ದೇಶದಾದ್ಯಂತ ಇರುವ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿಗೆ ಈಗ ಅಯೋಧ್ಯೆ(Ayodhya) ರಾಮ ಮಂಂದಿರವೂ(Ram Mandir) ಸೇರ್ಪಡೆಗೊಂಡಿದೆ. ಸರ್ಕಾರ(Govt) ಪುಣ್ಯ ಕ್ಷೇತ್ರಗಳಿಗೆ ಹೋಗುವವರಿಗೆ ರಿಯಾಯಿತಿ ದರದಲ್ಲಿ ಯಾತ್ರೆಗಳನ್ನು(Tour) ಕೈಗೊಳ್ಳು ಅವಕಾಶಗಳನ್ನು ಕಲ್ಪಿಸಿದೆ. ಇದೀಗ ಅದೇ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ(Congress Govt) ಹೊಸ ಯೋಜನೆಯೋಂದನ್ನು ಜಾರಿ ತರಲು ಅಲೋಚಿಸಿದೆ. ಲೋಕಸಭಾ ಚುನಾವಣೆ (Loksabha Election) ವೇಳೆ ಬಿಜೆಪಿ(BJP) ಅಯೋಧ್ಯೆಗೆ ರಾಮಭಕ್ತರನ್ನು ಕರೆದುಕೊಂಡು ಹೋಗುವ ಪ್ಲ್ಯಾನ್ ರೂಪಿಸಿದೆ. ಇದಕ್ಕೆ ಠಕ್ಕರ್ ಕೊಡಲು ಈಗ ಕಾಂಗ್ರೆಸ್ ಸರ್ಕಾರವೂ ಸಜ್ಜಾಗಿದೆ.
ಈಗಾಗಲೇ ಮುಜರಾಯಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ಕಾಶಿ ರೈಲು ಯಾತ್ರೆ ಇದೆ. ರಿಯಾಯಿತಿ ದರದಲ್ಲಿ ಕಾಶಿ ಸೇರಿದಂತೆ ಅನೇಕ ಪುಣ್ಯ ಕ್ಷೇತ್ರಗಳಿಗೆ ಜನರು ಬುಕ್ ಮಾಡಿ ಹೋಗಬಹುದಾಗಿದೆ. ಈಗ ಈ ಪ್ಲ್ಯಾನ್‍ನಲ್ಲಿ ಮುಜರಾಯಿ ಇಲಾಖೆಯು ಅಯೋಧ್ಯೆಯನ್ನು ಕೂಡ ಸೇರಿಸಿಕೊಳ್ಳಲಿದೆ.
ಮಾರ್ಚ್‍ನಲ್ಲೇ ಯಾತ್ರೆ ಭಾಗ್ಯ: ಸದ್ಯ ಈಗ ವಿಪರೀತ ಚಳಿ ಇರೋದ್ರಿಂದ ಮಾರ್ಚ್‍ನಲ್ಲಿ ಮುಜರಾಯಿಯಿಂದ ಅಯೋಧ್ಯೆ ಯಾತ್ರೆ ಭಾಗ್ಯ ಸಿಗಲಿದೆ. ಈ ಬಗ್ಗೆ ಖಾಸಗಿ ವಾಹಿನಿಗೆ ಮುಜರಾಯಿ ಇಲಾಖೆ ಸಚಿವ ಸ್ಪಷ್ಟಪಡಿಸಿದ್ದು, ಜನರ ಬೇಡಿಕೆಗೆ ತಕ್ಕಂತೆ ಕಡಿಮೆ ದರದಲ್ಲಿ ಯಾತ್ರೆಯನ್ನು ಕಲ್ಪಿಸಲಿದ್ದೇವೆ. ಹೊಸ ಆಯೋಧ್ಯೆಯ ಯಾತ್ರೆಯೂ ಇದ್ರಲ್ಲಿದೆ ಅಂತೇಳಿದ್ದಾರೆ. ಒಟ್ಟಾರೆ ರಾಜಕೀಯ ಕಾರಣಕ್ಕೆ ಪರಸ್ಪರ ಠಕ್ಕರ್ ಕೊಡೋದಕ್ಕೆ ಅಯೋಧ್ಯೆ ಯಾತ್ರೆ ಜಾರಿಗೆ ತಂದ್ರೋ ಗೊತ್ತಿಲ್ಲ. ಆದರೆ ರಾಜ್ಯದ ಜನರಿಗಂತೂ ನಿಜಕ್ಕೂ ಇದು ಗುಡ್‍ನ್ಯೂಸ್ ಆಗಿದೆ.
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…