ವಾರದ ಅತಿಥಿ | ಗೋಸೇವಕ ಶ್ರೀಗುರು | ಸುದೃಢವಾದ ಭಾರತ ಆಗಬೇಕಾದರೆ ಗೋಶಾಲೆ ಆಗಬಾರದು |

May 29, 2024
7:00 AM
ಒಂದು ಗೋವಿನಿಂದ ಹಾಲನ್ನು ಹೊರತುಪಡಿಸಿ 8-10 ಸಾವಿರ ಆದಾಯ ತಿಂಗಳಿಗೆ ಮಾಡಲು ಸಾಧ್ಯವಿದೆ. ಸುಮಾರು 30 ಬಗೆಯ ಉತ್ಪನ್ನ ತಯಾರು ಆಗುತ್ತದೆ. ಎಲ್ಲಾ ವಸ್ತುಗಳೂ ಮನೆ ಬಳಕೆಗೇ ಬೇಕು.

ಗೋಸೇವೆ-ಗೋಸಾಕಾಣಿಕೆ ಎನ್ನುವುದು ಸುಲಭ ಅಲ್ಲ, ಹಾಗೆಂದು ಕಷ್ಟವೂ ಇಲ್ಲ…! ಹೀಗೆಂದು ಹೇಳುತ್ತಾರೆ ಗೋಸೇವಕ ಶ್ರೀಗುರು ಅವರು. ತುಮಕೂರು ಜಿಲ್ಲೆಯ ಚಿಕ್ಕನಾಯಕಹಳ್ಳಿಯ ಶ್ರೀ ಗುರು ಗೋಸೇವಾ ಪರಿವಾರದ ಶ್ರೀಗುರು ಅವರು ಈ ವಾರದ ದ ರೂರಲ್‌ ಮಿರರ್.ಕಾಂ ಅತಿಥಿ…..…….ಮುಂದೆ ಓದಿ…..

Advertisement
Advertisement
Advertisement

ತುಮಕೂರು ಜಿಲ್ಲೆಯ ಚಿಕ್ಕನಾಯಕಹಳ್ಳಿಯ ಶ್ರೀ ಗುರು ಗೋಸೇವಾ ಪರಿವಾರದ ಗೋಶಾಲೆಯಲ್ಲಿ ಸುಮಾರು 40 ದೇಸೀ ಗೋವುಗಳನ್ನು ಸಾಕುತ್ತಿದ್ದಾರೆ, ಸಹಜ ಕೃಷಿ ಮಾಡುತ್ತಿದ್ದಾರೆ. ಅಲ್ಲಿ ಸುಮಾರು 30 ಬಗೆಯ ಗವ್ಯ ಉತ್ಪನ್ನವನ್ನು ತಯಾರು ಮಾಡುತ್ತಾರೆ. ಹಾಲು ಬಳಕೆಗೆ ಇಲ್ಲಿ ಎರಡನೇ ಸ್ಥಾನ. ಗೋವಿನ ಸೆಗಣಿ, ಗೋಮೂತ್ರದ ಮೂಲಕ ಹಲವು ಉತ್ಪನ್ನ ತಯಾರು ಮಾಡುತ್ತಾರೆ. ಒಂದು ಗೋವಿನಿಂದ ತಿಂಗಳಿಗೆ 8-10 ಸಾವಿರ ಆದಾಯ ಪಡೆಯಬಹುದು ಎನ್ನುತ್ತಾರೆ ಅವರು. ಶ್ರೀಗುರು ಅವರ ಜೊತೆ ದ ರೂರಲ್‌ ಮಿರರ್.ಕಾಂ ಗಾಗಿ ಮಾತನಾಡಿದ ಸಾರಾಂಶ ಹೀಗಿದೆ….

