ದ ಕ ಜಿಲ್ಲೆಯಲ್ಲಿ ವ್ಯಾಪಾರೋದ್ಯಮಗಳಿಗೆ ಸಂಜೆ 6 ಗಂಟೆ ಬಳಿಕ ನಿರ್ಬಂಧ ಹಾಕಿರುವುದು ಸಾಮಾನ್ಯ ಜನತೆಗೆ ಆಗಿರುವ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಶಾಂತಿ ಸಭೆಗಳನ್ನು ಕರೆದು ವಾತಾವರಣವನ್ನು ತಿಳಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮಾದ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಡೆಸ್ಮಂಡ್ ಡಿಸೋಜಾ, ಸ್ಟೀಫನ್ ಪಿಂಟೋ, ರವಿಪ್ರಸಾದ್, ಆಮ್ ಆದ್ಮಿ ಪಾರ್ಟಿ ಮಂಗಳೂರು ಉತ್ತರ ಅಧ್ಯಕ್ಷ ನವಿನ್ ಚಂದ್ರ ಪೂಜಾರಿ, ರೋನಿ ಕ್ರಾಸ್ತಾ, ಬೆನೆಟ್ ಮೊರಾಸ್, ವಿದ್ಯಾ ರಾಕೇಶ್, ಪ್ರಥ್ವಿರಾಜ್, ಶಾನನ್ ಪಿಂಟೋ, ಕೆ. ಎನ್. ಶ್ರೀನಿವಾಸ್, ನವೀನ್ ಡಿಸೋಜಾ ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ದ ಕ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೊಡೆತ | ಶಾಂತಿ ಸಭೆ ನಡೆಸಲು – ಆಮ್ ಆದ್ಮಿ ಪಾರ್ಟಿ ಮನವಿ |"