಳಲ್ಲಿಯೇ ಗೃಹ ಉದ್ಯೋಗ, ಕುಟೀರ ಉದ್ಯೋಗ ಹಾಗೂ ಗ್ರಾಮೋದ್ಯೋಗಗಳ ಮೂಲಕ ಸ್ವಾವಲಂಬಿ, ಸಮೃದ್ಧ, ಸಮಾಧಾನಕರ ಬದುಕು ಕಟ್ಟಿಕೊಂಡು ಪ್ರಕೃತಿಯೊಂದಿಗೆ ಸುಮಧುರವಾಗಿ ಬದುಕುವ ಕಲೆಯ ವಿವಿಧ ಪ್ರಕಾರಗಳನ್ನು ವಿಸ್ತೃತವಾಗಿ ಈ ಶಿಬಿರದಲ್ಲಿ ಮಂಡಿಸಲಾಗುವುದು.
  • ಪ್ರಾಕೃತಿಕ ಸಂಪನ್ಮೂಲಗಳಾದ ಗಾಳಿ, ನೀರು, ಭೂಮಿ, ಕಾಡು, ಗಿಡ-ಮರ ಪಶು-ಪಕ್ಷಿ ಇವುಗಳೆಲ್ಲದರ ದುರ್ಬಳಕೆ ಅಥವಾ ಅತಿಯಾದ ಬಳಕೆಯ ಜೀವನ ಶೈಲಿಗೆ ನಲುಗಿ ಹೋಗುತ್ತಿರುವ ಇಂದಿನ ಜೀವನ ಪದ್ಧತಿಗೆ ಬದಲಾಗಿ ಪ್ರಾಕೃತಿಕ ಸಂಪನ್ಮೂಲಗಳ ಸಂವರ್ಧನೆ ಮಾಡುತ್ತ ಪ್ರತ್ಯೇಕ ವ್ಯಕ್ತಿ ತನ್ನ ಜೀವನೋಪಾಯವನ್ನು ಹೇಗೆ ನಿರ್ಮಾಣ ಮಾಡಿಕೊಳ್ಳಬಹುದು ಎಂಬುದರ ಕುರಿತು ವಿಶೇಷ ಯೋಜನೆಯ ಬಗ್ಗೆ ಚರ್ಚೆ ಮಾಡಲಾಗುವುದು.
  • ಗ್ಲೋಬಲ್ ವಿಲೇಜ್ ಎನ್ನುವ ಚಿಂತನೆಯ ಮೂಲಕ ಕೆಲವೇ ಕೆಲವು ಬಹು ರಾಷ್ಟ್ರೀಯ ಕಂಪನಿಗಳ ಹುನ್ನಾರದಿಂದ ಸಂಪೂರ್ಣ ವಿಶ್ವ ನಲಗುತ್ತಿರುವ ಇಂದಿನ ದಿನಮಾನದಲ್ಲಿ ಸ್ವದೇಶಿ ಚಿಂತನೆಯ ಜೀವನ ಶೈಲಿ ಹಾಗೂ ಸ್ವದೇಶಿ ಪರಿಕಲ್ಪನೆಯ ನಿರ್ದಿಷ್ಟ ಕಾರ್ಯ ಯೋಜನೆ ಹೇಗಿರಬೇಕು ಎಂಬುದರ ಕುರಿತು ವಿಶೇಷ ಚರ್ಚೆ ಹಾಗೂ ಅನುಭೂತ ಪ್ರಯೋಗಗಳ ಬಗ್ಗೆ ಮಾಹಿತಿ ನೀಡಲಾಗುವುದು.
  • ಈ ಶಿಬಿರ ವೈಯಕ್ತಿಕ ಸಾಂಸ್ಥಿಕ ಹಾಗೂ ಗ್ರಾಮ ಮಟ್ಟದಲ್ಲಿ ಇಂದಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ನಾವು ಮಾಡಬೇಕಿರುವ ನಿರ್ದಿಷ್ಟ ಕಾರ್ಯ ಯೋಜನೆಯ ಬಗ್ಗೆ ಇರುವುದೇ ವಿನಹ ಇರುವ ಸಮಸ್ಯೆಗಳ ವೈಭವಿಕರಣ ಇಲ್ಲ.
  • ಕನ್ನಡ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ಇರುತ್ತದೆ.
  • ಶಿಬಿರದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ.
  • ನಾಲ್ಕು ದಿನಗಳ ಈ ಶಿಬಿರದಲ್ಲಿ ಊಟ ವಸತಿ ಹಾಗೂ ಪ್ರಶಿಕ್ಷಣ ಸಹಿತ ಪ್ರತಿ ವ್ಯಕ್ತಿಗೆ ಸಹಯೋಗರಾಶಿ 2000₹ ಇರುತ್ತದೆ. ಸಂಪರ್ಕ 9342357663 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುಧೀಂದ್ರ ದೇಶಪಾಂಡೆ ಕಲಬುರ್ಗಿ 9342357663. ತುಕಾರಾಂ ಪವಾರ್ ಕಗ್ಗೂಡ 8660629659.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ

ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…

2 hours ago

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

6 hours ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

8 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

14 hours ago

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…

14 hours ago

ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ

ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…

14 hours ago