Advertisement

ರೈತ ಹೋರಾಟದ ಭಾರತ ಬಂದ್ ಗೆ ಆಮ್ ಆದ್ಮಿ ಪಾರ್ಟಿ ಬೆಂಬಲ

Share

ರೈತ ಹೋರಾಟದ ಭಾರತ ಬಂದ್ ಗೆ ಉಡುಪಿ ಹಾಗೂ ದ ಕ ಜಿಲ್ಲೆ ಸಂಪೂರ್ಣವಾಗಿ  ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲೆ ಬೆಂಬಲಿಸಲಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್‌ ಎಡಮಲೆ ತಿಳಿಸಿದ್ದಾರೆ.

ಭಾನುವಾರ ಉಡುಪಿ ಆಮ್ ಆದ್ಮಿ ಪಾರ್ಟಿ ಸಭೆ ನಡೆಯಿತು. ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಮಂಡಳಿ ಸದಸ್ಯರು ಹಾಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ವೀಕ್ಷಕರಾದ ಅಶೋಕ ಎಡಮಲೆ ಸಮ್ಮುಖದಲ್ಲಿ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ನಡೆದು, ಪಕ್ಷದ ಚಟುವಟಿಕೆಗಳು ಹಾಗೂ ಸಂಘಟನೆ ಬೆಳವಣಿಗೆ ಬಗ್ಗೆ ಚರ್ಚಿಸಿ ಮುಂದಿನ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯ ಆಕಾಂಕ್ಷಿಗಳನ್ನು ಗುರುತಿಸುವುದು, ಕಾಪು ವಿಧಾನಸಭಾ ಕ್ಷೇತ್ರದ ಎಎಪಿ ಪಕ್ಷದ ಸಭೆಯನ್ನು ಮುಂದಿನ ಅಕ್ಟೋಬರ್ 10 ರಂದು ನಡೆಸುವುದು ಮತ್ತು ಹೆಬ್ರಿ ಅಟೋ ಸ್ಟ್ಯಾಂಡ್ ಸಮಸ್ಯೆ ಬಗ್ಗೆ ಎಎಪಿ ನಿಯೋಗ ತೆರಳಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮೂಲಕ ಪರಿಹಾರಕ್ಕೆ ಆಗ್ರಹ ಮಾಡಲು ನಿರ್ಣಯಿಸಿತು.

ಇದೇ ವೇಳೆ ರೈತ ಹೋರಾಟದ ಭಾರತ ಬಂದ್ ಗೆ ಉಡುಪಿ ಹಾಗೂ ದ ಕ ಜಿಲ್ಲೆ ಸಂಪೂರ್ಣವಾಗಿ  ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲೆ ಬೆಂಬಲಿಸಲಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್‌ ಎಡಮಲೆ ತಿಳಿಸಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಸುರೇಶ್ ಭಂಡಾರಿ, ಸ್ಟೀಫನ್ ರಿಚರ್ಡ್, ರಮೇಶ್ ಕೋಟ್ಯಾನ್, ವಿಜಯಾನಂದ್ ಪಂಗಳ, ಹರೀಶ್ ಟಿ ಸುವರ್ಣ, ಮೋಹನ್ ಸಾಲೆಕರ್, ಹಿಲ್ಡಾ ಡಿಸೋಜ, ಮಂಜುನಾಥ್ ಭಟ್, ಒಲಿವರ್ ಡಿಸೋಜ, ಆಕರ್ಷ್, ಸವಿತ ಹಾಗೂ ಆಶ್ಲಿ ಕೊರೆನೆಲಿಯೋ ಭಾಗವಹಿಸಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

3 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

3 hours ago

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ | ಭಾರತೀಯ ಟಯರ್ ಉದ್ಯಮಕ್ಕೆ ತುರ್ತು ನೆರವಿನ ಬೇಡಿಕೆ

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…

5 hours ago

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

5 hours ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

19 hours ago