ಆಧುನಿಕ ಹಸುಗಳ ಹಾಲು ಹಾಲಾಹಲ, ದೇಸಿ ದನಗಳ ಹಾಲು ಅಮೃತ ಸಮಾನ ಇಂತಹ ಮಾತುಗಳು ಅಲ್ಲಲ್ಲಿ ಆಗಾಗ ಲೇಖನಗಳ ಮೂಲಕ ಭಾಷಣಗಳ ಮೂಲಕ ಕೇಳಿಬರುತ್ತವೆ. ಒಂದಷ್ಟು ಜನರಿಗೆ ಇರಿಸು ಮುರುಸಾಗಿ ಆಧುನಿಕ ಹಾಲನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಕಳೆದ ಐದು ವರ್ಷದ ಹಿಂದಿನ ವರೆಗೆ ನಾನು ಇದೇ ಸಮರ್ಥನೆಯನ್ನು ಮಾಡುತ್ತಿದ್ದೆ. ಯಾವಾಗ ಕೃಷಿ ಸಹಾಯಕರ ಸಮಸ್ಯೆ ತೀವ್ರವಾಯಿತೋ, ಆಗ ಹಸುಗಳ ಅನಾರೋಗ್ಯವು ಬೆಟ್ಟದಷ್ಟು ದೊಡ್ಡ ಸಮಸ್ಯೆಯಾಯಿತು.
ಆದರೆ, ನಾನು ನಂಬಿದ ಸಾವಯವ ಕೃಷಿಗೆ,ಸ್ವಾವಲಂಬಿ ಕೃಷಿಗೆ ಹಸುವಿನ ಗೊಬ್ಬರಕ್ಕೆ ಸಮಾನವಾದ ಬೇರೆ ಯಾವುದೂ ನನಗೆ ಕಂಡುಬರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ದೇಶಿ ಹಸು ಗಳನ್ನು ಸಾಕುವ ಕಡೆಗೆ ಮುಖ ಮಾಡಿದೆ. ದೇಶಿ ಹಸುಗಳ ಒಳಿತು-ಕೆಡುಕುಗಳ ಬಗ್ಗೆ ಆಧುನಿಕ ಹಸುಗಳ ಸಮಸ್ಯೆಯ ಬಗ್ಗೆ ನಾನು ಈಗಾಗಲೇ ಬರೆದಿರುತ್ತೇನೆ. ಆಧುನಿಕ ಹಾಲಿನ ಗುಣಮಟ್ಟದ ಬಗ್ಗೆ ನನ್ನ ತರ್ಕಕ್ಕೆ ನಿಲುಕಿದ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು ಅನಿಸಿತು…
ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಪ್ರತಿನಿತ್ಯ ಕಾಣುತ್ತದೆ. ಅಲ್ಲೆಲ್ಲಾ ಉತ್ತಮವಾದುದನ್ನೇ ಶುದ್ಧವಾದುದನ್ನೇ ಬಯಸುವ ನಾವು ತಾಯಿ ಹಾಲಿನ ನಂತರದ ಅತ್ಯಂತ ಉತ್ಕೃಷ್ಟ ಆಹಾರವಾದ ಹಾಲಿನಲ್ಲಿ ಶುದ್ಧತೆಯನ್ನು ಪರಿಗಣಿಸಬೇಡವೇ?
ಅನುದಿನವು ಒಂದಲ್ಲ ಒಂದು ಸಮಸ್ಯೆಗಳಿಂದ( ನಾನು ಈ ಹಿಂದೆ ಬರೆದಂತೆ) ಬಳಲುವ ದನಗಳ ಹಾಲು ಯಾವುದೇ ಸಮಸ್ಯೆಗಳಿಲ್ಲದೆ, ಯಾವುದೇ ಔಷಧೀಯ ಪರಿಹಾರಗಳಿಲ್ಲದೆ ಬದುಕುವ ದನಗಳ ಹಾಲಿಗೆ ಸಮವಾದೀತೇ? ಸ್ವಲ್ಪ ಬಿಸಿಲಿಗೆ ಹೋದರೂ ಏದುಸಿರು ಬಿಡುವ ಅಥವಾ ಸೂರ್ಯಾಘಾತಕ್ಕೆ ಒಳಗೊಳ್ಳುವ ದನಗಳ ಹಾಲು ಎಂತಹ ಬಿಸಿಲನ್ನಾದರೂ ಜೀರ್ಣಿಸಿಕೊಂಡು ಮೇದು ಬರುವ ದನಗಳ ಹಾಲಿಗೆ ಸಮವಾಗಬಹುದೇ?
ದೇಸಿ ದನಗಳನ್ನು ಸಾಕಿದ ಮೇಲಿನ ಅನುಭವ ಮತ್ತೆ ಮತ್ತೆ ಅದರ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.
# ಎ.ಪಿ. ಸದಾಶಿವ ಮರಿಕೆ
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…