ವಿರೋಧ ಪಕ್ಷಗಳು ನಿಷ್ಕ್ರೀಯವಾಗಿದ್ದು ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಪ್ರಭಲ ಪ್ರತಿಪಕ್ಷವಾಗಿ ಮುನ್ನುಗ್ಗುತ್ತಿದ್ದು ಜನರು ಆಮ್ ಆದ್ಮಿ ಪಕ್ಷದ ಅಭಿವೃದ್ದಿಪರ ಚಿಂತನೆಯ ಆಡಳಿತವನ್ನು ಮೆಚ್ಚಿಕೊಂಡಿದ್ದು, ರಾಷ್ಟ್ರೀಯ ಪಕ್ಷಗಳ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ ಸೋತರೂ ಸದಾ ಜನ ಸಾಮಾನ್ಯರೊಂದಿಗೆ ಬೆರೆತು ಜನರ ಎಲ್ಲಾತರದ ಕಷ್ಟಗಳಿಗೆ ಆಮ್ ಆದ್ಮಿ ಪಕ್ಷ ಸ್ಪಂದಿಸಲಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಭಿವೃದ್ದಿಯಲ್ಲಿ ಮುನ್ನುಗ್ಗುತ್ತಿರುವ ದೆಹಲಿ ಮತ್ತು ಪಂಜಾಬ್ ಇದಕ್ಕೆ ಮಾದರಿಯಾಗಿದ್ದು, ಕರ್ನಾಟಕದಲ್ಲೂ ರಾಜ್ಯದ ಅಭಿವೃದ್ದಿ , ಜನಸಾಮಾನ್ಯರಿಗೆ ಸುಲಲಿತ ಸರ್ವಿಸ್ ಗಳಿಗೆ ಆಮ್ ಆದ್ಮಿ ಪಕ್ಷ ಅದಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಸುಳ್ಯದ ಕೃಷಿಕರನ್ನು ಬಾಧಿಸುತ್ತಿರುವ ಅಡಿಕೆ ಎಲೆ ಹಳದಿ
ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ಸುಳ್ಯದ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿ
ಮಾಡಿಸುವ ನಿಟ್ಟಿನಲ್ಲಿ ಎ.ಎ.ಪಿ ಬದ್ಧವಾಗಿದ್ದು, ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರೆ ಮೊದಲ ಕೆಲಸವಾಗಿ ಇದನ್ನೇ ಮಾಡುತ್ತೇವೆ. ಇದಕ್ಕಾಗಿ ಯಾವ ಹೋರಾಟಕ್ಕೂ ನಾವು ಬದ್ಧರಾಗಿದ್ದು ಆ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಎಪಿ ಕರ್ನಾಟಕದಲ್ಲಿ ಕೆಲವು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದು ಅಧಿಕಾರಕ್ಕೆ ಬಂದ ತಕ್ಷಣ ಹಂತ ಹಂತವಾಗಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಮಾತನಾಡಿ ನಾನು ಗ್ರಾಮೀಣ ಭಾಗದಲ್ಲಿ ಸುತ್ತಿದ್ದೇನೆ. ನನ್ನ ತಂದೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಆದ ಕೆಲಸವನ್ನು ಜನರು ಈಗಲೂ ನೆನಪಿಸುತ್ತಿದ್ದಾರೆ. ಆದರೆ ಆ ಬಳಿಕದಲ್ಲಿ ಏನು ಕೆಲಸಗಳಾಗಿಲ್ಲ. ಈಗಲೂ ಕೆಲವು ಮನೆಗಳು ಸೀರೆಯ ಗೋಡೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ . ಕೆಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರಸ್ತೆ ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಳ್ಯ ಮೀಸಲು ಕ್ಷೇತ್ರ. ಹಾಗಾಗಿ ಅಭಿವೃದ್ದಿಗೆ ಇಲ್ಲಿಗೆ ಹೆಚ್ಚು ಅನುದಾನ ಬರಬೇಕು. ಆದರೆ ಇಲ್ಲಿಯವರು ಅನುದಾನ ತರುವಲ್ಲಿ ಪ್ರಯತ್ನಿಸಲೇ ಇಲ್ಲ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾ ತೊಡಗುತ್ತಾ ಇಲ್ಲಿಯ ಅಭಿವೃದ್ದಿಗಾಗಿ, ಜನರ ಕಷ್ಟಗಳಿಗೆ ಸ್ಪಂದನೆಗಾಗಿ ನಿರಂತರ ಜನ ಸಂಪರ್ಕದ ಕಾರ್ಯದಲ್ಲಿ ತೊಡಗಲು ಆಸಕ್ತಿ ಬೆಳೆದಿದೆ ಎಂದು ಹೇಳಿದರು.
ಚುನಾವಣಾ ಪ್ರಚಾರ ಉಸ್ತುವಾರಿ ಖಲಂದರ್ ಎಲಿಮಲೆ ಮಾತನಾಡಿ,ಎಲ್ಲಾ ಕಾನೂನು ಬದ್ದವಾಗಿ ಪ್ರಚಾರ ಕಾರ್ಯ ನಡೆಯುತ್ತಿದೆ ಈ ಬಾರಿ ಸುಳ್ಯದಲ್ಲಿ ಜನರು ಎಎಪಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ಇದೆ . ಜನರಿಗೆ ಬೇರೆ ಪಕ್ಷದ ಜೊತೆ ಗುರುತಿಸಿಕೊಳ್ಳಲು ಭಯಪಡುವ ವಾತಾವರಣ ರಾಷ್ಟ್ರೀಯ ಪಕ್ಷಗಳು ಮಾಡಿವೆ, ಸದ್ಯದಲ್ಲಿಯೇ ಸುಳ್ಯದ ಚಿತ್ರಣ ಬದಲಾಗಿ ಜನರ ಆಪ್ ಪಕ್ಷವನ್ನು ಒಪ್ಪಿಕೊಳ್ಳಲಿದ್ದಾರೆ ,ಮೇ.8 ರಂದು ತಾಲೂಕಿನ ಸಂಪಾಜೆಯಿಂದ ಆರಂಭಗೊಂಡು ನಗರ ವ್ಯಾಪ್ತಿ, ಹಾಗೂ ತಾಲೂಕಿನಾದ್ಯಂತ ಚುನಾವಣಾ ಪ್ರಚಾರ ಮೆರವಣಿಗೆ ನಡೆಯಲಿದೆ ನೂರಾರು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…