ಸುಳ್ಯ ಕಸ ಸಮಸ್ಯೆ | ಸಮಸ್ಯೆ ಪರಿಹಾರದ ಬದಲು ಉದ್ದಟತನದ ಉತ್ತರ | ನಗರ ಪಂಚಾಯತ್‌ ಅಧ್ಯಕ್ಷರ ಉತ್ತರಕ್ಕೆ ಆಮ್‌ ಆದ್ಮಿ ಪಕ್ಷ ಖಂಡನೆ |

Advertisement

ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ವರ್ಷಗಳಿಂದ ತುಂಬಿರುವ ಕಸವನ್ನು ವಿಲೇವಾರಿ ಮಾಡಬೇಕೆಂದು ನಟ ಅನಿರುದ್ದ್ ಮಾಡಿರುವ ವಿಡಿಯೋ ಮನವಿಗೆ ವಾಟ್ಸಾಪ್ ಕಾಮೆಂಟ್ ಮೂಲಕ “ಅನಿರುದ್ದ್ 10 ಲಾರಿ ಕಳುಹಿಸಿ ಕೊಡಲಿ” ಎಂದು ಸವಾಲು ಹಾಕುವ ಮೂಲಕ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ತನ್ನ ವೈಫಲ್ಯನ್ನು ಒಪ್ಪಿಕೊಂಡಿದೆ. ತಮಗೆ ನಗರದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಅದಕ್ಕಾಗಿ ಖಾಸಗಿ ವ್ಯಕ್ತಿಗಳ ಸಹಾಯ ಕೋರಿ ತಮ್ಮ ಅಸಹಾಯಕತೆಯನ್ನು ತೋರಿಸಿದೆ ಎಂದು ಸುಳ್ಯ ಕ್ಷೇತ್ರ ಆಮ್ ಆದ್ಮಿ ಪಕ್ಷ ಆರೋಪಿಸಿದೆ.

Advertisement

ಈ ಬಗ್ಗೆ ಹೇಳಿಕೆ ನೀಡಿರುವ ಸುಳ್ಯ ವಿಧಾನಸಭಾ ಕ್ಷೇತ್ರ ಸಂಚಾಲಕ, ದಕ್ಷಿಣ ಕನ್ನಡ & ಉಡುಪಿ ವೀಕ್ಷಕ,  ಅಶೋಕ್ ಎಡಮಲೆಯವರು ‘ನಟ ಅನಿರುದ್ದ್ ರವರು ಸಾಮಾಜಿಕ ಕಾಳಜಿಯ ವಿಡಿಯೋ ಹಂಚಿಕೊಂಡಿದ್ದರು. ಕಸದ ಸಮಸ್ಯೆಯನ್ನು ಪರಿಹರಿಸುವ ಬದಲು ಸಮಸ್ಯೆಯ ಗಮನ ಸೆಳೆದ ನಟನ ವಿರುದ್ಧ ಹೇಳಿಕೆ ನೀಡಿರುವ ಪಂಚಾಯತ್ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ. ನಗರ ಪಂಚಾಯತಿಗೆ 10 ಲಾರಿ ಬೇಕಿದ್ದರೆ ಅದನ್ನು ಒದಗಿಸುವ ಕಾರ್ಯವನ್ನು ಮಾಡಲು ಆಮ್ ಆದ್ಮಿ ಪಕ್ಷ ಸಿದ್ಧವಿದೆ, ಪಂಚಾಯತ್ ಅಧಿಕೃತ ಪತ್ರದ ಮೂಲಕ ಲಾರಿಯ ಅಗತ್ಯತೆ ಮತ್ತು ಕಸ ಹಾಕುವ ಸ್ಥಳವನ್ನು ಖಚಿತಪಡಿಸಬೇಕು.’ ಎಂದರು.

Advertisement
Advertisement
Advertisement

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ಕಸ ಸಮಸ್ಯೆ | ಸಮಸ್ಯೆ ಪರಿಹಾರದ ಬದಲು ಉದ್ದಟತನದ ಉತ್ತರ | ನಗರ ಪಂಚಾಯತ್‌ ಅಧ್ಯಕ್ಷರ ಉತ್ತರಕ್ಕೆ ಆಮ್‌ ಆದ್ಮಿ ಪಕ್ಷ ಖಂಡನೆ |"

Leave a comment

Your email address will not be published.


*