ಗುಜರಾತಿನ ಅಹಮದಾಬಾದ್ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಎಂಬವರಿಗೆ ಅಡಿಕೆ ಖರೀದಿ ವ್ಯವಹಾರದಲ್ಲಿ ಸುಮಾರು 59 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಧವಪುರದಲ್ಲಿ ಸೌರಾಷ್ಟ್ರ ಟ್ರೇಡರ್ಸ್ ಮೂಲಕ ಅಡಿಕೆ ವ್ಯವಹಾರ ನಡೆಸುತ್ತಿರುವ ಮೆಹುಲ್ ಖೈರಯ್ಯ ಅವರು ವಂಚಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 11 ತಿಂಗಳಿನಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಮೆಹುಲ್ ಖೈರಯ್ಯ ಅವರು ಅಡಿಕೆ ಖರೀದಿಸಿ ಕೂಡಲೇ ಹಣ ನೀಡುತ್ತಿದ್ದರು. ಒಟ್ಟು ಸುಮಾರು 1.5 ಕೋಟಿ ಮೌಲ್ಯದ ಅಡಿಕೆ ಖರೀದಿಸಿದ ನಂತರ ಆಗಾಗ ಹಣ ಪಾವತಿ ಮಾಡುತ್ತಿದ್ದರು. ಈಚೆಗೆ ಅಡಿಕೆ ಖರೀದಿ ಮಾಡಿದ 59 ಲಕ್ಷ ವಂಚಿಸಿ ಮುಂಬಯಿಗೆ ಪರಾರಿಯಾಗಿದ್ದಾರೆ ಎಂದು ಭರತಭಾಯ್ ಪಟೇಲ್ ದೂರಿನಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್ ನ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಹಲವು ಸಮಯಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಈಚೆಗೆ ಸುಮಾರು 11 ತಿಂಗಳುಗಳ ಹಿಂದೆ ಮುಂಬಯಿ ಮೂಲದ ಮೆಹುಲ್ ರಮೇಶ್ ಭಾಯ್ ಖೈರಯ್ಯ ಅವರ ಪರಿಚಯವಾಗಿ ಅಡಿಕೆ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಆರಂಭದಲ್ಲಿ ಅಡಿಕೆ ಸ್ಯಾಂಪಲ್ ಎಂದು ಖರೀದಿ ಮಾಡಿ ಉತ್ತಮ ರೇಟು ನೀಡಿದ್ದರು. ಇದೀಗ 6 ತಿಂಗಳಿನಿಂದ ವಂಚಿಸಿ ಪರಾರಿಯಾಗಿದ್ದಾರೆ, ಈ ಬಗ್ಗೆ ಹಣ ಪಾವತಿ ಮಾಡುವ ಭರವಸೆಯನ್ನು ಕಳೆದ ಎರಡು ತಿಂಗಳಿನಿಂದ ನೀಡಿ ಇದೀಗ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…
ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…
ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…