Advertisement
 ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಗೋವುಗಳನ್ನು ಸಾಕಿಕೊಂಡು ಸಹಜ ಕೃಷಿ ಮಾಡುತ್ತಿದ್ದೇವೆ. ನಮಗೆ ಹಾಲನ್ನು ಹೊರತುಪಡಿಸಿ, ಸೆಗಣಿ-ಗಂಜಳವೇ ಪ್ರಮುಖವಾದ ಅಂಶಗಳು. ಇವುಗಳಿಂದ ಔಷಧಿ ತಯಾರು ಮಾಡುತ್ತೇವೆ. ಹಾಲಿನಿಂದ ಮಜ್ಜಿಗೆ-ಪಂಚಗವ್ಯ, ಪಂಚಗವ್ಯ ಗೃಥ, ನಶ್ಯ,ನಾಸಿಕ ಬಿಂದು, ಗೋಮಯ, ಬೆರಣಿ, ಧೂಪ, ದಂತಮಂಜಲ , ಭಸ್ಮ-ವಿಭೂತಿ ಹೀಗೆ 30 ಕ್ಕೂ ಅಧಿಕ ಉತ್ಪನ್ನ ತಯಾರು ಮಾಡುತ್ತೇವೆ.
ಗೋಶಾಲೆಗೆ ಬಂದವರಿಗೆ ಔಷಧಿಯನ್ನೂ ನೀಡುತ್ತೇವೆ. ಆರೋಗ್ಯ ತಪಾಸಣೆ ಮಾಡಿ, ವೈದ್ಯರ ಸಲಹೆ ಮೇರೆಗೆ ವೈದ್ಯರು ನೀಡುವ ಶಿಫಾರಸಿನ ಮೇರೆಗೆ ಔಷಧಿ ನೀಡುತ್ತೇವೆ. ಮಜ್ಜಿಗೆಯಿಂದ ತಯಾರು ಮಾಡಬಹುದಾದ ತಕ್ರಾರಿಷ್ಟಾ, ತಕ್ರಾಸವ ಇತ್ಯಾದಿಗಳನ್ನೂ ನೀಡುತ್ತೇವೆ. ಗವ್ಯ ಉತ್ಪನ್ನದಿಂದ ನೆಗಡಿಯಿಂದ ತೊಡಗಿ ಕ್ಯಾನ್ಸರ್‌ವರೆಗೂ ಔಷಧಿ ನೀಡಲಾಗುತ್ತದೆ. ಗೋವಿನ ಉತ್ಪನ್ನ, ಪಂಚಗವ್ಯದ ಜೊತೆಗೂ ಯಾವುದೇ ಔಷಧಿ ಸೇವಿಸಿದರೆ ಹೆಚ್ಚಿನ ಯಶಸ್ಸು ಸಿಗುತ್ತದೆ.ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಈಗಾಗಲೇ ವೈದ್ಯರು ಹೇಳಿದ್ದಾರೆ.

