ಮನೆಯಲ್ಲೊಂದು ಜಂಬೂ ನೇರಳೆ ಮರ | ಕಷ್ಟಪಟ್ಟರೆ ಫಲ ಉಂಟು

February 19, 2024
12:54 PM

ಸಾಂಪ್ರದಾಯಿಕ ಜಂಬು ನೇರಳೆಗಿಂತ(syzygium fruit) ಹಣ್ಣಾಗುವಾಗ ಕೆಂಪು ಒತ್ತು ಜಾಸ್ತಿ. ಒಳ್ಳೆಯ ಹಣ್ಣಾದರೆ ಹತ್ತಿಯಂತೆ ಮೃದು ಮತ್ತು ಬಹಳ ರುಚಿ. ಆದರೇನು ಮಾಡೋಣ? ಬೆಳೆಯುವುದು, ಹಣ್ಣಾಗುವವರೆಗೂ ಕಾದು ಕಾದು ಹಣ್ಣಾಗುವಾಗ ನಮಗೆ ಉಳಿಯುವುದು ಬಾವಲಿ(Bat) ತಿಂದದ್ದರ ಅರ್ಧ ಪಾಲು ಮಾತ್ರ. ಪ್ರಾಮಾಣಿಕವಾಗಿ ಹೇಳುವೆ ಒಂದಾದರೂ ಇಡಿಯ ಹಣ್ಣನ್ನು ಪೂರ್ಣವಾಗಿ ತಿನ್ನಲು ಸಿಕ್ಕುವುದು ಕಷ್ಟ.

Advertisement
Advertisement
Advertisement

ಈ ವರ್ಷ ಹಣ್ಣಿನ ಬೆಳೆ ಸಮೃದ್ಧ. ಸುಮಾರು 35 ಅಡಿ ಎತ್ತರದ ಮರದ ಗೆಲ್ಲು ಗೆಲ್ಲುಗಳಲ್ಲು ಹೂ ಬಿಟ್ಟಿತ್ತು ಕಾಯಿ ಕಚ್ಚಿತ್ತು. ಮರವನ್ನು ದಿನಕ್ಕೊಮ್ಮೆಯಾದರೂ ನೋಡುವ ಮೊಮ್ಮಕ್ಕಳು ಹಣ್ಣು ತಿನ್ನುವುದು ಯಾವಾಗ ಅಜ್ಜ ಎಂದು ಕೇಳುವಾಗ ಏನಾದರೂ ಉಪಾಯ ಮಾಡಲೇಬೇಕೆಂದು ಮನಸ್ಸು ಹೇಳಿತು. ಮರಕ್ಕೆ ಬಲೆಯನ್ನು ಹಾಕಿದರೆ ಬಾವಲಿ ಮತ್ತು ಪಕ್ಷಿ ಸಂಕುಲಗಳಿಂದ ಕಾಪಾಡಬಹುದು ಎಂಬ ಮಾಹಿತಿಯಂತೆ ಕಾಯಿ ಬೆಳೆಯುತ್ತಾ ಬಂದಂತೆ ಬಲೆಯನ್ನು ಮರಕ್ಕೇರಿಸುವ ಪ್ರಯತ್ನದತ್ತ ಹೊರಟೆ. ದೊಡ್ಡದಾದ ಬಲೆಯನ್ನು ಎತ್ತರಕ್ಕೆ ಏರಿಸುವಾಗಲೇ ಅದರ ಸಮಸ್ಯೆಯ ಪೂರ್ಣ ಅರಿವಾಗುವುದು.

Advertisement

ಬಲೆ ಮುದ್ದೆ ಕಟ್ಟಿಕೊಳ್ಳುವುದು, ಗಿಡದ ಗೆಲ್ಲುಗಳೆ ಬಲೆಯನ್ನು ಕಚ್ಚಿ ಹಿಡಿದುಕೊಳ್ಳುವುದು, ಅಡಿಕೆ ತೋಟದ ಬದಿಯಲ್ಲಿ ಮರ ಇರುವ ಕಾರಣ ಅಡಿಕೆ ಮರದ ಬುಡಕ್ಕೆ ಹಾಕಿದ ಕಸ ಕಡ್ಡಿಗಳೇ ಬಲೆಗೆ ಅಡ್ಡಿಯಾಗುವುದು, ಎತ್ತರಕ್ಕೆ ಕೊಂಡೊಯ್ಯಲು ಉದ್ದದ ಕೊಕ್ಕೆಯ ಸಮಸ್ಯೆ,(ಅದಕ್ಕೆ ನಾನು ಬಳಸಿದ್ದು ಕಾರ್ಬನ್ ಫೈಬರ್ ದೋಟಿ) ದೋಟಿಯ ಕ್ಲ್ಯಾಂಪ್ಗಳೇ ಬಲೆಗೆ ಸಿಕ್ಕಿಕೊಂಡು ಏರಿಸಿದ ಬಲೆ ಪುನಹ ಜಾರಿಕೊಳ್ಳುವುದು ಎಲ್ಲವೂ ಒಂದು ಅದ್ಭುತ ಅನುಭವ. ಅಂತೂ ಒಬ್ಬ ಸಹಾಯಕನ ಸಹಾಯದೊಂದಿಗೆ ಸುಮಾರು 2 ಗಂಟೆಗಳ ಹೋರಾಟದಲ್ಲಿ ಮರಕ್ಕೆ ಪೂರ್ಣವಲ್ಲದಿದ್ದರೂ, ನಮಗೆ ಧಾರಾಳ ಸಿಗುವಷ್ಟು ಪ್ರಮಾಣದ ಎತ್ತರಕ್ಕಾದರೂ ಬಲೆಯನ್ನು ಹಾಕಲು ಸಫಲನಾದೆ.

 

Advertisement

ಎರಡು ದಿನದ ನಂತರ ಬಲಿತ ಕಾಯಿ ಹಣ್ಣಾಗ ಹತ್ತಿತ್ತು. ಇಂದೀಗ ಸಮೃದ್ಧ ಫಸಲನ್ನು ಕೊಯ್ದು ಮೊಮ್ಮಕ್ಕಳೊಂದಿಗೆ ತಿನ್ನುವಾಗ ಮಾಡಿದ ಶ್ರಮ ಸಾರ್ಥಕ ಅಂತ ಅನಿಸಿತು. ಶ್ರಮವನ್ನು ಹಂಚಿಕೊಂಡರೆ ಸಂತೋಷವನ್ನು ಹಂಚಿಕೊಂಡಂತೆ ಮತ್ತು ಬೇರೆಯವರಿಗೂ ಶ್ರಮಪಡಲು ಪ್ರೋತ್ಸಾಹ ಎಂಬ ಭಾವದಲ್ಲಿ ಬರಹ ರೂಪಕ್ಕಿಳಿಸಿದೆ.

ಬರಹ :
ಎ.ಪಿ. ಸದಾಶಿವ ಮರಿಕೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ
ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ
November 21, 2024
6:59 PM
by: The Rural Mirror ಸುದ್ದಿಜಾಲ
ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ
November 21, 2024
6:53 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror