ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದರೆ 23 ಬಾರಿ ಒಂದೇ ತಪ್ಪಾಗುವುದು ಹೇಗೆ..? ಅದು ಅಚ್ಚರಿ. ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಫಲೋಡಾ ಗ್ರಾಮದ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತರಿಗೆ ತೆರಿಗೆ ಪಾವತಿ ಮಾಡುವಂತೆ 23 ಬಾರಿ ಇಲಾಖೆಯು ನೋಟೀಸ್ ನೀಡಿದೆ. ಇದೀಗ ಈ ಸಂಗತಿ ಬಹಿರಂಗವಾಗಿದೆ.
ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತನೊಬ್ಬರಿಗೆ ಐಟಿ ನೋಟಿಸ್ ಬಂದಿದೆ. ಸುಮಾರು 23 ನೋಟಿಸ್ಗಳನ್ನು ಸ್ವೀಕರಿಸಿದ್ದು, 1.6 ಕೋಟಿ ರೂಪಾಯಿಗಳ ಬಾಕಿ ತೆರಿಗೆ ಪಾವತಿಸುವಂತೆ ಕೇಳಿದ್ದಾರೆ. ಉಪದೇಶ ತ್ಯಾಗಿ ಎಂಬ ರೈತ ಸಣ್ಣ ರೈತನಾಗಿದ್ದು, ತೆರಿಗೆ ಪಾವತಿಸಲು ಅಷ್ಟು ದೊಡ್ಡ ಮೊತ್ತದ ಹಣವಿಲ್ಲ ಎಂಬ ಕಾರಣಕ್ಕೆ ನೋಟಿಸ್ಗಳನ್ನು ಸ್ವೀಕರಿಸಿ ಆಘಾತಗೊಂಡಿದ್ದಾರೆ.
ನಾನು ಬಡ ರೈತ ಅಂತ ಆದಾಯ ತೆರಿಗೆ ಇಲಾಖೆಗೆ ತೆರಳಿ ಉಪದೇಶ್ ತ್ಯಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಅವರ ಮಾತು ಕೇಳದ ಅಧಿಕಾರಿಗಳು, ಆದಷ್ಟು ಬೇಗ ಹಣ ಕಟ್ಟುವಂತೆ ತಾಕೀತು ಮಾಡಿದ್ರಂತೆ!. ಆದಾಯ ತೆರಿಗೆ ಇಲಾಖೆ ನೋಟಿಸ್ ನೋಡಿದ ನಂತರ ನಾನು ನನ್ನ ಔಷಧಿ, ಆದಾಯ ತೆರಿಗೆ ಕಚೇರಿಗಳಿಗೆ ದಿನನಿತ್ಯ ಪ್ರಯಾಣ, ವಕೀಲರ ಶುಲ್ಕ, ಪತ್ರಗಳು ಮತ್ತು ಅಫಿಡವಿಟ್ಗಳನ್ನು ಪಡೆಯಲು 50,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಅಂತ ರೈತ ಹೇಳಿದ್ದಾರೆ.
ಐಟಿ ಅಧಿಕಾರಿಗಳು ಅವರ ಮಾತನ್ನು ಕೇಳದಿದ್ದಾಗ ರೈತ ಹೋರಾಟದ ಹಾದಿ ಹಿಡಿಯಬೇಕಾಯಿತು. ಕೊನೆಗೆ ತೆರಿಗೆ ಇಲಾಖೆ ಎದುರು ತಮ್ಮ ಗ್ರಾಮಸ್ಥರು, ಕುಟುಂಬಸ್ಥರು, ಸಂಬಂಧಿಕರೊಂದಿಗೆ ಧರಣಿ ನಡೆಸಿದರು. ಅಧಿಕಾರಿಗಳು ಕೊನೆಗೂ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೋರಿದರು.
ತ್ಯಾಗಿ ಅವರ ಬ್ಯಾಂಕ್ ಖಾತೆಯಲ್ಲಿ 4.6 ಕೋಟಿ ರೂಪಾಯಿ ವಹಿವಾಟು ನಡೆದಿರುವುದನ್ನು ಪತ್ತೆ ಹಚ್ಚಿದ ಐಟಿ ಇಲಾಖೆ ಈ ನೋಟಿಸ್ ಜಾರಿ ಮಾಡಿದೆ. ಆದರೆ, ಈ ವ್ಯವಹಾರದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ, ಹಣ ತನ್ನದಲ್ಲ ಎಂದು ತ್ಯಾಗಿ ಹೇಳಿದ್ದಾರೆ. ತಪ್ಪಿಯೂ ಅವರ ಖಾತೆಗೆ ಹಣ ವರ್ಗಾವಣೆ ಆಗಿರಬೇಕು ಎಂದರು.
ಸಮಗ್ರ ತನಿಖೆಯ ನಂತರ, ಐಟಿ ಇಲಾಖೆಯು ಬ್ಯಾಂಕ್ನಲ್ಲಿ ದಾಖಲಾತಿ ಲೋಪವಾಗಿದೆ ಎಂದು ಕಂಡುಹಿಡಿದಿದೆ. ಉದ್ದೇಶಿತ ಸ್ವೀಕರಿಸುವವರ ಬದಲಿಗೆ ಬ್ಯಾಂಕ್ ತಪ್ಪಾಗಿ ತ್ಯಾಗಿ ಅವರ ಖಾತೆಗೆ ಹಣವನ್ನು ವರ್ಗಾಯಿಸಿದೆ.ಅಂತಿಮವಾಗಿ ತಪ್ಪು ಬ್ಯಾಂಕ್ನಲ್ಲೇ ಆಗಿದೆ ಅನ್ನೋದು ಗೊತ್ತಾಯಿತು. ಇನ್ನೊಬ್ಬ ಬ್ಯಾಂಕ್ ಗ್ರಾಹಕರ ಬದಲಿಗೆ ಅವರ ಪ್ಯಾನ್ ಕಾರ್ಡ್ ವಿವರಗಳನ್ನು ನವೀಕರಿಸಿದ ಕಾರಣ ಬ್ಯಾಂಕ್ ಅಧಿಕಾರಿಗಳು ಇವರ ವಿವಿರಗಳು ತಪ್ಪಾಗಿ ಅಟ್ಯಾಚ್ ಆಗಿದೆ ಅಂತ ಬ್ಯಾಂಕ್ ಅಧಿಕಾರಿಗಳು ಕ್ಷಮೆ ಕೋರಿದ್ದಾರಂತೆ. ಸದ್ಯ ರೈತ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಘಟನೆಯು ಸರಿಯಾದ ದಾಖಲೆಗಳ ಪ್ರಾಮುಖ್ಯತೆಯ ಬಗ್ಗೆ ತೋರಿಸುತ್ತದೆ. ಹಣವನ್ನು ವರ್ಗಾವಣೆ ಮಾಡುವಾಗ ಬ್ಯಾಂಕುಗಳು ಹೆಚ್ಚು ಜಾಗರೂಕರಾಗಿರಬೇಕು.
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…