ಸಸ್ಯಗಳು ಔಷಧೀಯ ಗುಣಗಳನ್ನು(Medicinal plants) ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ(flower) ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ( Heart attack)ಕಾರಣ ಆಗಬಹುದೆಂದು ಅಧ್ಯಯನ ತಿಳಿಸಿಕೊಟ್ಟಿದೆ. ಫಾಕ್ಸ್‌ಗ್ಲೋವ್(Foxglove)ಹೂವಿನ ಗಿಡ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.
ಹೃದಯವು ಸಾವಿರಾರು ಹೃದಯ ಕೋಶಗಳ ಮೂಲಕ ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಮೇಲೆ ಬಲವಾದ ಪರಿಣಾಮ ಬೀರುವ ಡಿಗೋಕ್ಸಿನ್‌ನಂತಹ ಶಕ್ತಿಯುಕ್ತ ಸಂಯುಕ್ತಗಳನ್ನು ಫಾಕ್ಸ್‌ಗ್ಲೋವ್ ಹೊಂದಿದೆ.
ಕಾರ್ಡಿಯಾಕ್ ಗೈಕೋಸೈಡ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಗ್ಲೋವ್‌ಗಳು ಹೃದಯ ಕೋಶಗಳಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಪಂಪ್ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಇದು ಹೃದಯ ಗಟ್ಟಿಯಾಗಿ ಮತ್ತು ವೇಗವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆಗಳಿದೆ ಎಂದು ತಜ್ಞರು ತಿಳಿಸಿದ್ದಾರೆ. ಗುಲಾಬಿ, ನೇರಳೆ, ಬಿಳಿ ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಫಾಕ್ಸ್ ಗೋವ ಮೂಲತಃ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಈಗ ಅಮೆರಿಕದಾದ ತೋಟಗಳಲ್ಲಿ ಅರಳುವುದನ್ನು ಕಾಣಬಹುದು.
ಗಿಡಮೂಲಿಕೆ ಔಷಧದಲ್ಲಿ ಇತಿಹಾಸ ಹೊಂದಿರುವ ಪಾಕ್ಸ್ ಗ್ಲೋವ್ ಬಗ್ಗೆ ಜನಪ್ರಿಯ ಗಾದೆ ಮಾತಿದೆ. ಫಾಕ್ಸ್ ಗ್ಲೋವ್‌ನಿಂದ ಸತ್ತವರನ್ನು ಎಬ್ಬಿಸಬಹುದು ಮತ್ತು ಜೀವಂತವಾಗಿರುವವರನ್ನು ಕೊಲ್ಲಬಹುದು ಎಂದು ಹೇಳುತ್ತಾರೆ. ಹೃದಯಾಘಾತದ ಸಂದರ್ಭದಲ್ಲಿ ಇತರ ಔಷಧ ವಿಫಲವಾದಾಗ ಡಿಗೋಕ್ಸಿನ್ ಅನ್ನು ಪ್ರಾಯೋಗಿಕವಾಗಿ ಸೂಚಿಸಲಾಗುತ್ತದೆ ಎಂದು ಡಾ.ಝನ್ ವಾಂಗ್ ಹೇಳಿದ್ದಾರೆ.
– ಅಂತರ್ಜಾಲ ಮಾಹಿತಿ
An American scientist has warned that the foxglove flower plant can cause heart attacks. The heart pumps blood around the body through thousands of cardiac cells. Foxglove contains powerful compounds like digoxin that have a strong effect on the heart ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…