ಅಧ್ಯಯನ ಪ್ರವಾಸದ ಹೆಸರಿನಲ್ಲಿ ಆಲಂಕಾರು ಸಹಕಾರಿ ಸಂಘದ ಆಡಳಿತವು ಇತ್ತೀಚೆಗೆ ಸಹಕಾರಿ ಸಂಘದ ಹಣದಲ್ಲಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಉತ್ತರ ಭಾರತಕ್ಕೆ ಪ್ರವಾಸದ ಮೋಜಿನ ಪ್ರವಾಸ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಪುತ್ತೂರು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡಬ ತಾಲೂಕಿನ ಆಲಂಕಾರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗು ಆಡಳಿತ ಮಂಡಳಿಯ ಸದಸ್ಯರು ಇತ್ತೀಚೆಗೆ ಸಹಕಾರಿ ಸಂಘದ ಹಣದಲ್ಲಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಉತ್ತರ ಭಾರತಕ್ಕೆ ಪ್ರವಾಸ ಹೋಗಿದ್ದಾರೆ. ಇದು ಸರಿಯಲ್ಲ. ಸಹಕಾರಿ ಸಂಘದ ಸದಸ್ಯರ ಹಣದಲ್ಲಿ ಇಂತಹ ಪ್ರವಾಸ ಸರಿಯಲ್ಲ. ಪ್ರವಾಸದಲ್ಲಿ ಸಹಕಾರಿ ಸಂಘದ ಸದಸ್ಯರಲ್ಲದೆ, ಅವರ ಕುಟುಂಬಸದ ಸದಸ್ಯರನ್ನೂ ಕರೆದೊಯ್ಯಲಾಗಿದೆ. ಪ್ರವಾಸದ ಹೆಸರಿನಲ್ಲಿ ಉತ್ತರ ಭಾರತದ ಪುಣ್ಯಕ್ಷೇತ್ರ ಹಾಗು ಪ್ರವಾಸಿ ತಾಣಗಳನ್ನು ಮಾತ್ರ ಸುತ್ತಾಡಿದ್ದು ಬಿಟ್ಟರೆ ಕೃಷಿಗೆ ಸಂಬಂಧಪಟ್ಟ ಯಾವುದೇ ಅಧ್ಯಯನವನ್ನು ನಡೆಸಿಲ್ಲ ಎಂದು ಆರೋಪಿಸಿದ್ದಾರೆ.
ಸಹಕಾರಿ ಸಂಘದ ವತಿಯಿಂದ ಕೃಷಿ ಕ್ಷೇತ್ರಗಳಿಗೆ, ಕೃಷಿಗೆ ಸಂಬಂಧಿತ ಚಟುವಟಿಕೆಗಳಿಗೆ, ಕೃಷಿಕರಿಗೆ, ಆ ಸಹಕಾರಿ ಸಂಘದ ಸದಸ್ಯರಿಗೆ ಅನುಕೂಲವಾಗುವ ಪ್ರವಾಸ ನಡೆಸಬೇಕೇ ಹೊರತು ಮೋಜಿನ ಪ್ರವಾಸ ಸಲ್ಲದು. ಸಹಕಾರಿ ಸಂಘದಲ್ಲಿ ರೈತರ ಹಣ ದುರುಪಯೋಗವಾಗುವುದು ಸಹಿಸಲಾಗದು ಎಂದು ಆಲಂಕಾರು ನಿವಾಸಿ , ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಜನಾರ್ಧನ ಬಂಗೇರ ಆರೋಪಿಸಿದರು. ಅನೇಕ ಸಹಕಾರಿ ಸಂಘಗಳು ಯಶಸ್ವಿಯಾಗಿ ಮುನ್ನಡೆದ ಉದಾಹರಣೆ ಇದೆ. ಅಂತಹ ಸಹಕಾರಿ ಸಂಘಗಳ ಅಧ್ಯಯನದ ಬಳಿಕ ಅನುಷ್ಟಾನಕ್ಕೆ ಪ್ರಯತ್ನಿಸಬೇಕು ಎಂದು ಜನಾರ್ಧನ ಬಂಗೇರ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಪಾರ್ಟಿಯ ತಾಲೂಕು ಅಧ್ಯಕ್ಷ ಡಾ.ವಿಷು ಕುಮಾರ್ ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…