MIRROR FOCUS

ಅಂಬಾನಿ ಪುತ್ರನ ಪ್ರೀವೆಡ್ಡಿಂಗ್‌ ಫೋಟೋಗ್ರಾಫರ್‌ ವಿವೇಕ ಗೌಡರ ಪ್ರವಾಸದ ಚಿತ್ರ ಪ್ರದರ್ಶನ ಪುತ್ತೂರಿನಲ್ಲಿ | ಪುತ್ತೂರಿನ ಪರ್ಪುಂಜದ ಸೌಗಂಧಿಕಾದಲ್ಲಿ ಮನ ಸೆಳೆವ ಚಿತ್ರಗಳು ಇವೆ ಬನ್ನಿ |

Share

ದೇಶದೆಲ್ಲೆಡೆ  ಈಗ ಸದ್ದು ಮಾಡಿದ  ಸುದ್ದಿ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರನ  ಪ್ರೀವೆಡ್ಡಿಂಗ್‌ ಕಾರ್ಯಕ್ರಮ‌. ಆದರೆ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ  ಪ್ರೀವೆಡ್ಡಿಂಗ್‌, ಮದುವೆ ಮಹೋತ್ಸವ ಕಾರ್ಯಕ್ರಮವೂ ಹಾಗೇ ಸದ್ದು ಮಾಡಿತ್ತು, ಅಂದು ಫೋಟೋಗ್ರಾಫರ್ ಆಗಿ ತೆರಳಿದ್ದ ಮಂಗಳೂರಿನ ವಿವೇಕ್‌ ಗೌಡ ಅವರು ಪರಿಸರ, ಪ್ರಯಾಣ ಸೇರಿದಂತೆ ಇತರ ಆಸಕ್ತಿಯನ್ನೂ ಹೊಂದಿದ್ದಾರೆ. ಅವರು ಕ್ಲಿಕ್ಕಿಸಿರುವ ವಿವಿಧ ಛಾಯಾಚಿತ್ರಗಳ ಪ್ರದರ್ಶನ ಪುತ್ತೂರಿನ ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯಲ್ಲಿ  ಛಾಯಾಚಿತ್ರ ಪ್ರದರ್ಶನ ” ಜರ್ನಿ” ಆರಂಭಗೊಂಡಿದೆ.

ಯುಗಾದಿ ಆಚರಣೆಯೊಂದಿಗೆ ಮಂಗಳವಾರ ಸಂಜೆ ಚಿತ್ರ ಪ್ರದರ್ಶನ ಉದ್ಘಾಟನೆಗೊಂಡಿತು.ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಪರಿಸರವಾದಿ ಹೋರಾಟಗಾರ ಕಲಾವಿದ ದಿನೇಶ ಹೊಳ್ಳ ಮತ್ತು ಶಶಿಧರ ಶೆಟ್ಟಿ ಜನಪರ ಹೋರಾಟಗಾರ ಮಂಗಳೂರು ಮತ್ತು ಉರಗ ರಕ್ಷಕ ಕಿರಣ ಉದ್ಘಾಟಿಸಿದರು.

ಚಿತ್ರ ಕಲಾವಿದ ಮತ್ತು ಪರಿಸರವಾದಿ ದಿನೇಶ ಹೊಳ್ಳ ಮಾತನಾಡಿ,  ಮಾನವರು ಸಹಜವಾಗಿ ಪರಿಸರ ದೊಂದಗಿನ ಒಡನಾಟದೊಂದಿಗೆ ಜೀವಿಸುವ ಮಹತ್ವದ ಕುರಿತು ಮಾತನಾಡಿದರು. ವಿವೇಕರ ಛಾಯಾಚಿತ್ರಗಳಲ್ಲಿ ಜೀವನ ಪ್ರೀತಿ ತುಂಬಿದೆ ಎಂದು ಶುಭ ಹಾರೈಸಿದರು.

ಅತಿಥಿ ಶಶಿಧರ ಶೆಟ್ಟಿ ಮಾತನಾಡಿ ಸೌಗಂಧಿಕಾ ಪರಿಸರದಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ಪರಿಸರಸ್ನೇಹಿ ಚಟುವಟಿಕೆಗಳು ನಡೆಯುತ್ತಿರಲಿ ಎಂದರು. ಪರಿಸರದ, ಸಮಾಜದ ನಡುವಿನ ಫೋಟೊಗಳ ಜೊತೆ ಮಾತನಾಡುವ ಮನಸುಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಉರಗ ತಜ್ಞ ಕಿರಣ್ ನಮ್ಮ ಸುತ್ತಮುತ್ತಲಿನ ಹಾವುಗಳ ಬಗ್ಗೆ  ಮಾಹಿತಿಗಳನ್ನು ನೀಡಿದರು. ಸುನಿಲ್ ಅತ್ತಾವರ ಹಾಡಿರುವ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಚಂದ್ರ ಸೌಗಂಧಿಕಾ ಪ್ರಸ್ತಾವನೆ ಮಾಡಿದರು. ಹರೀಶ್ ರಾಜಕುಮಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸೌಗಂಧಿಕಾ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನವು ಏಪ್ರಿಲ್ 28ರಂದು ಕೊನೆಯಾಗಲಿದೆ. ಆಸಕ್ತರು ಬಂದು ವೀಕ್ಷಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿವೇಕ್‌ ಗೌಡ ಅವರು ಪ್ರವಾಸ ಪ್ರಿಯರೂ ಹೌದು, ಪರಿಸರ ಪ್ರೇಮಿಯೂ ಹೌದು. ಮಾನವೀಯ ಮೌಲ್ಯಗಳನ್ನು ತಿಳಿಸುವ ಫೋಟೊಗಳನ್ನು ತೆಗೆದಿರುವ ವಿವೇಕ್‌ ಅವರು ಫೋಟೋಗ್ರಫಿಗಾಗಿಯೇ ದೇಶದ ವಿವಿದೆಡೆ ಸುತ್ತಾಡಿದ್ದಾರೆ. ಮಂಗಳೂರಿನಲ್ಲಿರುವ ವಿವೇಕ್‌ ಅವರು ದೇಶದ ವಿವಿಧ ಕಡೆಗಳಲ್ಲಿ ಪ್ರಮುಖರ ಫೋಟೊಗ್ರಫಿಯಲ್ಲೂ ಭಾಗಿಯಾಗಿದ್ದಾರೆ.

ಪರಿಸರದ ಒಡನಾಟವು ಹೆಚ್ಚು ಖುಷಿ ನೀಡುತ್ತದೆ ಎನ್ನುವ ವಿವೇಕ ಗೌಡ, ಉದ್ಯೋಗ ಹಾಗೂ ಆಸಕ್ತಿ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಆಸಕ್ತಿಗಳು ಹೆಚ್ಚು ಖುಷಿ ನೀಡುತ್ತವೆ ಎನ್ನುತ್ತಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

10 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

10 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

10 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

17 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

17 hours ago