Advertisement
ಸುದ್ದಿಗಳು

ರೈತನಿಗೆ ಬಂತು ಐಟಿ ನೋಟಿಸ್…! | 1.60 ಕೋಟಿ ರೂಪಾಯಿ ತೆರಿಗೆ ಪಾವತಿಗೆ 23 ಬಾರಿ ನೋಟೀಸ್..!‌ |

Share

ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದರೆ 23 ಬಾರಿ ಒಂದೇ ತಪ್ಪಾಗುವುದು  ಹೇಗೆ..? ಅದು ಅಚ್ಚರಿ. ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಫಲೋಡಾ ಗ್ರಾಮದ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತರಿಗೆ ತೆರಿಗೆ ಪಾವತಿ ಮಾಡುವಂತೆ 23 ಬಾರಿ ಇಲಾಖೆಯು ನೋಟೀಸ್‌ ನೀಡಿದೆ. ಇದೀಗ ಈ ಸಂಗತಿ ಬಹಿರಂಗವಾಗಿದೆ.

ಉತ್ತರ ಪ್ರದೇಶದ ಮುಜಾಫರ್  ಜಿಲ್ಲೆಯ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತನೊಬ್ಬರಿಗೆ ಐಟಿ ನೋಟಿಸ್ ಬಂದಿದೆ. ಸುಮಾರು 23 ನೋಟಿಸ್‌ಗಳನ್ನು ಸ್ವೀಕರಿಸಿದ್ದು, 1.6 ಕೋಟಿ ರೂಪಾಯಿಗಳ ಬಾಕಿ ತೆರಿಗೆ ಪಾವತಿಸುವಂತೆ ಕೇಳಿದ್ದಾರೆ. ಉಪದೇಶ ತ್ಯಾಗಿ ಎಂಬ ರೈತ ಸಣ್ಣ ರೈತನಾಗಿದ್ದು, ತೆರಿಗೆ ಪಾವತಿಸಲು ಅಷ್ಟು ದೊಡ್ಡ ಮೊತ್ತದ ಹಣವಿಲ್ಲ ಎಂಬ ಕಾರಣಕ್ಕೆ ನೋಟಿಸ್‌ಗಳನ್ನು ಸ್ವೀಕರಿಸಿ ಆಘಾತಗೊಂಡಿದ್ದಾರೆ.

ನಾನು ಬಡ ರೈತ ಅಂತ ಆದಾಯ ತೆರಿಗೆ ಇಲಾಖೆಗೆ ತೆರಳಿ ಉಪದೇಶ್ ತ್ಯಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಅವರ ಮಾತು ಕೇಳದ ಅಧಿಕಾರಿಗಳು, ಆದಷ್ಟು ಬೇಗ ಹಣ ಕಟ್ಟುವಂತೆ ತಾಕೀತು ಮಾಡಿದ್ರಂತೆ!. ಆದಾಯ ತೆರಿಗೆ ಇಲಾಖೆ ನೋಟಿಸ್ ನೋಡಿದ ನಂತರ ನಾನು ನನ್ನ ಔಷಧಿ, ಆದಾಯ ತೆರಿಗೆ ಕಚೇರಿಗಳಿಗೆ ದಿನನಿತ್ಯ ಪ್ರಯಾಣ, ವಕೀಲರ ಶುಲ್ಕ, ಪತ್ರಗಳು ಮತ್ತು ಅಫಿಡವಿಟ್ಗಳನ್ನು ಪಡೆಯಲು 50,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಅಂತ ರೈತ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ

ಇಂಡೋನೇಷ್ಯಾದ ಸ್ಟಾರ್ಟ್‌ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್‌ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…

14 hours ago

ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ

ಬಿದದಿ ಎಐ ಟೌನ್‌ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…

15 hours ago

ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…

20 hours ago

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

2 days ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

2 days ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

2 days ago