ಈ ಆಧಾರ ಕಾರ್ಡ್ ಎಲ್ಲಾದಕ್ಕೂ ಲಿಂಕ್ ಮಾಡಿ ಸಾಕಾಯ್ತು..! ಅನ್ನುವವರು ಇದ್ದಾರೆ. ಈಗ ಇನ್ನೊಂದು ಸುದ್ದಿ ಇದೆ, ಇನ್ನು ನಮ್ಮ ಮನೆಯ ನಾಯಿ ಬೆಕ್ಕು ದನಗಳಿಗೂ ಆಧಾರ್ ಲಿಂಕ್…!. ದೀಗ ಜಾನುವಾರುಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ. ಹೌದು ಇದು ಹಾಸ್ಯವೆನಿಸಿದರೂ ಸತ್ಯ.
ಫಲಾನುಭಗಳಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಹಲವು ಯೋಜನೆಗಳಲ್ಲಿ ಆಧಾರ್ ಕಡ್ಡಾಯ ಮಾಡಿದೆ. ಈಚೆಗಷ್ಟೇ ಸೈಬರ್ ಕ್ರೈಂನಲ್ಲಿ ಆಗುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಿಮ್ ಕಾರ್ಡ್ಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿದೆ.
ಶೀಘ್ರದಲ್ಲೇ ದೇಶದ ಜಾನುವಾರುಗಳಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ. ಜಾನುವಾರುಗಳು ಹಿಂದೆ ಯಾವ ರೋಗಕ್ಕೆ ತುತ್ತಾಗಿದ್ದವು, ಅದರ ಇತಿಹಾಸದ ಸಂಪೂರ್ಣ ಮಾಹಿತಿ ಸೇರಿದಂತೆ ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಈ ಆಧಾರ್ ಕಾರ್ಡ್ ಉಪಯುಕ್ತವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ತಿಳಿಸಿದ್ದಾರೆ.
ಜಾನುವಾರುಗಳಿಗೆ ಸಂಬಂಧಿಸಿದ ಡೇಟಾದ ಮೂಲಕ ಆದಷ್ಟು ಬೇಗ ರೋಗದ ಮೂಲದ ಬಗ್ಗೆ ತಿಳಿದುಕೊಳ್ಳಬೇಕು. ನಂತರ ಲಸಿಕೆ ಮತ್ತು ತಡೆಗಟ್ಟುವ ಇತರ ಮಾರ್ಗಗಳನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಯೋ ಏಷ್ಯಾ ಸಮ್ಮೇಳನದ ಅಂಗವಾಗಿ ಮೊದಲ ದಿನ ‘ಒಂದು ಆರೋಗ್ಯ ವಿಧಾನ, ಸ್ಥಳೀಯ ಜ್ಞಾನ ಮತ್ತು ನೀತಿ’ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಇದಕ್ಕೆ ಸಂಯೋಜಕರಾಗಿ ಸಿಎಂಸಿ ವೆಲ್ಲೂರು ಪ್ರಾಧ್ಯಾಪಕ ಡಾ.ಗಗನ್ ದೀಪ್ ಕಾಂಗ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಕೆ.ಪಾಲ್, ಮನುಷ್ಯರಂತೆ ಜಾನುವಾರುಗಳಿಗೂ ಆಧಾರ್ ರಚಿಸಲಾಗಿದೆ. ಶೀಘ್ರದಲ್ಲೇ ಪ್ರತಿ ಜಾನುವಾರು ಮತ್ತು ಪ್ರಾಣಿಗಳಿಗೆ ಆಧಾರ್ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು. ಈ ಮೂಲಕ ದೇಶದ ಜಾನುವಾರು, ಪ್ರಾಣಿಗಳ ವಿವರಗಳು ಸುಲಭವಾಗಿ ದೊರೆಯುತ್ತವೆ. ಅದರ ನಂತರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು.
ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…
ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…
ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…
ದಕ್ಷಿಣ ಕನ್ನಡದ ಸುಳ್ಯದಲ್ಲಿ 40.4 ಡಿಗ್ರಿ ಸೆಲ್ಸಿಯಸ್, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ …
ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ ಸಮುದಾಯ ಮಾರುಕಟ್ಟೆ…
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…