ದೇಶದ ಅತಿ ದೊಡ್ಡ ಸಮಸ್ಯೆ ಅಂದರೆ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ. ನೀವು ದೇಶದ ಯಾವುದೇ ಮೂಲೆಗೆ ಹೋದರೂ, ಈ ಸಮಸ್ಯೆ ಇದ್ದಿದ್ದೇ. ಅಲ್ಲಿನ ಆಯಾಯ ಸರ್ಕಾರಗಳು ಕಸ ಮುಕ್ತಗೊಳಿಸಲು ಇನ್ನಿಲ್ಲದ ಶ್ರಮ ಹಾಕಿದರೂ ಯಶಸ್ವಿಯಾಗಿಲ್ಲ. ಈ ಕಸದ ಸಮಸ್ಯೆಯಿಂದ ಬೇಸತ್ತ ಕೇರಳ ಸರ್ಕಾರ ಹೊಸ ಆಫರ್ ಒಂದನ್ನು ಅಲ್ಲಿನ ನಾಗರೀಕರಿಗೆ ನೀಡಿದೆ. ಈ ಮೂಲಕವಾದರು ರಾಜ್ಯವನ್ನು ಕಸಮುಕ್ತಗೊಳಿಸಬಹುದಾ ಎಂದು ಯೋಚಿಸಿದೆ. ಇದು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ತಂದಿರುವ ‘ಮಾಲಿನ್ಯ ಮುಕ್ತಂ ನವ ಕೇರಳಂ’ ಅಭಿಯಾನದ ಒಂದು ಭಾಗವಾಗಿದೆ.
ತ್ಯಾಜ್ಯಮುಕ್ತ ರಾಜ್ಯವನ್ನಾಗಿ ಮಾಡಲು ಕಸದ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಸರ್ಕಾರವು ನಾಗರಿಕರಿಗೆ ವಿನಂತಿಸಿದೆ. ತ್ಯಾಜ್ಯದ ಫೋಟೋ ಕಳುಹಿಸುವವರಿಗೆ ಹಣ ನೀಡುವುದಾಗಿಯೂ ಸರ್ಕಾರ ಆಫರ್ ನೀಡಿದೆ. ನೀವು ಮಾಡಬೇಕಿರುವುದು ಇಷ್ಟೇ, ಎಲ್ಲೇ ಕಸ ಕಂಡರೂ ಕಸ ಕಂಡ ತಕ್ಷಣ ಫೋಟೊ ಅಥವಾ ವಿಡಿಯೋ ತೆಗೆದು ಸರಕಾರಕ್ಕೆ ಕಳುಹಿಸಬೇಕು.
ಇಷ್ಟೇ ಅಲ್ಲದೇ, ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ತಿಗಳು ಮತ್ತು ಜಲಮೂಲಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಎಸೆಯುತ್ತಿರುವವರ ಬಗ್ಗೆ ವರದಿ ಮಾಡಲು ಸರ್ಕಾರ ಸೂಚನೆ ನೀಡಿದೆ.ಈ ಫೋಟೋ-ವೀಡಿಯೋಗಳನ್ನು ಸರ್ಕಾರ ನೀಡುವ ವಾಟ್ಸಾಪ್ ಸಂಖ್ಯೆ ಮತ್ತು ಇ-ಮೇಲ್ಗೆ ಕಳುಹಿಸಬೇಕು. ಮಾಹಿತಿದಾರರ ಹೆಸರು ಅಥವಾ ವಿವರಗಳನ್ನು ಗೌಪ್ಯವಾಗಿ ಇಡುವುದಾಗಿಯೂ ಪ್ರಕಟಣೆ ಹೊರಡಿಸಲಾಗಿದೆ.
ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…
ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…
ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …
ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ ಜುಲೈ 22 ರಂದು ಮಾವಿನಹಣ್ಣಿನ…
ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…
ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…