ಗವ್ಯ ಉತ್ಪನ್ನವೇ ಲಾಭದಾಯಕ. ಹೀಗಾಗಿ ಗೋಸೇವೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ನಮ್ಮಲ್ಲಿ 36-40 ಗೋವು ಇದೆ. ದೇಸೀ ತಳಿಯ ಸ್ಥಳೀಯ ಗೋವುಗಳನ್ನು ಸಾಕುತ್ತೇವೆ. ನಾವು ಹಾಲಿಗಾಗಿ ಗೋವನ್ನು ಸಾಕುತ್ತಿಲ್ಲ. ಈ ಹಿಂದೆ ರೈತರು ಗೊಬ್ಬರಕ್ಕಾಗಿ ಗೋವು ಸಾಕತ್ತಿದ್ದರು. ಹಾಗಾಗಿ ಲಾಭದ ಉದ್ದೇಶ ಇರಲಿಲ್ಲ, ಭೂಮಿಗೆ ಫಲದಾಯಕವಾದ ಅಂಶಗಳೇ ಬೇಕೆಂದು ದೇಸೀ ದನವೇ ಇರುತ್ತಿತ್ತು. ಹಾಗಾಗಿ ಗೋಸಾಕಾಣಿಗೆ ನಷ್ಟವೇ ಇರಲಿಲ್ಲ. 
ಈಗಲೂ ಗೋಸಕಾಣಿಕೆ ನಷ್ಟ ಇಲ್ಲ. ಹಾಲನ್ನು ಹಿರತುಪಡಿಸಿದರೆ, ಇತರೇ ಗವ್ಯ ಉತ್ಪನ್ನ ತಯಾರಿಯಿಂದಲೇ ಆದಾಯ ಸಾಧ್ಯ. ಗೋವಿನಿಂದಲೇ ಜೀವನ ನಿರ್ವಹಣೆ ಸಾಧ್ಯವಿದೆ. ಗೋವಿನಿಂದ ಸ್ವಾವಲಂಬಿಯಾಗಿ ಬದುಕುಬಹುದು ಎನ್ನುವುದು ಗಮನಿಸಬೇಕು.ಹಾಲು ಮಾರಾಟದ ವಸ್ತು ಅಲ್ಲ, ಸಿಕ್ಕಿದರೆ ಬಳಸಬೇಕು, ಅಲ್ಲದಿದ್ದರೆ ಹಾಲಿನ ಹೊರತಾದ ಉತ್ಪನ್ನವೇ ಬಳಕೆಯಾಗಬೇಕು. ಅದರ ಮೌಲ್ಯವರ್ಧನೆ ಆಗಬೇಕು. ಒಂದು ಗೋವಿನಿಂದ 8-10 ಸಾವಿರ ಆದಾಯ ತಿಂಗಳಿಗೆ ಮಾಡಲು ಸಾಧ್ಯವಿದೆ. ಸುಮಾರು 30 ಬಗೆಯ ಉತ್ಪನ್ನ ತಯಾರು ಆಗುತ್ತದೆ. ಎಲ್ಲಾ ವಸ್ತುಗಳೂ ಮನೆ ಬಳಕೆಗೇ ಬೇಕು.ಹೆಚ್ಚಿನವು ನಿತ್ಯವೂ ಬಳಕೆ ಮಾಡುವ ವಸ್ತುಗಳೇ ಆಗಿವೆ.ಮನೆಯ ಅಂಗಳದಲ್ಲೇ ಬಳಕೆ ಮಾಡುವ ವಸ್ತುಗಳೇ ಹೆಚ್ಚಿವೆ. ಹೀಗಾಗಿ ಮೌಲ್ಯವರ್ಧನೆ ಅಗತ್ಯವಿದೆ.
ಗೋಶಾಲೆ ಅನ್ನುವುದೇ  ಸರಿಯಾದ ಕಲ್ಪನೆ ಅಲ್ಲ. ಅಲ್ಲಿ ಒಟ್ಟಾರೆ ಒಂದು ಶಾಲೆಯಲ್ಲಿ ಗೋವು ಸಾಕುವುದು ಅಷ್ಟೇ. ಪ್ರತೀ ಮನೆಯಲ್ಲೂ ಗೋಶಾಲೆ ಬೇಕು. ಊಟದ ಕೋಣೆ, ಪೂಜೆ ಕೋಣೆ, ಮಲಗುವ ಕೋಣೆಯಂತೆಯೇ ಗೋಶಾಲೆ ಬೇಕು. ಸುದೃಢವಾದ ಭಾರತ ಆಗಬೇಕಾದರೆ ಗೋಶಾಲೆ ಆಗಬಾರದು. ನಿರುಪಯುಕ್ತ, ಅಶಕ್ತ ಗೋವುಗಳಿಗೆ ಪಾಲನಾ ಕೇಂದ್ರವಾಗಲಿ ಹೊರತು ಗೋಶಾಲೆ ಆಗಬಾರದು.  ಪ್ರತೀ ಮನೆಯಲ್ಲಿ ಗೋವು ಇರಬೇಕು. ಮನೆಯಲ್ಲಿ ಸಾಕದ ಕಾರಣ ಗೋಶಾಲೆ ಆಗಿದೆ, ಇದು ಬದಲಾಗಬೇಕು, ಪ್ರತೀ ಮನೆಯಲ್ಲಿಯೇ ಗೋಶಾಲೆ ಆಗಬೇಕು.
ಈಗ ಈ ಬಗ್ಗೆ ರೈತನಿಗೆ ಅರಿವು ಮೂಡಿಸಬೇಕು, ಹಾಲು ತೆಗೆದುಕೊಳ್ಳದೇ ಪಡೆಯಬಹುದಾದ ಲಾಭದ ಬಗ್ಗೆ ರೈತನಿಗೆ ಮಾಹಿತಿ ನೀಡಬೇಕಿದೆ. ಅದರ ಇತರ ಪ್ರಯೋಜನ, ಆದಾಯದ ಬಗ್ಗೆಯೂ ಮಾಹಿತಿ ನೀಡುವ ಕೆಲಸ ನಡೆಯಬೇಕು. ಗೋವು ನಮ್ಮ ಒಡನಾಟದಲ್ಲಿದ್ದರೆ , ಆರೋಗ್ಯವೂ ಸುಧಾರಣೆ. ಗೋವು ಒಂದು ಪ್ರಾಣಿಯಷ್ಟೇ ಅಲ್ಲ , ಅದಕ್ಕೆ ವಿಶಿಷ್ಟ ಸ್ಥಾನ ಇದೆ. ವಿಶೇಷವಾದ ಬಾಂಧವ್ಯ ಗೋವು ಹೊಂದಿದೆ.
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕ್ರೀಡಾ ಸಾಧನೆ ಮಾಡಿ ಗಮನಸೆಳೆದ ಗ್ರಾಮೀಣ ಭಾಗದ ವಿದ್ಯಾರ್ಥಿನಿ |
November 10, 2024
1:00 PM
by: The Rural Mirror ಸುದ್ದಿಜಾಲ
ಹತ್ತಿ ಬೆಳೆಗೆ ಬೆಂಬಲ ಬೆಲೆ | ಯಾದಗಿರಿಯಲ್ಲಿ 21 ಕೇಂದ್ರಗಳ ಆರಂಭ
November 10, 2024
12:00 PM
by: The Rural Mirror ಸುದ್ದಿಜಾಲ
210 ಐತಿಹಾಸಿಕ ಸ್ಮಾರಕಗಳು ರಾಜ್ಯ ಸರ್ಕಾರದ ಅಧಿಸೂಚನೆಗೆ
November 10, 2024
11:00 AM
by: The Rural Mirror ಸುದ್ದಿಜಾಲ
ದೇಶದ ಆರ್ಥಿಕ ಸ್ಥಿತಿ ಬಲವರ್ಧನೆಗೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ | ನಿರ್ಮಲಾ ಸೀತಾರಾಮನ್‌ |
November 10, 2024
10:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror