👴ರಂಗಣ್ಣ ಎಂಬ ಅಶಿಕ್ಷಿತ, ಬಡವ ದೇವಸ್ಥಾನವೊಂದರಲ್ಲಿ 🔔ಗಂಟೆ ಹೊಡೆಯುವ ಕೆಲಸಕ್ಕೆ ಸೇರಿಕ್ಕೋಳ್ಳುತ್ತಾನೆ. ಶ್ರದ್ದೆಯಿಂದ ಆ ಕೆಲಸ ಮಾಡುತ್ತಿದ್ದ ಆತ 🔔👴’ಗಂಟೆ ರಂಗಣ್ಣ’ ಎಂದೇ ಜನಪ್ರಿಯನಾಗುತ್ತಾನೆ. ಕಾಲಾಂತರದಲ್ಲಿ ಆ ದೇವಾಲಯ ದೊಡ್ಡ ಕ್ಷೇತ್ರವಾಗಿ ಹೊರರಾಜ್ಯದವರು,ವಿದೇಶಿಗರೆಲ್ಲ ಭೇಟಿನೀಡತೊಡಗಿದರು. ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕಾರಣ ಆಡಳಿತ ಮಂಡಳಿಯ ಆದಾಯವು ಹೆಚ್ಚತೊಡಗಿತು. ಆಧುನಿಕ ಬದಲಾವಣೆಗಳು ಆದವು.
ಒಂದು ದಿನ ಆಡಳಿತ ಮಂಡಳಿಯವರು 👴ರಂಗಣ್ಣನನ್ನು ಕರೆಸಿ ‘ಆದಷ್ಟು ಬೇಗ ಇಂಗ್ಲಿಷ ಕಲಿತುಕೋ’ ಎಂದರು. ನನಗೆ ಅಕ್ಷರವೇ ಬರೋದಿಲ್ಲ, ಇಂಗ್ಲೀಷ ಹೇಗೆ ಕಲಿಯಲಿ? ಎಂದು ರಂಗಣ್ಣ ಆತಂಕ ವ್ಯಕ್ತಪಡಿಸಿದ. ಹೊರಗಿನ ಭಕ್ತರ ಸಂಖ್ಯೆ ಹೆಚ್ಚುತ್ತರುವದರಿಂದ ದೇವಸ್ತಾನದ ಪ್ರತಿಯೊಬ್ಬರು ಇಂಗ್ಲೀಷ್ ಕಲಿಯಲೇಬೇಕು ಎಂದು ತಾಕೀತು ಮಾಡಿದರು. ರಂಗಣ್ಣ ಅವರಿವರನ್ನು ಹಿಡಿದು 🔡ಇಂಗ್ಲಿಷ್ ಕಲಿಯಲು ಯತ್ನಿಸಿದರು ಒಂದಕ್ಷರವು ತಲೆಗೆ ಹತ್ತಲಿಲ್ಲ. ಪರಿಣಾಮ ಅವನನ್ನು ಕೆಲಸದಿಂದ ಕಿತ್ತೊಗೆದರು. ರಂಗಣ್ಣ ದಿಕ್ಕು ಕಾಣದೆ ದೇವಸ್ಥಾನದ ಹೊರಬೀದಿಯಲ್ಲಿ ಚಿಂತಿಸುತ್ತ ಹೊರಟ. ತಲೆ ನೋಯಿಸುತ್ತಿದ್ದುರಿಂದ☕ ಚಹಾ ಕುಡಿಯಬೇಕೆನಿಸಿತು. ಅರ್ಧ ಕಿ.ಮೀ ಬೀದಿಯ ಎರಡು ಕಡೆ ಕಾಣುತ್ತಿದ್ದಿದ್ದು 💐🍒🍇ಹೂವು-ಹಣ್ಣು, ತೆಂಗಿನಕಾಯಿ-ದೇವರ ಫೋಟೊಗಳು ಅಂಗಡಿ. ಎಲ್ಲೂ ಚಹಾ ಸಿಗದಿದ್ದಾಗ “ಅಲ್ಲಿಗೆ ಬರುವ ಲಕ್ಷಾಂತರ ಭಕ್ತರು ಚಹಕ್ಕಾಗಿ ಎಷ್ಟು ಪರದಾಡಬಹುದೆಂದು ವಾಸ್ತವದ ಅರಿವಾಯಿತು”
ಮರುದಿನ ಅದೇ ಓಣಿಯಲ್ಲಿ ಪುಟ್ಟ ☕ಚಹಾ ಅಂಗಡಿ ಪ್ರಾರಂಭಿಸಿದ. ಕ್ರಮೇಣ ಆತನ ಹೆಂಡತಿ ಸಣ್ಣಪುಟ್ಟ ತಿಂಡಿ-ತಿನಿಸು ಮಾಡಿಡತೊಡಗಿದಳು. 🏠ಗೂಡಂಗಡಿ-ಕ್ಯಾಂಟೀನಾಗಿ, ದರ್ಶಿನಿಯಾಗಿ ಮುಂದೆ ಸ್ಟಾರ್ ಹೋಟೆಲ್ಲಾಯಿತು. ಅಷ್ಟಕ್ಕೆ ನಿಲ್ಲಿಸದೇ ಹಲವೆಡೆ
ನಾಲ್ಕಾರು ಪ್ರತ್ಯೇಕ ಹೋಟೆಲ್ಲುಗಳನ್ನು ಪ್ರಾರಂಬಿಸಿ ಕಾಲಾಂತರದಲ್ಲಿ ರಾಜ್ಯದ ಪ್ರಸಿದ್ದ ಹೋಟೆಲ್ ಉದ್ಯಮಿ ಎನಿಸಿಕೊಂಡ ಒಂದು ದಿನ ಹೊರರಾಜ್ಯದ ಉದ್ಯಮಿಯೊಬ್ಬ ತನ್ನ ರಾಜ್ಯದಲ್ಲಿ 🏢ಸ್ಟಾರ್ ಹೋಟೆಲ್ ಪ್ರಾರಂಭಿಸಲು ರಂಗಣನನ್ನು ಪಾಲುದಾರನನ್ನಾಗಿ
ಮಾಡಿಕ್ಕೊಳ್ಳಲು ಬಂದ. ಮಾತುಕತೆ ನಡೆಯಿತು. ರಂಗಣ್ಣ ಒಪ್ಪಿದ. ಒಪ್ಪಂದ ಪತ್ರಕ್ಕೆ ಸಹಿಹಾಕಬೇಕಾಗಿ ಬಂದಾಗ ರಂಗಣ್ಣ ಎಡಗೈ ಹೆಬ್ಬೆಟ್ಟನ್ನು ಮುಂದುಮಾಡಿದ.
ದಿಗ್ಬ್ರಾಂತನಾದ ಎದುರಿನ ವ್ಯಕ್ತಿ ‘ಸಹಿ ಹಾಕುವಷ್ಟು ಇಂಗ್ಲೀಷ ಬರುವದಿಲ್ಲವೇ?’ ಎಂದು ಪ್ರಶ್ನಿಶಿದ. ಕನ್ನಡದಲ್ಲೇ ಬರೆಯಲು ಬಾರದ ತನಗೆ
ಇಂಗ್ಲೀಷ ಎಲ್ಲಿಂದ ಬರಬೇಕು ಎಂದು ರಂಗಣ್ಣ ಸಹಜವಾಗಿ ಉತ್ತರಿಸಿದ. ಆಗ ಎದುರಿನವ ಭಾಷೆಯೇ ಬಾರದೆ ಇಷ್ಟೆಲ್ಲಾ ಸಾಧನೆ ಮಾಡಿದ್ದಿರಿ, ನೀವೆನಾದ್ರೂ ಸರಿಯಾಗಿ ಇಂಗ್ಲೀಷ ಕಲಿತಿದ್ರೆ ದೇಶವನ್ನೆ ಆಳುತ್ತಿದ್ದಿರಿ ಎಂದು ಪ್ರಶಂಸಿಸಿದ. ರಂಗಣ್ಣ ಮೆಲ್ಲಗೆ ನಿಮ್ಮದು ತಪ್ಪು ಕಲ್ಪನೆ. ” ಒಂದೊಮ್ಮೆ ನನಗೆ ಇಂಗ್ಲೀಷ ಬಂದಿದ್ದರೆ 🏯ದೇವಸ್ತಾನದಲ್ಲಿ ಇನ್ನು ಗಂಟೆ 🔔ಬಾರಿಸುತ್ತಲೆ ಇರುತ್ತೀದ್ದೆ..
ಸಂಗ್ರಹ ಕಥೆ
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…