ದೆಹಲಿಯ ಶಿಕ್ಷಣ ಕ್ರಾಂತಿಯನ್ನು ಸಹಿಸದ ಕೇಂದ್ರ ಸರ್ಕಾರ‌ | ಅಭಿವೃದ್ಧಿ ರಾಜಕಾರಣ ಸಹಿಸದ ಬಿಜೆಪಿ | ದೆಹಲಿ ಉಪಮುಖ್ಯಮಂತ್ರಿ ಬಂಧನ ಖಂಡನೀಯ – ಆಮ್‌ ಆದ್ಮಿ ಪಾರ್ಟಿ |

February 28, 2023
3:36 PM

ದೆಹಲಿ ಸಹಿತ ಪಂಜಾಬ್‌ನಲ್ಲಿ  ಆಮ್‌ ಆದ್ಮಿ ಪಕ್ಷವು ಅಭಿವೃದ್ಧಿ ಪರವಾಗಿರುವ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌ ಹೇಳಿದ್ದಾರೆ.

Advertisement
Advertisement
Advertisement

ಸುದ್ದಿಗಾರರೊಂದಿಗೆ ಮಾತನಾಡಿದ ವಿವೇಕಾನಂದ ಸಾಲಿನ್ಸ್‌, ದೆಹಲಿಯಲ್ಲಿ ಸಚಿವ ಮನೀಶ್‌ ಸಿಸೋಡಿಯಾ ಮೂಲಕ ಶಿಕ್ಷಣ ಕ್ರಾಂತಿ ನಡೆದಿದೆ. ಎಎಪಿ ಇಂದು ಅಭಿವೃದ್ಧಿ ರಾಜಕಾರಣದ ಮೂಲಕ ದೇಶದೆಲ್ಲೆಡೆ ಬೆಳೆಯುತ್ತಿದೆ. ಇದನ್ನು ಸಹಿಸದೆ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ, ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ದೆಹಲಿಯಲ್ಲಿ ಇದುವರೆಗೆ ಅಬಕಾರಿ ನೀತಿಯಲ್ಲಿ ಯಾವುದೃ ಅವ್ಯಹಾರ ಆಗಿಲ್ಲ. ಇನ್ನೂ ನೂತನ ಅಬಕಾರಿ ನೀತಿ ದೆಹಲಿಯಲ್ಲಿ ಜಾರಿಗೆ ತಂದಿಲ್ಲ, ಹಲವು ರಾಜ್ಯಗಳಲ್ಲಿ ಇದೇ ನಿಯಮ ಜಾರಿಯಲ್ಲಿದೆ ಎಂಬ ಅಂಶ ಗಮನಿಸಬೇಕು. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಬಂಧಿಸಲಾಗಿದೆ, ಕೀಳುಮಟ್ಟದ ರಾಜಕಾರಣ ಇದು ಎಂದು ಅವರು ಖಂಡಿಸಿದರು.

Advertisement

ಇದೇ ವೇಳೆ ಮಾತನಾಡಿದ ಎಎಪಿ ದ ಕ ಜಿಲ್ಲಾ ಅಧ್ಯಕ್ಷ ಅಶೋಕ್‌ ಎಡಮಲೆ, ಕಳೆದ ಸುಮಾರು ಒಂದು ವರ್ಷಗಳಿಂದ ಮನೀಶ್‌ ಸಿಸೋಡಿಯಾ ಕೇಂದ್ರವಾಗಿರಿಸಿ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಯಾವುದೇ ಅವ್ಯಹಾರಗಳು, ಭ್ರಷ್ಟಾಚಾರ ಪತ್ತೆಯಾಗಿಲ್ಲ. ಎಎಪಿ ದೇಶದಾದ್ಯಂತ ಅಭಿವೃದ್ಧಿ ರಾಜಕಾರಣದ ನೆಲೆಯಲ್ಲಿ ಬೆಳೆಯುತ್ತಿದೆ. ಇದರಿಂದ ಹತಾಶವಾದ ಬಿಜೆಪಿ ಮನೀಶ್‌ ಸಿಸೋಡೊಯಾರನ್ನು ಬಂಧಿಸಿದೆ, ಇದು ಖಂಡನೀಯ ಎಂದು ಹೇಳಿದರು. ಸದ್ಯ ಆಮ್‌ ಆದ್ಮಿ ಪಾಟರಿ ಒಂದೇ ಬಿಜೆಪಿಯನ್ನು ಎದುರಿಸುವ ಶಕ್ತಿ ಹೊಂದಿದೆ ಎಂದು ಅರಿತಿರುವ ಬಿಜೆಪಿಯು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಇದೀಗ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ ಎಎಪಿ ಬೆಳೆಯುತ್ತಿದೆ. ಜನರು ಎಎಪಿ ಪರವಾಗಿದ್ದಾರೆ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಶ್‌ ಸಿಸೋಡಿಯಾ ಆಗಮಿಸಿ ಇಲ್ಲಿನ ಸರ್ಕಾರಿ ಶಾಲೆಗಳ ಅವ್ಯವಸ್ಥೆಗೆ ಉತ್ತರ ನೀಡುವ ಯೋಜನೆ ಹಾಕುತ್ತಾರೆ ಎನ್ನುವ ಭಯದಿಂದಲೇ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಬಂಧಿಸಿದೆ. ಈ ಹಿಂದೆಯೂ ಇತರ ರಾಜ್ಯಗಳ ಚುನಾವಣೆಯಲ್ಲಿ ಎಎಪಿ ಪಕ್ಷದ ಮುಖಂಡರನ್ನು ಬಂಧಿಸಿ ಋಣಾತ್ಮಕವಾದ ಸಂದೇಶ ಬಿತ್ತುವ ಪ್ರಯತ್ನ ಮಾಡಿತ್ತು ಎಂದು ಎಎಪಿ ಮುಖಂಡರು ಹೇಳಿದರು.

Advertisement

ಆಮ್ಆದ್ಮಿಪಾರ್ಟಿಯ ದೆಹಲಿ ಸರ್ಕಾರದ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಸಚಿವರಾಗಿ ಮನೀಶ್‌ ಸಿಸೋಡಿಯಾ ಬರೋಬ್ಬರಿ 25,000ಕ್ಕೂ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ.  ಇಂತಹವರ ವಿರುದ್ಧ ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ಮಾಡುತ್ತಿರುವುದು ಖಂಡನೀಯ. ಗಿಡವು ಚಿವುಟಿದಷ್ಟೂ ಚಿಗುರುವಂತೆ ಆಮ್ಆದ್ಮಿಪಾರ್ಟಿ ಕೂಡ ಬಿಜೆಪಿ ತೊಂದರೆ ನೀಡಿದಷ್ಟೂ ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಎಎಪಿ ಜಿಲ್ಲಾಧ್ಯಕ್ಷ ಅಶೋಕ್‌ ಎಡಮಲೆ ಹೇಳಿದರು.

Advertisement


ಈ ಸಂದರ್ಭ  ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್ ಕಾಮತ್, ಜಿಲ್ಲಾ ಕಾರ್ಯದರ್ಶಿ ಪ್ಲೋರಿನಾ ಗೋವೇಸ್, ಹಾಗೂ ಮಾಧ್ಯಮ ಕಾರ್ಯದರ್ಶಿ ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.

Advertisement

 

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ: ಪ್ರವಾಹಕ್ಕೆ UAE ಅಲ್ಲೋಲ ಕಲ್ಲೋಲ : ನೀರಲ್ಲಿ ತೇಲುತ್ತಿರುವ ಮಾಲ್, ಏರ್ ಪೋರ್ಟ್, ಮೆಟ್ರೋ ಮಾರ್ಗ
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ… ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ? ಬಯಲಾಯ್ತು ಶಾಕಿಂಗ್ ಮಾಹಿತಿ : ಮಕ್ಕಳ ಜೀವದೊಂದಿಗೆ ಆಟವಾಡುತ್ತಿರುವ ನೆಸ್ಲೆ
April 18, 2024
3:21 PM
by: The Rural Mirror ಸುದ್ದಿಜಾಲ
ಜೆಡಿಎಸ್‌ ಅಭ್ಯರ್ಥಿ, ಬಿಜೆಪಿ ಚಿಹ್ನೆ..! : Dr ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದೇವೆ : ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು – ಹೆಚ್‌ ಡಿ ಕುಮಾರಸ್ವಾಮಿ
April 18, 2024
2:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror